Advertisement

ಉಪರಾಷ್ಟ್ರಪತಿಗಳನ್ನು ಮತ್ತೆ ಅಣಕಿಸಿದ ಟಿಎಂಸಿ ಸಂಸದ!

11:16 PM Dec 25, 2023 | Team Udayavani |

ಹೊಸದಿಲ್ಲಿ/ಕೋಲ್ಕತಾ: ಉಪರಾಷ್ಟ್ರಪತಿ ಮತ್ತು ರಾಜ್ಯಸಭೆ ಸಭಾಪತಿ ಜಗದೀಪ್‌ ಧನ್‌ಕರ್‌ಅವರನ್ನು ಮಿಮಿಕ್ರಿ ಮಾಡಿ ವಿವಾದಕ್ಕೆ ಒಳಗಾಗಿದ್ದ ಟಿಎಂಸಿ ನಾಯಕ ಕಲ್ಯಾಣ್‌ ಬ್ಯಾನರ್ಜಿ ಮತ್ತೆ ಅದೇ ಕೃತ್ಯವೆಸಗಿದ್ದಾರೆ. “ಮಿಮಿಕ್ರಿ ಎನ್ನುವುದು ಕಲೆ. ನಾನು ಇನ್ನೂ ಸಾವಿರ ಬಾರಿ ಉಪರಾಷ್ಟ್ರಪತಿಗಳನ್ನು ಅಣಕಿಸುವೆ” ಎಂದು ಸವಾಲನ್ನೂ ಹಾಕಿ, ಉದ್ಧಟತನ ಮೆರೆದಿದ್ದಾರೆ.

Advertisement

ಇದೀಗ ಪಶ್ಚಿಮ ಬಂಗಾಲದ ಸೆರ್ಮಾರ್‌ಪುರದಲ್ಲಿ ಆಯೋಜಿಸಲಾಗಿದ್ದ ಕಾರ್ಯ ಕ್ರಮದಲ್ಲಿ ಮತ್ತೆ ರಾಜ್ಯಸಭೆ ಸಭಾಪತಿಗಳನ್ನು ಅಣಕವಾಡಿದ್ದಾರೆ. “ಇದೊಂದು ಮಿಮಿಕ್ರಿ. ಒಂದು ಬಾರಿ ಏಕೆ? ಅಗತ್ಯ ಬಿದ್ದರೆ ನಾನು ಸಾವಿರ ಬಾರಿ ಅವರನ್ನು ಅಣಕ ಮಾಡುತ್ತೇನೆ” ಸವಾಲನ್ನೂ ಹಾಕಿದ್ದಾರೆ. “ನನಗೆ ಮೂಲಭೂತ ಹಕ್ಕುಗಳಿವೆ. ನಾನು ಮಾಡಿದ್ದು ತಪ್ಪಾದರೆ ಜೈಲಿಗೆ ಕೂಡ ಹಾಕಿ. ನನ್ನ ನಿಲುವಿನಿಂದ ಹಿಂದೆ ಸರಿಯುವುದೇ ಇಲ್ಲ” ಎಂದಿದ್ದಾರೆ.

ಸಂಸತ್‌ ಭವನದಲ್ಲಿ ಡಿ.13ರಂದು ಭದ್ರತಾ ಲೋಪ ವಿಚಾರಕ್ಕೆ ಸಂಬಂಧಿಸಿದಂತೆ ಅಮಾನತುಗೊಂಡ ಸಂಸದರಲ್ಲಿ ಟಿಎಂಸಿ ನಾಯಕ ಕಲ್ಯಾಣ್‌ ಬ್ಯಾನರ್ಜಿ ಕೂಡ ಒಬ್ಬರಾಗಿದ್ದರು. ಅಮಾನತು ಖಂಡಿಸಿ ಸಂಸತ್‌ ಹೊರಭಾಗದಲ್ಲಿ ಪ್ರತಿಭಟನೆ ನಡೆಸುವ ವೇಳೆ, ಉಪರಾಷ್ಟ್ರಪತಿ ಮತ್ತು ರಾಜ್ಯಸಭೆ ಸಭಾಪತಿ ಜಗದೀಪ್‌ ಧನ್‌ಕರ್‌ ಅವರನ್ನು ಅಣಕಿಸಿ, ವಿವಾದ ಮೈಮೇಲೆ ಎಳೆದುಕೊಂಡಿದ್ದರು. ಅದನ್ನು ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡದ್ದು ಕೂಡ ಎನ್‌ಡಿಎ ನಾಯಕ ಆಕ್ರೋಶಕ್ಕೆ ಕಾರಣವಾಗಿತ್ತು. ಉಪರಾಷ್ಟ್ರಪತಿ ಜಗದೀಪ್‌ ಧನ್‌ಕರ್‌ ಕೂಡ ವರ್ತನೆಯನ್ನು ಆಕ್ಷೇಪಿಸಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next