ಬೆಂಗಳೂರು: ತೆಲುಗು ಟೈಟಾನ್ಸ್ ತಂಡವನ್ನು 36-31 ಅಂತರದಿಂದ ಮಣಿಸಿ ಗೆಲುವಿನ ಲಯಕ್ಕೆ ಮರಳಿದ ಬೆಂಗಳೂರು ಬುಲ್ಸ್ ಪ್ರೊ ಕಬಡ್ಡಿ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನ ಅಲಂಕರಿಸಿತು.
ಹ್ಯಾಟ್ರಿಕ್ ಸೋಲಿನಿಂದ ತತ್ತರಿಸಿದ್ದ ಬುಲ್ಸ್‌ಗೆ ಈ ಗೆಲುವು ಹೊಸ ಆತ್ಮವಿಶ್ವಾಸ ಮೂಡಿಸಿದೆ. ಇನ್ನೊಂದೆಡೆ ಟೈಟಾನ್ಸ್ 13ನೇ ಪಂದ್ಯದಲ್ಲಿ 10 ಸೋಲನುಭವಿಸಿತು.
ಬುಲ್ಸ್ ಪರ ಎಂದಿನಂತೆ ನಾಯಕ ಪವನ್ ಸೆಹ್ರಾವತ್ ಉತ್ತಮ ಪ್ರದರ್ಶನ ನೀಡಿ 12 ಅಂಕ ಕಲೆಹಾಕಿದರು. ರೈಡರ್ ಭರತ್ 7 ಅಂಕ ತಂದು ಕೊಟ್ಟರು.
ಹರ್ಯಾಣಕ್ಕೆ ಹ್ಯಾಟ್ರಿಕ್ ಜಯ
ಅತ್ಯಂತ ರೋಚಕವಾಗಿ ಸಾಗಿದ ಮೊದಲ ಪಂದ್ಯದಲ್ಲಿ ಹರ್ಯಾಣ ಸ್ಟೀಲರ್ಸ್ 36-35 ಅಂಕಗಳಿಂದ ಯುಪಿ ಯೋಧವನ್ನು ಮಣಿಸಿ ಹ್ಯಾಟ್ರಿಕ್ ಜಯ ಸಾಧಿಸಿತು. ಯೋಧ ಸ್ವಲ್ಪದರಲ್ಲೇ ಸತತ 4 ಗೆಲುವಿನ ಅವಕಾಶವನ್ನು ಕಳೆದುಕೊಂಡಿತು.
ಹರ್ಯಾಣದ ವಿನಯ್ ಕೊನೆಯ ರೈಡ್‌ಗೆ ಇಳಿಯುವಾಗ ಪಂದ್ಯ 35-35 ಸಮಬಲದಲ್ಲಿ ನೆಲೆಸಿತ್ತು. ಒಂದು ಬೋನಸ್ ಅಂಕ ತಂದಿತ್ತ ವಿನಯ್ ತಂಡದ ವಿಜಯವನ್ನು ಸಾರಿದರು. ಹರ್ಯಾಣ ಸಾಂ ಕ ಆಟದ ಮೂಲಕ ಗಮನ ಸೆಳೆದರೆ, ಯೋಧ ರೈಡರ್ ಶ್ರೀಕಾಂತ್ (10 ಅಂಕ) ಅವರನ್ನೇ ಹೆಚ್ಚಾಗಿ ನಂಬಿಕೊಂಡಿತು.