Advertisement

ODI; ಅಫ್ಘಾನಿಸ್ಥಾನದ ವಿರುದ್ಧ ಒಂದು ವಿಕೆಟ್‌ ರೋಚಕ ಜಯ: ಪಾಕಿಸ್ಥಾನಕ್ಕೆ ಏಕದಿನ ಸರಣಿ

12:05 AM Aug 26, 2023 | Team Udayavani |

ಹಂಬಂತೋಟ (ಶ್ರೀಲಂಕಾ): ಅಫ್ಘಾನಿಸ್ಥಾನದ ಬೃಹತ್‌ ಮೊತ್ತವನ್ನು ಯಶಸ್ವಿಯಾಗಿ ಬೆನ್ನಟ್ಟಿದ ಪಾಕಿಸ್ಥಾನ ಒಂದು ವಿಕೆಟ್‌ ರೋಚಕ ಜಯದೊಂದಿಗೆ ಏಕದಿನ ಸರಣಿಯನ್ನು ವಶಪಡಿಸಿಕೊಂಡಿತು.

Advertisement

ತಟಸ್ಥ ಕೇಂದ್ರವಾದ ಶ್ರೀಲಂಕಾದ ಹಂಬಂತೋಟದಲ್ಲಿ ನಡೆದ ದ್ವಿತೀಯ ಮುಖಾಮುಖಿಯಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಅಫ್ಘಾನಿಸ್ಥಾನ 5 ವಿಕೆಟಿಗೆ 300 ರನ್‌ ಪೇರಿಸಿಯೂ ಇದನ್ನು ಉಳಿಸಿಕೊಳ್ಳುವಲ್ಲಿ ವಿಫ‌ಲವಾಯಿತು. ಪಾಕಿಸ್ಥಾನ ಒಂದು ಎಸೆತ ಬಾಕಿ ಇರುವಾಗ ಒಂದು ವಿಕೆಟ್‌ ಉಳಿಸಿಕೊಂಡು ಜಯ ಸಾಧಿಸಿತು. ಮೊದಲ ಪಂದ್ಯವನ್ನು ಪಾಕ್‌ 142 ರನ್ನುಗಳಿಂದ ಗೆದ್ದಿತ್ತು.

ಗುರ್ಬಜ್‌ ಜಬರ್ದಸ್ತ್ ಶತಕ
ಆರಂಭಕಾರ ರೆಹಮಾನುಲ್ಲ ಗುರ್ಬಜ್‌ ಅವರ ಜೀವನಶ್ರೇಷ್ಠ 151 ರನ್‌ ಸಾಹಸದಿಂದ ಅಫ್ಘಾನ್‌ ಬೃಹತ್‌ ಮೊತ್ತ ದಾಖಲಿಸಿತು. ಈ ಸಂದರ್ಭದಲ್ಲಿ ಗುರ್ಬಜ್‌ ಅನೇಕ ದಾಖಲೆಗಳನ್ನು ನಿರ್ಮಿಸಿದರೂ ಅಫ್ಘಾನ್‌ ಗೆಲುವಿಗೆ ಅವರ ಸಾಧನೆ ನೆರವಾಗಲಿಲ್ಲ. ಗುರ್ಬಜ್‌ ಮತ್ತು ಇಬ್ರಾಹಿಂ ಜದ್ರಾನ್‌ 39.5 ಓವರ್‌ ಜತೆಯಾಟ ನಡೆಸಿ ಮೊದಲ ವಿಕೆಟಿಗೆ 227 ರನ್‌ ಪೇರಿಸಿದರು. ಜದ್ರಾನ್‌ ಕೊಡುಗೆ 80 ರನ್‌. ಗುರ್ಬಜ್‌ ಅವರ 151 ರನ್‌ ಸರಿಯಾಗಿ 151 ಎಸೆತಗಳಿಂದ ದಾಖಲಾಯಿತು. ಸಿಡಿಸಿದ್ದು 14 ಬೌಂಡರಿ ಹಾಗೂ 3 ಸಿಕ್ಸರ್‌.

Advertisement

Udayavani is now on Telegram. Click here to join our channel and stay updated with the latest news.

Next