Advertisement
ಈ ಮಧ್ಯೆ ಪಾಲಿಕೆಯ ಮೇಯರ್ ಅವರಿಗೆ ತಿಂಗಳಿಗೆ 16 ಸಾವಿರ ರೂ. ,ಉಪ ಮೇಯರ್ ಅವರಿಗೆ ತಿಂಗಳಿಗೆ 10 ಸಾವಿರ ರೂ. ಗೌರವಧನ ದೊರೆಯುತ್ತದೆ. ಮಂಗಳೂರು ಸಹಿತ ಕಲಬುರ್ಗಿ, ಬಳ್ಳಾರಿ, ಹುಬ್ಬಳ್ಳಿ-ಧಾರವಾಡ ಪಾಲಿಕೆಗಳ ಕಾರ್ಪೊರೇಟರ್‌ಗಳು ಪಾಲಿಕೆ ಆರಂಭವಾ ದಂದಿನಿಂದ 2,100 ರೂ. ಗೌರವಧನ ಪಡೆಯುತ್ತಿದ್ದರು. ಆದರೆ ಗೌರವಧನ ಹೆಚ್ಚಳ ಮಾಡಲು ಸರಕಾರಕ್ಕೆ ಒತ್ತಡ ಹೇರಿದ ಪರಿಣಾಮ 2016ರಲ್ಲಿ ಕಾರ್ಪೊರೇಟರ್‌ಗಳ ಮಾಸಿಕ ಗೌರವಧನದ ಮೊತ್ತವನ್ನು 6 ಸಾವಿರ ರೂ.ಗಳಿಗೆ ಏರಿಸಲಾಗಿತ್ತು. ಮನಪಾ ಮೇಯರ್, ಉಪ ಮೇಯರ್‌ಗೆ ಕ್ರಮವಾಗಿ 16 ಸಾವಿರ ರೂ. ಮತ್ತು 10 ಸಾವಿರ ರೂ. ಗಳಾದರೆ ಉಳಿದ 58 ಮಂದಿ ಕಾರ್ಪೊರೇಟರ್‌ಗಳಿಗೆ 6 ಸಾವಿರ ರೂ. ಮಾಸಿಕ ಗೌರವಧನವಾಗಿ ಸಿಗುತ್ತದೆ.
Related Articles
ಗೌರವಧನ ನೀಡುವಿಕೆ ವಿವಿಧ ಸ್ಥಳೀಯ ಸಂಸ್ಥೆಗಳಲ್ಲಿ ಭಿನ್ನವಾಗಿರುತ್ತದೆ. ಸರಕಾರ ನಿಗದಿಪಡಿಸಿದಂತೆ ವಾರ್ಷಿಕ 5 ಕೋಟಿ ರೂ. ಮೇಲ್ಪಟ್ಟ ವರಮಾನ ಇರುವ ನಗರಸಭೆ ಅಧ್ಯಕ್ಷರಿಗೆ 12 ಸಾವಿರ ರೂ., ಉಪಾಧ್ಯಕ್ಷರಿಗೆ 8 ಸಾವಿರ ರೂ., ಸದಸ್ಯರಿಗೆ 4 ಸಾವಿರ ರೂ. ಗೌರವಧನವಿದ್ದರೆ, 5 ಕೋಟಿ ರೂ.ಗಿಂತ ಕಡಿಮೆ ವರಮಾನ ಇರುವ ನಗರಸಭೆಗಳ ಅಧ್ಯಕ್ಷರಿಗೆ 8 ಸಾವಿರ ರೂ., ಉಪಾಧ್ಯಕ್ಷರಿಗೆ 2 ಸಾವಿರ ರೂ., ಸದಸ್ಯರಿಗೆ 2 ಸಾವಿರ ರೂ. ಗೌರವಧನ ನಿಗದಿಪಡಿಸಲಾಗಿದೆ. ಪುರಸಭೆಗಳ ಅಧ್ಯಕ್ಷರು 4,800 ರೂ., ಉಪಾಧ್ಯಕ್ಷರು 2,400 ರೂ., ಸದಸ್ಯರು 1200 ರೂ. ಮತ್ತು ಪಟ್ಟಣ ಪಂಚಾಯತ್ ಅಧ್ಯಕ್ಷರು 3,200 ರೂ., ಉಪಾಧ್ಯಕ್ಷರು 1,600 ರೂ., ಸದಸ್ಯರು 800 ರೂ. ಗೌರವಧನವನ್ನು ಮಾಸಿಕವಾಗಿ ಪಡೆಯುತ್ತಿದ್ದಾರೆ.
Advertisement
ಗೌರವಧನ ಹೆಚ್ಚಳಪರಿಷ್ಕೃತ ಆದೇಶದಂತೆ 2016ರಿಂದ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳ ಗೌರವಧನ ಹೆಚ್ಚಳವಾಗಿದ್ದು, ಪಾಲಿಕೆಯ ಸಂಪನ್ಮೂಲದಿಂದಲೇ ಭರಿಸಲಾಗುತ್ತದೆ. ಸರಕಾರ ದಿಂದ ಅನುದಾನ ಬಿಡುಗಡೆಯಾಗುವುದಿಲ್ಲ.
- ಅಜಿತ್‌ಕುಮಾರ್ ಹೆಗ್ಡೆ ಶಾನಾಡಿ, ಆಯುಕ್ತರು, ಮನಪಾ – ಧನ್ಯಾ ಬಾಳೆಕಜೆ