Advertisement

ಮಾರ್ಚ್‌ 16ರಿಂದ ಮೂರು ದಿನ ಕಾಂಗ್ರೆಸ್‌ ಪೂರ್ಣಾಧಿವೇಶನ

08:15 AM Feb 18, 2018 | Team Udayavani |

ಹೊಸದಿಲ್ಲಿ: ಕಾಂಗ್ರೆಸ್‌ನ ಪೂರ್ಣಾಧಿವೇಶನ ಮಾ.16, 17, 18ರಂದು ಹೊಸದಿಲ್ಲಿಯಲ್ಲಿ ನಡೆಯಲಿದೆ. ಅದರಲ್ಲಿ ಪಕ್ಷದ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಿದ ಅಖೀಲ ಭಾರತ ಕಾಂಗ್ರೆಸ್‌ ಸಮಿತಿ ಸದಸ್ಯರು ಭಾಗವಹಿಸಲಿದ್ದಾರೆ. 

Advertisement

ವಿಸರ್ಜಿಸಲಾಗಿರುವ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ (ಸಿಡಬ್ಲೂಸಿ) ಸ್ಥಾನದಲ್ಲಿ ರಚನೆಯಾಗಿರುವ ಸಲಹಾ ಸಮಿತಿಯ ಮೊದಲ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಕಾಂಗ್ರೆಸ್‌ ಸಂಸದೀಯ ಮಂಡಳಿ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌, ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಗುಲಾಂ ನಬಿ ಆಜಾದ್‌, ಎ.ಕೆ.ಆ್ಯಂಟನಿ,  ಅಹ್ಮದ್‌ ಪಟೇಲ್‌ ಈ ಸಭೆಯಲ್ಲಿ ಪಾಲ್ಗೊಂಡಿದ್ದರು. 

ಪಕ್ಷದ ಸಂವಿಧಾನದ ಪ್ರಕಾರ 25 ಮಂದಿ ಸದಸ್ಯರಿರುವ ಸಿಡಬ್ಲೂಸಿಯಲ್ಲಿ 12 ಮಂದಿಯನ್ನು ಆಯ್ಕೆ ಮಾಡುವುದಿದ್ದರೆ, 11 ಮಂದಿಯನ್ನು ನಾಮನಿರ್ದೇಶನಗೊಳಿಸಲಾಗುತ್ತದೆ. ಹೊಸತಾಗಿ ಸಿಡಬ್ಲೂಸಿ ರಚನೆಯಾಗುವ ವರೆಗೆ ಈ ಸಲಹಾ ಸಮಿತಿ ಇರುತ್ತದೆ. 

ಕರ್ನಾಟಕದ ಎಂ.ವಿ.ರಾಜಶೇಖರನ್‌, ಕ್ಯಾ.ಅಮರಿಂದರ್‌ ಸೇರಿದಂತೆ ಹಲವರನ್ನು ಸಮಿತಿಯಿಂದ ಕೈಬಿಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next