Advertisement

ಚಾಲಕನ ಬಳಿ ಹಣವಿಲ್ಲವೆಂದು ವಾಹನ ಸುಟ್ಟು ಹಾಕಿ ವಿಕೃತಿ ಮೆರದ ಪುಂಡರು

11:21 AM Jul 15, 2022 | Team Udayavani |

ಹುಣಸೂರು: ಗೂಡ್ಸ್ ಆಟೋವನ್ನು ಓವರ್ ಟೇಕ್ ಮಾಡಿ  ಚಾಲಕನ ಬಳಿ ಹಣವಿಲ್ಲದ್ದನ್ನು ಕಂಡು  ಪೆಟ್ರೋಲ್ ಹಾಕಿ ಆಟೋವನ್ನೇ ಸುಟ್ಟು ಹಾಕಿರುವ ಘಟನೆ ತಾಲೂಕಿನ ರತ್ನಪುರಿ ರಸ್ತೆಯ ಸಣ್ಣೇಗೌಡರ ಕಾಲೋನಿ ಬಳಿಯಲ್ಲಿ ಗುರುವಾರ ತಡರಾತ್ರಿ ನಡೆದಿದೆ.

Advertisement

ಹುಣಸೂರು ತಾಲೂಕಿನ ಸಂತೆಕೆರೆಕೋಡಿ ಗ್ರಾಮದ ನೂರ್ ಎಂಬಾತ ಗೂಡ್ಸ್ ಆಟೋ ಸುಟ್ಟು ಕರಕಲಾಗಿದೆ.

ರಾತ್ರಿ ಆಟೋ ಚಾಲಕ ನೂರ್  ಹುಣಸೂರು ಕಡೆಯಿಂದ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ  ವಿನೋಬಾ ಕಾಲೋನಿಯಿಂದ  ಬೈಕ್ ಸವಾರರು ಸಣ್ಣೇಗೌಡರ ಕಾಲೋನಿ ಬಳಿಯ ಹೊಸ ಕಾಲುವೆ ವರೆಗೆ ಹಿಂಬಾಲಿಸಿಕೊಂಡು ಬಂದು ಓವರ್ ಮಾಡಿ ಆಟೋವನ್ನು ನಿಲ್ಲಿಸಿ, ಹಣ ನೀಡುವಂತೆ ಬೆದರಿಸಿದ್ದಾರೆ.

ಆಟೋ ನಿಲ್ಲಿಸಿ ಹಣ ಕೇಳುತ್ತಿದ್ದಂತೆ ಯಾರೋ ದರೋಡೆ ಕೋರರಿರಬಹುದೆಂದು ಹೆದರಿದ  ನೂರ್  ಕತ್ತಲಿನಲ್ಲಿ ಓಡಿ ತಪ್ಪಿಸಿಕೊಂಡಿದ್ದಾನೆ. ಇದರಿಂದ ಕಿಡಿಗೇಡಿಗಳು ಹತಾಶರಾಗಿ ಆಟೋಗೆ  ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದಾರೆ.

ಇದನ್ನೂ ಓದಿ:ಕೆದೂರು: ರೈಲ್ವೆ ಟ್ರ್ಯಾಕ್ ಬಳಿ ಅವಿವಾಹಿತ ಪುರುಷನ ಶವ ಪತ್ತೆ

Advertisement

ಘಟನೆ ಹುಣಸೂರು ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು,  ಸ್ಥಳಕ್ಕೆ ಡಿವೈಎಸ್ ಪಿ ರವಿಪ್ರಸಾದ್, ಗ್ರಾಮಾಂತರ ಠಾಣೆ ಇನ್ಸ್ ಪೆಕ್ಟರ್ ಸಿ.ವಿ.ರವಿ ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿದ್ದಾರೆ.

ಆಟೋ ಸಂಪೂರ್ಣ ಸುಟ್ಟು ಹೋಗಿದ್ದು, ಆಟೋ ಚಾಲಕ ಆಘಾತಕ್ಕೊಳಗಾಗಿದ್ದಾರೆ.  ಇದರಿಂದಾಗಿ ಸಮರ್ಪಕ ಮಾಹಿತಿ ಪಡೆಯಲು ಸಾಧ್ಯವಾಗಿಲ್ಲ. ಆತ ಚೇತರಿಸಿಕೊಂಡ ನಂತರವಷ್ಟೆ ಸತ್ಯಾಸತ್ಯತೆ ಹೊರಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕುಡುಕರ ಕಾಟವೂ ಇದೆ

ರತ್ನಪುರಿ ರಸ್ತೆಯಲ್ಲಿ ರಾತ್ರಿ ವೇಳೆ ಕುಡುಕರ ಕಾಟ ಹೆಚ್ಚಿದ್ದು. ಇದು ಕುಡುಕರ ಕೃತ್ಯವೋ ಅಥವಾ  ಚಾಲಕನಿಂದ ಹಣ ಕಿತ್ತುಕೊಳ್ಳಲು ಈ ರೀತಿ ಮಾಡಿದ್ದಾಯೇ ಎಂಬುದು ತನಿಖೆಯಿಂದ ತಿಳಿಯಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next