Advertisement
ತಮ್ಮ ಪ್ರತಿಭೆಯನ್ನು ಆನಾವರಣಗೊಳಿಸಲು ಅದೆಷ್ಟೋ ವೇದಿಕೆಗಳಿವೆ, ಅದೆಷ್ಟೋ ದಾರಿಗಳಿವೆ. ಅದ್ಯಾವುದೂ ವೇದಿಕೆಗಳೇ ಅಲ್ಲ. ಟಿಕ್ ಟಾಕ್ ಒಂದೇ ಉತ್ತಮ ವೇದಿಕೆಯೆಂದು ವಯಸ್ಸಿನ ಹಂಗಿಲ್ಲದೆ ಮೆರೆಯುತ್ತಿದ್ದಾರೆ ಜನರು. ಬೀದಿ ಬೀದಿಗಳಲ್ಲಿ ಜೋಪಡಿ ಗಳನ್ನು ಹಾಕಿಕೊಂಡು ನಾಟಕ, ನೃತ್ಯ, ಹಾಡುಗಳನ್ನು ಪ್ರದರ್ಶಿಸಿ ಅದೆಷ್ಟೋ ಪ್ರತಿಭೆಗಳು ಸಾವಿರಾರು ಜನ ಗುರುತಿಸುವಂತಹ ಸಾಧನೆ ಮಾಡಿದ್ದಾರೆ. ಅದೆಷ್ಟೋ ಜನ ಅನೇಕ ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ, ಅದೃಷ್ಟದ ಬಾಗಿಲೂ ತೆರೆದಿದೆ. ಆದರೆ, ಇದುವರೆಗೆ ಯಾರೊಬ್ಬರಿಗೂ ಟಿಕ್‌ಟಾಕ್‌ನಲ್ಲಿ ಹೊರ ಹಾಕಿದ ಪ್ರತಿಭೆಗೆ ಪ್ರಶಸ್ತಿ ದೊರತಿಲ್ಲ. ಬದಲಾಗಿ ದಿನದಿಂದ ದಿನಕ್ಕೆ ಸಾವಿನ ಬಾಗಿಲು ತೆರೆಯುತ್ತಲೇ ಇದೆ. ಇನ್ನು, ಇದೊಂದು ಮನರಂಜನೆಯ ತಾಣವಾಗಿ ಪರಿಣಮಿಸಿದ್ದು, ಕೆಲವರು ಪ್ರತಿಭೆಯೆಂದು ತಮ್ಮ ಭಾವನೆಗಳನ್ನು ಹೊರಹಾಕಲು ಇದನ್ನು ಬಳಸುತ್ತಾರೆ. ಅದರಲ್ಲಿಯೂ ದುಃಖ, ವಿರಹ ಗೀತೆಗಳು, ಡ್ಯಾನ್ಸ್, ಮೋಜು-ಮಸ್ತಿ, ಕುಸ್ತಿ, ಲವ್ ಫೇಲ್ಯೂರ್ ಹೀಗೆ ಹಲವಾರು ದೃಶ್ಯಗಳನ್ನು ಭಾವನೆಗಳ ಮೂಲಕ ಇದರಲ್ಲಿ ವ್ಯಕ್ತಪಡಿಸುತ್ತಾರೆ. ಮನೆಯಲ್ಲಿ ಹೆಣ್ಮಕ್ಕಳಾಗಲಿ, ಗಂಡು ಮಕ್ಕಳಾಗಲಿ ಇತ್ತ ಇದ್ದ ಕಡ್ಡಿಯನ್ನು ಅತ್ತ ಇಡಲು ಹೇಳಿದರೆ ಹತ್ತು ಸಲ ಹಿಂದೆಮುಂದೆ ನೋಡ್ತಾರೆ. ಅದೇ ಟಿಕ್‌ಟಾಕ್‌ನಲ್ಲಿ ಕೇವಲ ಕೆಲ ಲೈಕ್‌ಗಳಿಗಾಗಿ ಹತ್ತು ಬಿಂದಿಗೆ ನೀರು ತರಲು ತಯಾರಿರುತ್ತಾರೆ, ಬಹು ಗಾತ್ರದ ಕಲ್ಲು ಎತ್ತಲು ಹಿಂದೆಮುಂದೆ ನೋಡಲ್ಲ, ಎಷ್ಟೇ ಆಳವಿದ್ದರೂ ಪರವಾಗಿಲ್ಲ ನದಿಗೆ ಧುಮುಕಲು ಹೋಗಿ ಅದೆಷ್ಟೋ ಜನ ನೀರು ಪಾಲಾಗಿ¨ªಾರೆ. ಇವರು ಮಾದರಿಯ ಬೈಕ್ ಸ್ಟಂಟ್‌ಗೂ ಸಿದ್ಧ. ಯಾರ ಸೇವೆಗೂ ಸಿದ್ಧ. ಇತ್ತ ಕನ್ನಡದ ಬಗೆಗಿನ ಅಭಿಮಾನ ಟಿಕ್ ಟಾಕ್‌ನಲ್ಲಿ ಉಕ್ಕುವುದೇನು? ಜತೆಗೆ ದೊಡ್ಡ ದೊಡ್ಡ ಸಿನೆಮಾ ಡೈಲಾಗ್‌ಗಳೇನು? ಹೀಗೆ ಶೋಕಿಗಾಗಿ ತೋರಿಸುವ ಪ್ರತಿಭೆಗೇನೂ ಕಮ್ಮಿಯಿಲ್ಲ. ಇವುಗಳೆಲ್ಲದರ ಹಿಂದೆ ಸಾವುನೋವುಗಳು ಸಂಭವಿಸುವ ಅರಿವಿದ್ದರೂ, ಇಲ್ಲದಂತೆ ಇರುತ್ತಾರೆ.
Related Articles
Advertisement
ಆಶಿತಾ ಎಸ್. ಗೌಡಪತ್ರಿಕೋದ್ಯಮ ವಿಭಾಗ
ಮಂಗಳೂರು ವಿಶ್ವವಿದ್ಯಾನಿಲಯ, ಕೊಣಾಜೆ