Advertisement

ಕಾರ್ಬನ್‌ ಕರಗಿದ ಸಮಯ

07:39 AM May 13, 2020 | mahesh |

ಮಾರ್ಚ್‌ ಮೂರನೇ ವಾರದಿಂದ ಆರಂಭವಾಗಿ ಈ ತನಕ, ಭಾರತದ ರಸ್ತೆಗಳ ಮೇಲಿನ ಭಾರ ಕಡಿಮೆಯಾಗಿದೆ. ದೊಡ್ಡ ಟ್ರಕ್‌ಗಳಿಂದ ಹಿಡಿದು ಸಣ್ಣ ಸ್ಕೂಟರ್‌ವರೆಗೆ ಅಲ್ಲೊಂದು, ಇಲ್ಲೊಂದು ವಾಹನಗಳು ಮಾತ್ರ ರಸ್ತೆಗಿಳಿದಿವೆ. ಕಾರ್ಖಾನೆಗಳೂ ಸ್ತಬ್ದವಾಗಿವೆ. ಹೀಗಾಗಿ, ಕಳೆದ ನಾಲ್ಕು ದಶಕಗಳಲ್ಲೇ ಮೊದಲ ಬಾರಿ ದೇಶದಲ್ಲಿ ಕಾರ್ಬನ್‌ ಮಾಲಿನ್ಯ ಪ್ರಮಾಣ ಕುಸಿದಿದೆ ಎಂದು ವಿದ್ಯುತ್‌ ಮತ್ತು ಸ್ವಚ್ಛ ಗಾಳಿ ಕುರಿತ ಸಂಶೋಧನಾ ಕೇಂದ್ರದ ಸಂಶೋಧಕರು ತಿಳಿಸಿದ್ದಾರೆ. ಕಲ್ಲಿದ್ದಲು, ತೈಲ ಹಾಗೂ ಕಾರ್ಬನ್‌ ಎಂಬ ಮೂರು ವಿಭಾಗಗಳಲ್ಲಿ ಮಾಲಿನ್ಯ ಕುಸಿತದ ಅಧ್ಯಯನ ನಡೆಸಲಾಗಿದೆ.

Advertisement

ಮಾಲಿನ್ಯ ಕುಸಿತಕ್ಕೆ ಕಾರಣವೇನು?
ಕಲ್ಲಿದ್ದಲು ಬಳಸಿ ವಿದ್ಯುತ್‌ ಉತ್ಪಾದನೆ, ಕಚ್ಚಾ ತೈಲ, ಕಬ್ಬಿಣ ಉತ್ಪಾದನೆ ಕುಸಿತ ವಾಹನಗಳು, ಕಾರ್ಖಾನೆಗಳು ಸೂಸುವ ಹೊಗೆಗೆ ಲಾಕ್‌ಡೌನ್‌ ಕಡಿವಾಣ

30 ಮಿ.ಟನ್‌- ಮಾರ್ಚ್‌ನಲ್ಲಿ ಇಂಗಾಲದ ಡೈ ಆಕ್ಸೈಡ್‌ ಮಾಲಿನ್ಯದಲ್ಲಾದ ಕುಸಿತ
6.4% ಮರುಬಳಕೆ ಮಾಡಬಹುದಾದ ಇಂಧನ ಉತ್ಪಾದನೆಯಲ್ಲಾದ ಹೆಚ್ಚಳ
27% ಮಾರ್ಚ್‌ನಲ್ಲಿ ಕಲ್ಲಿದ್ದಲು ಆಮದು ಕುಸಿತ
5.5% ನೈಸರ್ಗಿಕ ಅನಿಲ ಬಳಕೆ ಪ್ರಮಾಣದಲ್ಲಾದ ಏರಿಕೆ
4.3% ಕಲ್ಲಿದ್ದಲು ಮಾರಾಟದ ಇಳಿಕೆ
18% ಮಾರ್ಚ್‌ ವೇಳೆ ತೈಲ ಬಳಕೆ ಪ್ರಮಾಣದಲ್ಲಾದ ಇಳಿಕೆ
5.9% ಕಚ್ಚಾ ತೈಲ ಉತ್ಪಾದನೆಯಲ್ಲಾದ ಇಳಿಕೆ
30% ಏಪ್ರಿಲ್‌ನಲ್ಲಿ ಕುಸಿದ ಮಾಲಿನ್ಯದ ಪ್ರಮಾಣ
15% ಮಾರ್ಚ್‌ನಲ್ಲಿ ಸಿಒ2 ಮಾಲಿನ್ಯದ ಕುಸಿತ
31% ಏಪ್ರಿಲ್‌ನಲ್ಲಿ ಕಲ್ಲಿದ್ದಲಿನಿಂದ
ವಿದ್ಯುತ್‌ ಉತ್ಪಾದನೆ ಯಲ್ಲಾದ ಕುಸಿತ
22.7% ಕಚ್ಚಾ ಕಬ್ಬಿಣ ಉತ್ಪಾದನೆಯಲ್ಲಿನ ಕುಸಿತ

Advertisement

Udayavani is now on Telegram. Click here to join our channel and stay updated with the latest news.

Next