ಎಚ್.ಡಿ.ಕೋಟೆ: ರಾಸುಗಳೂ ಸೇರಿ ಮೂವರನ್ನು ಕೊಂದು ಆತಂಕ ಸೃಷ್ಟಿಸಿದ್ದ ನರಹಂತಕ ಹುಲಿಯನ್ನು ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಅರಣ್ಯಾಧಿಕಾರಿಗಳು ಸೇರಿ ಹಿಡಿದಿದ್ದಾರೆ. ಹುಲಿ ಹಿಡಿಯಲು ಕಳೆದ ನಾಲ್ಕೈದು ದಿನಗಳಿಂದ ಮಾನಿಮೂಲಿ ಹಾಡಿಯ ಆಸುಪಾಸಿನಲ್ಲಿ ಸಿಬ್ಬಂದಿ ವಾಸ್ತವ್ಯ ಹೂಡಿದ್ದರು. ಹುಲಿ ಪತ್ತೆಗಾಗಿ ಕ್ಯಾಪ್ಟನ್ ಅರ್ಜುನ ಆನೆ ಸಾಥ್ ನೀಡಿತ್ತು.
ಪೊದೆಯಲ್ಲಿ ಅಡಗಿ ಕುಳಿತಿದ್ದ 15 ವರ್ಷದ ಗಂಡು ಹುಲಿಗೆ ಅರಿವಳಿಕೆ ಮದ್ದು ನೀಡಿ ಸೆರೆ ಹಿಡಿಯಲಾಯಿತು. ಇದರಿಂದ ಡಿ.ಬಿ.ಕುಪ್ಪೆ ಗ್ರಾಮದ ಜನ ನಿಟ್ಟುಸಿರು ಬಿಟ್ಟಿದ್ದಾರೆ. ಪ್ರಥಮ ಚಿಕಿತ್ಸೆ ನೀಡಿ,
ಮೈಸೂರಿನ ಕೂರ್ಗಳ್ಳಿ ಹುಲಿ ಪುನರ್ವಸತಿ ಕೇಂದ್ರಕ್ಕೆ ಹುಲಿಯನ್ನು ರವಾನೆ ಮಾಡಲಾಗಿದೆ.