Advertisement

ಗ್ರಾಹಕರ ಸುರಕ್ಷತೆಗಾಗಿ ಬರಲಿದೆ ಟೋಕನ್‌ ಸಿಸ್ಟಮ್‌

01:06 AM Dec 21, 2021 | Team Udayavani |

ಆನ್‌ಲೈನ್‌ ವಹಿವಾಟು ಎಂದಾಕ್ಷಣ ಗ್ರಾಹಕರ ಮನದಲ್ಲಿ ಒಂದು ಕ್ಷಣ ಮೋಸದ ಮಿಂಚು ಹರಿದು ಹೋಗುತ್ತದೆ. ಕೆಲವು ವೆಬ್‌ಸೈಟ್‌ಗಳಲ್ಲಿ ನಮ್ಮ ಕ್ರೆಡಿಟ್‌ ಮತ್ತು ಡೆಬಿಟ್‌ ಕಾರ್ಡ್‌ನ ಎಲ್ಲ  ಮಾಹಿತಿಯನ್ನು ಇದರಲ್ಲೇ ಸೇವ್‌ ಮಾಡಿರುತ್ತೇವೆ. ಕೆಲವೊಮ್ಮೆ ಈ ರೀತಿ ಸೇವ್‌ ಆಗಿರುವುದು ವಂಚಕರ ಕೈಗೆ ಸಿಗುವ ಸಾಧ್ಯತೆಯೂ ಇರುತ್ತದೆ. ಇದಕ್ಕೆ ಕಡಿವಾಣ ಹಾಕಲು ಆರ್‌ಬಿಐ 2022ರ ಜ.1ರಿಂದ ಟೋಕನೈಸೇಶನ್‌ ಎಂಬ ಹೊಸ ಪದ್ಧತಿ ಜಾರಿಗೆ ತರುತ್ತಿದೆ.

Advertisement

ಏನಿದು ಟೋಕನೈಸೇಶನ್‌?
ನಮ್ಮ ಕ್ರೆಡಿಟ್‌ ಮತ್ತು ಡೆಬಿಟ್‌ ಕಾರ್ಡ್‌ನ ಸೂಕ್ಷ್ಮ ಮಾಹಿತಿಯನ್ನು ಕೆಲವು ವಿಶಿಷ್ಟ ಪದಗುಂಚವಾಗಿ ಮಾರ್ಪಡಿಸುವುದೇ ಟೋಕನೈಸೇಶನ್‌. ಈಗಾಗಲೇ ಫ್ಲಿಪ್‌ಕಾರ್ಟ್‌, ಅಮೆಜಾನ್‌, ಝೋಮಾಟೋ, ಸ್ವಿಗ್ಗಿ ಸೇರಿದಂತೆ ಹಲವಾರು ಆನ್‌ಲೈನ್‌ ವೇದಿಕೆಗಳು ತಮ್ಮ ಗ್ರಾಹಕರಿಗೆ ನಿಮ್ಮ ಕಾರ್ಡ್‌ಗಳನ್ನು ಸೆಕ್ಯೂರ್‌ ಮಾಡಿಕೊಳ್ಳಿ, ಇಲ್ಲದಿದ್ದರೆ ಆರ್‌ಬಿಐ ನಿಯಮದ ಅನುಸಾರ ಡಿ.31ಕ್ಕೆ ನಮ್ಮ ವೇದಿಕೆಯಲ್ಲಿ ಸೇವ್‌ ಮಾಡಿರುವ ಕ್ರೆಡಿಟ್‌ ಕಾರ್ಡ್‌ ಮತ್ತು ಡೆಬಿಟ್‌ ಕಾರ್ಡ್‌ನ ಮಾಹಿತಿ ಡಿಲೀಟ್‌ ಆಗುತ್ತವೆ ಎಂದಿದೆ. ಅಂದರೆ ಪಾವತಿ ವೇಳೆ, ನಿಮ್ಮ 16 ನಂಬರ್‌ಗಳ ಕಾರ್ಡ್‌ ಸಂಖ್ಯೆ ಒಂದು ವಿಶಿಷ್ಟ ಕೋಡ್‌ ಆಗಿ ಟೋಕನ್‌ ರೂಪಕ್ಕೆ ಪರಿವರ್ತಿತವಾಗುತ್ತದೆ. ಈ ಮೂಲಕ ನಿಮ್ಮ ಕಾರ್ಡ್‌ನ ಸೂಕ್ಷ್ಮ ಸಂಗತಿಗಳನ್ನು ಸೆಕ್ಯೂರ್‌ ಮಾಡಲಾಗುತ್ತದೆ.

ಮಾಡಿಸಲೇಬೇಕಾ?
ಇದು ಸಂಪೂರ್ಣವಾಗಿ ಗ್ರಾಹಕರ ಆಯ್ಕೆಗೆ ಬಿಟ್ಟಿದ್ದು, ಆನ್‌ಲೈನ್‌ ವೇದಿಕೆಗಳಲ್ಲಿ ಕಾರ್ಡ್‌ ಮಾಹಿತಿಯನ್ನು ಸಂಗ್ರಹಿಸಿ ಇಡುವ ಮನಸ್ಸಿದ್ದರೆ ಮಾತ್ರ ಸೇವ್‌ ಮಾಡಬಹುದು. ಅಂದರೆ, ಟೋಕನೈಸೇಶನ್‌ ಆಯ್ಕೆ ಮಾಡಿಕೊಂಡರಷ್ಟೇ, ಅದರಲ್ಲಿ ಸೇವ್‌ ಮಾಡಿ ಬೇರೊಂದು ವಿಶಿಷ್ಟ ಕೋಡ್‌ ಪಡೆಯಬಹುದು. ಇಲ್ಲದಿದ್ದರೆ, ಪ್ರತಿಯೊಂದು ವಹಿವಾಟಿನ ವೇಳೆಯೂ 16 ಸಂಖ್ಯೆಗಳು ಕಾರ್ಡ್‌ ಮಾಹಿತಿ, ಕಾರ್ಡ್‌ ಎಕ್ಸ್‌ಪೈರಿ ಡೇಟ್‌ ಮತ್ತು ಸಿವಿವಿ ನಮೂದಿಸಬೇಕು. ಒಂದು ವೇಳೆ ಟೋಕನೈಸೇಶನ್‌ ಮಾಡಿಕೊಳ್ಳದಿದ್ದರೆ, ಡಿ.31ಕ್ಕೆ ಸೇವ್‌ ಆಗಿರುವ ಎಲ್ಲ ಕಾರ್ಡ್‌ಗಳ ಮಾಹಿತಿ ಡಿಲೀಟ್‌ ಆಗುತ್ತದೆ.

ತೊಂದರೆ ಆಗುತ್ತಾ?
ಇದರಿಂದ ನಷ್ಟವೇನೂ ಆಗುವುದಿಲ್ಲ. ಮಾರುಕಟ್ಟೆ ತಜ್ಞರು ಹೇಳುವ ಪ್ರಕಾರ, ಜನರಲ್ಲಿ ಸೈಬರ್‌ ಜಾಗೃತಿ ಹೆಚ್ಚಾಗುತ್ತದೆ. ಕಾರ್ಡ್‌ಗಳ ಮಾಹಿತಿ ಸೋರಿಕೆಯಾಗಬಾರದು ಎಂಬ ಉದ್ದೇಶದಿಂದಲೇ ಪ್ರತೀ ಬಾರಿಯೂ 16 ನಂಬರ್‌ಗಳ ಮಾಹಿತಿಯನ್ನು ನಮೂದಿಸುತ್ತಾರೆ. ಇದರಿಂದ ಆನ್‌ಲೈನ್‌ ವಹಿವಾಟಿನ

ಮೇಲೆ ಅಡ್ಡಪರಿಣಾಮ ಬೀರುವುದಿಲ್ಲ. ಆದರೆ ಸೇವ್‌ ಆಗಿರುವ ಕಾರ್ಡ್‌ಗಳನ್ನು ಟೋಕನೈಸೇಶನ್‌ಗೆ ವರ್ಗಾಯಿಸುವ ಪ್ರಕ್ರಿಯೆ ವೇಳೆಯಲ್ಲಿ ಕೊಂಚ ತೊಡಕಾಗಬಹುದು ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next