Advertisement

Kyrgyzstan:ಭಾರತೀಯ ವಿದ್ಯಾರ್ಥಿಗಳ ಮೇಲೆ ಹಲ್ಲೆ ; ಪಾಕಿಸ್ಥಾನದ 3 ವಿದ್ಯಾರ್ಥಿಗಳ ಕೊಲೆ?

01:59 AM May 19, 2024 | Team Udayavani |

ಹೊಸದಿಲ್ಲಿ: ಸ್ಥಳೀಯರು ಮತ್ತು ವಿದೇಶಿ ವಿದ್ಯಾರ್ಥಿಗಳ ನಡುವಿನ ಸಂಘರ್ಷ ದಿಂದಾಗಿ ಕಿರ್ಗಿಸ್ಥಾನದ ರಾಜಧಾನಿ ಬಿಶ್ಕೆಕ್‌ನಲ್ಲಿ 2 ದಿನಗಳಿಂದ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಭಾರತ, ಪಾಕಿಸ್ಥಾನ ಮತ್ತು ಬಾಂಗ್ಲಾದೇಶದ ವಿದ್ಯಾ ರ್ಥಿಗಳು ಹಾಗೂ ಸ್ಥಳೀಯರ ನಡುವಿನ ಜಗಳದಲ್ಲಿ ಮೂವರು ಪಾಕಿ ಸ್ಥಾನಿ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಮನೆ ಯಲ್ಲೇ ಇರುವಂತೆ ಭಾರತೀಯ ವಿದೇ ಶಾಂಗ ಸಚಿವಾಲಯವು ಸೂಚಿಸಿದೆ.

Advertisement

ಕಿರ್ಗಿಸ್ಥಾನ ಮತ್ತು ಈಜಿಪ್ಟ್ ವಿದ್ಯಾರ್ಥಿಗಳ ನಡುವಿನ ಜಗಳದ ವೀಡಿಯೋ ಮೇ 13ರಂದು ವೈರಲ್‌ ಆಗುತ್ತಿದ್ದಂತೆ ಸಂಘರ್ಷ ತೀವ್ರಗೊಂಡಿದೆ. ಸ್ಥಳೀಯರ ಗುಂಪುಗಳು ಬಿಶ್ಕೆಕ್‌ನಲ್ಲಿರುವ ವಿಶ್ವವಿದ್ಯಾನಿಲಯಗಳ ಹಾಸ್ಟೆಲ್‌ಗ‌ಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸು ತ್ತಿವೆ. ಇಲ್ಲಿನ ವಿಶ್ವವಿದ್ಯಾನಿಲಯಗಳಲ್ಲಿ ಭಾರತ, ಪಾಕಿಸ್ಥಾನ ಮತ್ತು ಬಾಂಗ್ಲಾ ದೇಶದ ಹೆಚ್ಚಿನ ವಿದ್ಯಾರ್ಥಿಗಳಿದ್ದಾರೆ.

ವರದಿಯ ಪ್ರಕಾರ ಸಂಘರ್ಷದಲ್ಲಿ ಯಾವುದೇ ಭಾರತೀಯ ವಿದ್ಯಾರ್ಥಿಗೆ ಹಾನಿಯಾಗಿಲ್ಲ. ಈ ಮಧ್ಯೆ, ಸ್ಥಳೀಯ ಪೊಲೀಸರು ವಿದೇಶಿ ವಿದ್ಯಾರ್ಥಿಗಳ ನೆರವಿಗೆ ಬರುತ್ತಿಲ್ಲ ಎಂಬ ಆರೋಪವಿದೆ. ಕಿರ್ಗಿಸ್ಥಾನದಲ್ಲಿ ಅಂದಾಜು 15,000 ಭಾರತೀಯ ವಿದ್ಯಾರ್ಥಿಗಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next