Advertisement
ಇನ್ನೊಂದೆಡೆ ಪ್ರವಾಸಿ ವಾಹನ, ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್ ಮಾಲಿಕರು ಹೋರಾಟಕ್ಕೆ ನೈತಿಕ ಬೆಂಬಲ ನೀಡಿದ್ದರೂ ವಾಹನ ಸಂಚಾರ ಸ್ಥಗಿತಗೊಳಿಸಿಲ್ಲ. ರಾಜ್ಯ ಲಾರಿ ಮಾಲಿಕರ ಸಂಘ, ರಾಜ್ಯ ಪೆಟ್ರೋಲಿಯಂ ವರ್ತಕರ ಮಹಾ ಮಂಡಳವು ಹೋರಾಟಕ್ಕೆ ಬೆಂಬಲ ನೀಡದ ಕಾರಣ ಸರಕು ಸಾಗಣೆಯಲ್ಲಿ ಹೆಚ್ಚಿನ ವ್ಯತ್ಯಯ ಉಂಟಾಗಿಲ್ಲ. ಹಾಲು, ದಿನಪತ್ರಿಕೆ, ತರಕಾರಿ, ಔಷಧ ಇತರೆ ಅಗತ್ಯ ಸರಕು, ಸೇವೆಗಳ ಪೂರೈಕೆಗೆ ಮುಷ್ಕರದಿಂದ ವಿನಾಯ್ತಿ ನೀಡಲಾಗಿದೆ. ರಾಷ್ಟ್ರವ್ಯಾಪಿ ಮುಷ್ಕರದ ಹಿನ್ನೆಲೆಯಲ್ಲಿ ರಾಜ್ಯದ ಸರಕು ಸಾಗಣೆ ದಾರರು ಪುರಭವನದ ಎದುರು ಶುಕ್ರವಾರ ಪ್ರತಿಭ ಟಿಸಿದರು. ಲಾರಿ, ಮ್ಯಾಕ್ಸಿಕ್ಯಾಬ್, ಟ್ಯಾಕ್ಸಿ ಮಾಲಿಕರು ಕೂಡ ಮುಷ್ಕರ ಬೆಂಬಲಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
Related Articles
Advertisement
ಪೆಟ್ರೋಲ್, ಡೀಸೆಲ್ ಪೂರೈಕೆ ಇರಲಿದೆ ಮುಷ್ಕರಕ್ಕೆ ಪೆಟ್ರೋಲಿಯಂ ವರ್ತಕರ ಬೆಂಬಲವನ್ನು ಯಾವ ಸಂಘಟನೆಯೂ ಕೋರಿಲ್ಲ. ಜನರಿಗೆ ಅಗತ್ಯವಾದ ವಸ್ತುವಾಗಿ ರು ವುದರಿಂದ ದಿಢೀರ್ ಸ್ಥಗಿತಗೊಳಿಸಲು ಸಾಧ್ಯ ವಿಲ್ಲ. ತೈಲ ಕಂಪೆನಿಗಳು ಹೆಚ್ಚಿನ ಪ್ರಮಾಣದಲ್ಲಿ ತೈಲ ದಾಸ್ತಾನು ಮಾಡಿಕೊ ಳ್ಳುವಂತೆ ಸೂಚಿ ಸಿವೆ. ಎಂದಿನಂತೆ ಪೆಟ್ರೋಲ್, ಡೀಸೆಲ್ ಪೂರೈಕೆ ಇರಲಿದೆ ಎಂದು ರಾಜ್ಯ ಪೆಟ್ರೋ ಲಿಯಂ ವರ್ತಕರ ಮಹಾಮಂಡಳದ ಅಧ್ಯಕ್ಷ ಎಚ್.ಎಸ್.ಮಂಜಪ್ಪ ಹೇಳಿದರು.
ಆಹಾರಧಾನ್ಯ ಪೂರೈಕೆ ಸಹಜ: ಬೆಂಗಳೂರಿನ ಎಪಿಎಂಸಿ ಮಾರುಕಟ್ಟೆಗೆ ನಿತ್ಯ 700ಕ್ಕೂ ಹೆಚ್ಚು ಲಾರಿಗಳಲ್ಲಿ ಆಹಾರಧಾನ್ಯ ಪೂರೈಕೆಯಾಗುತ್ತದೆ. ಅದರಂತೆ ಶುಕ್ರವಾರವೂ ಪೂರೈಕೆ ಸಹಜ ಸ್ಥಿತಿಯಲ್ಲಿತ್ತು. ಜತೆಗೆ ಮಾರುಕಟ್ಟೆಯಿಂದ ಇತರೆಡೆಗೆ ಆಹಾರ ಧಾನ್ಯ ಸಾಗಣೆಯಾಗುತ್ತಿದೆ. ಮುಷ್ಕರ ತೀವ್ರವಾದರೆ ಸೋಮವಾರದಿಂದ ಆಹಾರ ಧಾನ್ಯ ಪೂರೈಕೆಯಲ್ಲಿ ವ್ಯತ್ಯಯವಾಗಬಹುದು ಎಂದು ಬೆಂಗಳೂರು ಬೇಳೆಕಾಳು ವರ್ತಕರ ಸಂಘದ ಅಧ್ಯಕ್ಷ ರಮೇಶ್‌ಚಂದ್ರ ಲಹೋಟಿ ಹೇಳಿದರು.