Advertisement
ಇನ್ನು “ದಂಡುಪಾಳ್ಯಂ-4′ ಚಿತ್ರದ ಟೈಟಲ್‌ಗೆ “ದಿ ಕ್ರೈಮ್ಸ್ ಟು ಬಿ ಕಂಟಿನ್ಯೂಡ್’ ಎಂಬ ಟ್ಯಾಗ್‌ಲೈನ್ ಇರುವುದರಿಂದ, “ದಂಡುಪಾಳ್ಯ’ದ ಈ ಹಿಂದಿನ ಮೂರೂ ಸರಣಿಯಲ್ಲಿದ್ದಂತೆ ಈ ಚಿತ್ರದಲ್ಲೂ ಕ್ರೌರ್ಯದ ಕಥಾನಕ ಮುಂದುವರೆಯಲಿದೆ. “ವೆಂಕಟ್ ಮೂವೀಸ್ ಪ್ರೊಡಕ್ಷನ್ಸ್’ ಬ್ಯಾನರ್‌ನಲ್ಲಿ ನಿರ್ಮಾಪಕ ವೆಂಕಟ್ ಕಥೆ, ಚಿತ್ರಕಥೆ ಮತ್ತು ಸಾಹಿತ್ಯವನ್ನು ಬರೆದು ಚಿತ್ರವನ್ನು ನಿರ್ಮಿಸಿದ್ದಾರೆ. ಕೆ.ಟಿ ನಾಯಕ್ “ದಂಡುಪಾಳ್ಯಂ-4′ ಚಿತ್ರವನ್ನು ನಿರ್ದೇಶಿಸಿ¨ªಾರೆ. ಈ ಬಾರಿ “ದಂಡುಪಾಳ್ಯಂ-4’ನಲ್ಲಿ ಸುಮನ್ ರಂಗನಾಥ್, ವೆಂಕಟ್, ಮುಮೈತ್ ಖಾನ್, ಸಂತೋಷ್, ವೀಣಾ, ಸಂಜು, ಅರುಣ್ ಬಚ್ಚನ್, ಸೋಮು, ಜೀವ, ವಿಠಲ… ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
Related Articles
Advertisement
ಇನ್ನು ಚಿರಯೌವ್ವನೆ ಸುಮನ್ ರಂಗನಾಥ್ “ದಂಡುಪಾಳ್ಯಂ-4’ನಲ್ಲಿ ಡಿ-ಗ್ಲಾಮರಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತಮ್ಮ ಪಾತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಯ ಮಾತುಗಳನ್ನಾಡುವ ಸುಮನ್ ರಂಗನಾಥ್, “ನಾನು ಇಲ್ಲಿಯವರೆಗೆ ಬಂದಿರುವ “ದಂಡುಪಾಳ್ಯ’ ಸೀರಿಸ್‌ನ ಚಿತ್ರಗಳನ್ನು ನೋಡಿಲ್ಲ. ಆದ್ರೆ ಚಿತ್ರತಂಡದ ಸ್ಟೋರಿ ಕೇಳುತ್ತಿದ್ದಂತೆ, ಕ್ಯಾರೆಕ್ಟರ್ ಇಷ್ಟವಾಯ್ತು. ಹಾಗಾಗಿ, ಚಿತ್ರವನ್ನು ಒಪ್ಪಿಕೊಂಡೆ. ಇಲ್ಲಿ ನನ್ನದು ಅಭಿನಯಕ್ಕೆ ತುಂಬಾ ಪ್ರಾಮುಖ್ಯತೆಯಿರುವ, ಡಿ-ಗ್ಲಾಮರಸ್ ಕ್ಯಾರೆಕ್ಟರ್. ಇಡೀ ಚಿತ್ರದಲ್ಲಿ ರಗಡ್ ಲುಕ್‌ನಲ್ಲಿ ಕಾಣುತ್ತೇನೆ. ಕಲಾವಿದೆಯಾಗಿ ಚಿತ್ರಕ್ಕೆ ಕಂಪ್ಲೀಟ್ ಎಫರ್ಟ್ ಹಾಕಿದ್ದೇನೆ. ಫಸ್ಟ್‌ಟೈಮ್ ಇಂಥದ್ದೊಂದು ಕ್ಯಾರೆಕ್ಟರ್ ಮಾಡುತ್ತಿರುವುದಕ್ಕೆ ಖುಷಿ ಇದೆ. ಟೀಮ್ ಜೊತೆ ಕೆಲಸ ಮಾಡಿದ್ದು ಒಳ್ಳೆಯ ಅನುಭವ’ ಎಂದರು.
“ದಂಡುಪಾಳ್ಯಂ-4′ ಕನ್ನಡ, ತಮಿಳು, ತೆಲುಗು, ಮಲೆಯಾಳಂ, ಹಿಂದಿಯಲ್ಲಿ ಏಕಕಾಲಕ್ಕೆ ತೆರೆಗೆ ತರಲು ಚಿತ್ರತಂಡ ಪ್ಲಾನ್ ಮಾಡಿಕೊಳ್ಳುತ್ತಿದೆ. ಚಿತ್ರಕ್ಕೆ ಆರ್.ಗಿರಿ, ಬೆನಕ ರಾಜು ಛಾಯಾಗ್ರಹಣವಿದೆ. ಬಾಬು ಎ ಶ್ರೀವಾತ್ಸವ, ಪ್ರೀತಿ ಮೋಹನ್ ಸಂಕಲನ ಕಾರ್ಯವಿದೆ. ಚಿತ್ರದಲ್ಲಿ ಎರಡು ಹಾಡುಗಳಿದ್ದು, ಆನಂದ ರಾಜ ವಿಕ್ರಮ ಸಂಗೀತ ಸಂಯೋಜಿಸಿದ್ದಾರೆ. ಶಿವ ಸಮಯ್ ಚಿತ್ರಕ್ಕೆ ಸಂಭಾಷಣೆ ಬರೆದಿ¨ªಾರೆ. “ದಂಡುಪಾಳ್ಯಂ-4′ ಹಿಂದಿನ ಮೂರು ಚಿತ್ರಗಳಂತೆ ಸಕ್ಸಸ್ ಲೀಸ್ಟ್ ಸೇರಿಲಿದೆಯಾ ಅನ್ನೋದು ನವೆಂಬರ್ ಮೊದಲ ವಾರ ಗೊತ್ತಾಗಲಿದೆ.