Advertisement
ದ.ಕ. ಜಿಲ್ಲಾ 22ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮುನ್ನುಡಿ ಬರೆಯುವಂತೆ ಸೋಮವಾರ ನಡೆದ ಅದ್ದೂರಿ ಮೆರವಣಿ ಗೆಯಲ್ಲಿ ಸೃಷ್ಟಿಸಿದ ಭಾವ ಲೋಕವಿದು. ಕೆಎಸ್‌ಎಸ್ ಕಾಲೇಜು ಬಳಿಯ ಆವರಣ ದಿಂದ ಆಕರ್ಷಕ ಮೆರವಣಿಗೆಗೆ ಬೆಳಗ್ಗೆ ಚಾಲನೆ ನೀಡಲಾಯಿತು. ಮೆರವಣಿಗೆ ಮುಖ್ಯ ರಸ್ತೆಯಲ್ಲಿ ಸಾಗಿ ಕಾಶಿಕಟ್ಟೆ ಮೂಲಕ ಬೈಪಾಸ್ ರಸ್ತೆಯಲ್ಲಿ ಸಾಗಿ ಮುಖ್ಯ ಪೇಟೆ ಮೂಲಕ ಅಂಗಡಿಗುಡ್ಡೆಯ ಕುಲ್ಕುಂದ ಶಿವರಾವ್ (ನಿರಂಜನ) ಸಭಾಂಗಣಕ್ಕೆ ತಲುಪಿತು.
Related Articles
Advertisement
ಮೆರವಣಿಗೆ ಸಮಾಪನಗೊಂಡ ಬಳಿಕ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಸಮ್ಮೇಳನ ಧ್ವಜಾರೋಹಣ ನೆರವೇರಿಸಿದರು. ಗ್ರಾ.ಪಂ. ಅಧ್ಯಕ್ಷೆ ಸುಶೀಲಾ ಹೊಸಮನೆ ರಾಷ್ಟ್ರ ಧ್ವಜರೋಹಣ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪ್ರದೀಪ ಕಲ್ಕೂರ ಪರಿಷತ್ತಿನ ಧ್ವಜಾರೋಹಣ ನೆರವೇರಿಸಿದರು.ಕುಕ್ಕೆ ಸುಬ್ರಹ್ಮಣ್ಯದಲ್ಲಿ 22ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುವ ಸ್ಥಳದ ಕೂಗಳತೆಯ ದೂರದಲ್ಲಿ ಸುಬ್ರಹ್ಮಣ್ಯ ಸ.ಉ.ಮಾ.ಹಿ. ಪ್ರಾಥಮಿಕ ಸರಕಾರಿ ಶಾಲೆ ಇದೆ. ಹೀಗಿದ್ದರೂ ಆ ಶಾಲೆಯ ಮಕ್ಕಳಿಗೆ ಸೋಮವಾರ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಅವಕಾಶ ಸಿಗಲಿಲ್ಲ. ಬೇರೆ ಶಾಲೆಗಳ ಮಕ್ಕಳು ಕನ್ನಡದ ಬಾವುಟ ಹಿಡಿದು, ಘೋಷಣೆ ಕೂಗುತ್ತ ಇದೇ ಶಾಲೆ ಎದುರಿನಲ್ಲಿ ಮೆರವಣಿಗೆಯಲ್ಲಿ ಸಾಗಿದರು. ಶಾಲೆಯ ಮಕ್ಕಳು ಕಿಟಕಿಗಳ ಮೂಲಕವೇ ಕನ್ನಡ ಹಬ್ಬವನ್ನು ಕಣ್ತುಂಬಿಕೊಂಡರು.
ಅಂತರ್ಜಾಲ ಸದ್ಬಳಕೆ ಆಗಲಿಅಂತರ್ಜಾಲವನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಂಡರೆ ಮನುಜಕುಲಕ್ಕೆ ವರದಾನ. ಹದ ಮೀರಿದರೆ ನಮ್ಮನ್ನೇ ಸುಡುವ ಭಸ್ಮಾಸುರ. ಲೇಖಕರ ಪಾಲಿಗೆ ಅಂತರ್ಜಾಲ ದೊಡ್ಡ ಗ್ರಂಥ ಭಂಡಾರ. ಮೊಗೆದರೂ ಮುಗಿಯದ ಜ್ಞಾನಸಾಗರ. ಲೇಖಕರು ಎಷ್ಟೇ ಹಳಬರಾಗಿರಲಿ, ಹೊಸ ಕಾಲಕ್ಕೆ ತಮ್ಮನ್ನು ಬದಲಾವಣೆಗೆ ತೆರೆದುಕೊಳ್ಳಬೇಕು.
ಎ.ಪಿ. ಮಾಲತಿ, ಸಮ್ಮೇಳನಾಧ್ಯಕ್ಷೆ ವಿದ್ವತ್ ಸಂಮಾನ
ವಿವಿಧ ಕ್ಷೇತ್ರದಲ್ಲಿ ಸಾಧನೆ ತೋರಿದ ಗಿರೀಶ್ ಭಾರದ್ವಾಜ್ (ಪದ್ಮಶ್ರೀ ಪುರಸ್ಕೃತರು), ಕೆ.ಇ. ರಾಧಾಕೃಷ್ಣ ( ಶಿಕ್ಷಣ ತಜ್ಞ) ವಿದ್ವಾನ್ ಕದ್ರಿ ಪ್ರಭಾಕರ ಅಡಿಗ (ಬಹುಭಾಷಾ ವಿದ್ವಾಂಸ), ಕುಡುಪು ನರಸಿಂಹ ತಂತ್ರಿ (ಆಗಮ ಪಂಡಿತ), ಪ್ರೊ| ಮಹಾಬಲ ಶೆಟ್ಟಿ ಸುಬ್ರಹ್ಮಣ್ಯ (ಶಿಕ್ಷಣ ತಜ್ಞ), ಡಾ| ಕೆ.ಎಸ್.ಎನ್. ಉಡುಪ ಸುಬ್ರಹ್ಮಣ್ಯ (ವಿದ್ವಾಂಸರು), ಎಸ್.ಕೆ. ಆನಂದ ಪುತ್ತೂರು (ವಾಸ್ತು ತಂತ್ರಜ್ಞರು) ಅವರನ್ನು ಕುವೆಂಪು ವಿ.ವಿ. ನಿವೃತ್ತ ಕುಲಪತಿ ಪ್ರೊ| ಕೆ. ಚಿದಾನಂದ ಗೌಡ ಅವರು ಸಮ್ಮಾನಿಸಿದರು. ವಿಧಾನಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಅವರು ವಿವಿಧ ಕೃತಿಗಳನ್ನು ಬಿಡುಗಡೆಗೊಳಿಸಿದರು. ಬಾಲಕೃಷ್ಣ ಭೀಮಗುಳಿ