Advertisement

ಅಗತ್ಯವಿದ್ದವರಿಗೆ ಮಾತ್ರ ಮೂರನೇ ಡೋಸ್‌

11:37 PM Oct 11, 2021 | Team Udayavani |

ಹೊಸದಿಲ್ಲಿ: ಅರವತ್ತು ವರ್ಷ ಮೇಲ್ಪಟ್ಟವರಿಗೆ ಹಾಗೂ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು ಕೋವಿಡ್‌ ಲಸಿಕೆಯ ಮೂರನೇ ಡೋಸ್‌ ಪಡೆಯಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಲಸಿಕೆ ಸಲಹಾ ಸಮಿತಿಯ ತಜ್ಞರು ಶಿಫಾರಸು ಮಾಡಿದ್ದಾರೆ.

Advertisement

ಈ ಶಿಫಾರಸು ಮಾಡಿರುವ ಡಬ್ಲ್ಯುಎಚ್‌ಒ ಸಂಸ್ಥೆಯ ಸ್ಟ್ರಾಟೆಜಿಕ್‌ ಅಡ್ವೆ„ಸರಿ ಗ್ರೂಪ್‌ ಆಫ್ ಎಕ್ಸ್‌ಪರ್ಟ್ಸ್ ಆನ್‌ ಇಮ್ಯೂನೈಸೇಶನ್‌ (ಎಸ್‌ಎಜಿಇ) ತಜ್ಞರು, ಮೂರನೇ ಡೋಸ್‌ ಎಲ್ಲರಿಗೂ ಅಗತ್ಯವಿಲ್ಲ ಎಂಬ ಸ್ಪಷ್ಟನೆಯನ್ನೂ ನೀಡಿದೆ. ಚೀನದ ಸಿನೊವ್ಯಾಕ್‌ ಹಾಗೂ ಸಿನೊಫಾರ್ಮ್ ಲಸಿಕೆಗಳನ್ನು ಪಡೆದವರು ಮೂರನೇ ಡೋಸ್‌ ಅನ್ನು ಕಡ್ಡಾಯವಾಗಿ ಪಡೆಯಬೇಕು ಎಂದು ಹೇಳಿದ್ದಾರೆ. ಈ ನಡುವೆ, ಭಾರತದಲ್ಲಿ ತಯಾರಿಸಲಾಗಿರುವ ಭಾರತ್‌ ಬಯೋಟೆಕ್‌ ಸಂಸ್ಥೆಯ ಲಸಿಕೆಯನ್ನು ತುರ್ತು ಸಂದರ್ಭಗಳಲ್ಲಿ ಬಳಸಲು ಅವಕಾಶ ನೀಡುವ ಬಗ್ಗೆ ಎಸ್‌ಎಜಿಇ ಸಮಿತಿ ಚರ್ಚಿಸುತ್ತಿದೆ.

2,500 ಕೋಟಿ ರೂ. ಮೊತ್ತದ ಔಷಧಿ ಖರೀದಿ!
ಕಳೆದ 15 ತಿಂಗಳು ಗಳಲ್ಲಿ ಭಾರತೀಯರು ಕೊರೊನಾ ಚಿಕಿತ್ಸೆಗೆ ಬಳಸುವ ರೆಮಿಡಿಸೀವರ್‌ ಔಷಧಿಗೆ ಸಂಬಂಧಿಸಿದ 2,500 ಕೋಟಿ ರೂ. ಮೊತ್ತದ 25 ಕೋಟಿ ಮಾತ್ರೆಗಳು, 50 ಲಕ್ಷ ಔಷಧ ಸೀಸೆಗಳನ್ನು ಖರೀದಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೋವಿಡ್‌ ಚಿಕಿತ್ಸೆಗೆ ಬಳಸುವ ಈ ಔಷಧಗಳನ್ನು 2020ರ ಜೂನ್‌ನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿತ್ತು. ಆಗಿನಿಂದಲೇ ಅಪಾರ ಬೇಡಿಕೆ ಗಳಿಸಿದ್ದ ಇವುಗಳ ಕೊರತೆ ಮಾರು ಕಟ್ಟೆಯಲ್ಲಿ ಅಗಾಧವಾಗಿ ಉಂಟಾಗಿತ್ತು. ಆಗ, ಇವುಗಳ ಬೇಡಿಕೆ ಶೇ. 2000ರಷ್ಟು ಹೆಚ್ಚಾಗಿತ್ತು ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ:ಮುಳುಗಡೆಯಾದ ಸೇತುವೆ ಮೇಲೆ ಬೈಕ್ ಓಡಿಸಲು ಹೋಗಿ ಸಿಕ್ಕಿಬಿದ್ದ ಬೈಕ್ ಸವಾರರು

Advertisement

ಏಳು ತಿಂಗಳಲ್ಲೇ ಅತೀ ಕಡಿಮೆ ಕೇಸ್‌: ರವಿವಾರದಿಂದ ಸೋಮವಾರದ ಅವಧಿಯಲ್ಲಿ ದೇಶದಲ್ಲಿ 18,132 ಪ್ರಕರಣಗಳು ದಾಖಲಾಗಿವೆ. ಇದು ಕಳೆದ ಏಳು ತಿಂಗಳುಗಳಲ್ಲಿ ಒಂದು ದಿನದಲ್ಲಿ ದಾಖಲಾದ ಅತೀ ಕಡಿಮೆ ಪ್ರಕರಣವಾಗಿದೆ. ಇದೇ ಅವಧಿಯಲ್ಲಿ, 21,563 ಮಂದಿ ಗುಣಮುಖ ರಾಗಿದ್ದು, 2020ರ ಮಾರ್ಚ್‌ನಿಂದ ಇಲ್ಲಿಯವರೆಗೆ ಗುಣಮುಖ ರಾದವರ ಪ್ರಮಾಣ ಶೇ. 98ಕ್ಕೇರಿದೆ.

Advertisement

Udayavani is now on Telegram. Click here to join our channel and stay updated with the latest news.

Next