Advertisement

ಮಕ್ಕಳ ಆರೈಕೆ ನೆನಪಿಡಬೇಕಾದ ಸಂಗತಿಗಳು

11:49 PM Feb 03, 2020 | Sriram |

ಮಗುವಿನ ಆಗಮನ ತಂದೆ-ತಾಯಿ ಹಾಗೂ ಇಡೀ ಕುಟುಂಬದಲ್ಲಿ ಸಂಭ್ರಮವನ್ನೇ ಹೊತ್ತು ತರುತ್ತದೆ. ಮಗು ಹುಟ್ಟಿದ ಐದು ವರ್ಷಗಳ ಕಾಲ ಬಹಳ ಜೋಪಾನದಿಂದ ಆರೈಕೆ ಮಾಡಬೇಕು. ಆ ಅವಧಿಯಲ್ಲಿ ಮಗುವಿನ ಆರೈಕೆಯತ್ತ ಹೆಚ್ಚಿನ ಕಾಳಜಿ ವಹಿಸಬೇಕು. ಮಗುವಿನ ಲಾಲನೆ, ಪಾಲನೆಯಲ್ಲಿ ಕೆಲವು ಅಂಶಗಳನ್ನು ತಪ್ಪದೇ ಪಾಲಿಸಬೇಕು. ಮುಖ್ಯವಾಗಿ ಮಕ್ಕಳ ಆರೈಕೆಗಾಗಿ ಬಳಸುವ ವಸ್ತುಗಳು ಪ್ಲಾಸ್ಟಿಕ್‌ ಮುಕ್ತವಾಗಿದ್ದರೆ ಒಳಿತು. ಇದರಿಂದ ಪರಿಸರ ಸಂರಕ್ಷಣೆ ಆದಂತೆಯೂ ಆಗುತ್ತದೆ. ಜತೆಗೆ ಮಕ್ಕಳ ತ್ವಚೆಯೂ ಆರೋಗ್ಯವಾಗಿರುತ್ತದೆ.

Advertisement

ಬೇಬಿ ವಾಟರ್‌ ವೈಪ್ಸ್‌
ವಾಟರ್‌ ವೈಪ್ಸ್‌ ಶಿಶುವಿನ ಆರೈಕೆಗೆ ಉತ್ತಮ ಎನ್ನಬಹುದು. ಪ್ಲಾಸ್ಟಿಕ್‌ ಡೈಪರ್ಸ್‌ ಅಥವಾ ವೆಟ್‌ ವೈಪ್ಸ್‌ ಬಳಕೆಯಿಂದ ಮಕ್ಕಳಿಗೆ ಅಲರ್ಜಿಯಾಗುವ ಸಾಧ್ಯತೆ ಹೆಚ್ಚು. ಜತೆಗೆ ಅವುಗಳು ಪರಿಸರ ಸ್ನೇಹಿ ಅಲ್ಲ. ಹೀಗಾಗಿ, ನವಜಾತ ಶಿಶುವಿಗೆ 3-4 ವಾಟರ್‌ ವೈಪ್ಸ್‌ ಅಥವಾ ಕ್ಲೋತ್‌ ಡೈಪರ್ಸ್‌ ಬಳಸಬಹುದು. ಇದನ್ನು ಹತ್ತಿ ಬಟ್ಟೆಯಿಂದ ತಯಾರಿಸಲಾಗಿದ್ದು, ನಿಮ್ಮ ಮಗುವಿನ ಶರೀರಕ್ಕೆ ಪೂರಕ. ಹಾಗೇ ಜೈವಿಕವಾಗಿ ಕರಗಿಸಬಲ್ಲ ವಸ್ತುವಾಗಿದ್ದು, ಪರಿಸರ ಸ್ನೇಹಿಯೂ ಆಗಿದೆ.

ಹಾಲುಣಿಸುವ ಬಾಟಲ್‌
ಆಕರ್ಷಕ ಬಣ್ಣ-ಬಣ್ಣದ ಪ್ಲಾಸ್ಟಿಕ್‌ ಬಾಟಲ…ಗಳನ್ನು ತಯಾರಿಸಲು ಇಥಲಿನ್‌ ಡೈಕ್ಲೋರೈಡ್‌, ಲೆಡ್‌, ಕ್ಯಾಡ್ಮಿಯಂ, ವಿನೈಲ್‌ ಕ್ಲೋರೈಡ್‌ ಅಂತಹ ಅನೇಕ ವಿಷಕಾರಿ ರಾಸಾಯನಿಕ ಬಳಸುವುದುಂಟು. ಇವು ಆರೋಗ್ಯಕ್ಕೆ ಹಾನಿ ಉಂಟು ಮಾಡುತ್ತವೆ. ಇಂಥ‌ ಹಾಲುಣಿಸುವ ಬಾಟಲಿಗಳನ್ನು ಬಳಸುವುದರಿಂದ ಮಕ್ಕಳ ಬೆಳವಣಿಗೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಆದರಿಂದ ತುಕ್ಕು ಹಿಡಿಯದ ಬಾಟಲಿಗಳು, ಆ್ಯಂಟಿ-ಕೊಲಿಕ್‌ ಅಥವಾ ಗಾಜು ಮುಕ್ತ ಬಾಟಲಿಗಳನ್ನು ಬಳಸಿದರೆ ಸೂಕ್ತ. ಮಗುವಿನ ಆರೋಗ್ಯ ನಿರ್ವಹಣೆಯೊಂದಿಗೆ ಸಮಾಜವನ್ನೂ ಕಾಳಜಿಯಿಂದ ಕಾಣಬಹುದು.

ಬೇಬಿ ನೇಪಿಸ್‌
ಮಗುವಿನ ತ್ವಚೆಯನ್ನು ಮತ್ತಷ್ಟು ಆರೋಗ್ಯಕರವಾಗಿ ಇಡುವಂತಹ ಬೇಬಿ ನ್ಯಾಪೀಸ್‌ಗಳು ಮಾರುಕಟ್ಟೆಗೆ ಬಂದಿವೆ. ಶಿಶುಗಳ ಚರ್ಮ ಅತೀ ಸೂಕ್ಷ್ಮವಾದ ಕಾರಣ ಅಲರ್ಜಿಗೆ ಗುರಿಯಾಗುವ ಸಂಭವವಿದೆ. ಬೇಬಿ ನ್ಯಾಪೀಸ್‌ ಆಯ್ಕೆ ಮಾಡುವಾಗ ಸ್ವಲ್ಪ ಜಾಗರೂಕತೆ ವಹಿಸಿ. ಬಟ್ಟೆ, ಬಿದಿರು, ಗೋಧಿ, ಜೋಳ ಅಂಶಗಳನ್ನೊಳಗೊಂಡ ನ್ಯಾಪೀಸ್‌ ಇದ್ದು, ಇದು ಮಗುವಿನ ತ್ವಚೆ ರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಆಟಿಕೆ
ರಾಸಾಯನಿಕ ಅಂಶಗಳನ್ನು ಬಳಸಿ ತಯಾರಿಸಿದ ಆಟಿಕೆಗಳು ಮಕ್ಕಳ ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗಾಗಿ ಅಂಥ ಆಟಿಕೆಗಳಿಂದ ಅದಷ್ಟು ಮಕ್ಕಳನ್ನು ದೂರವಿಡಿ. ಪಾಲಿಸ್ಟರ್‌ ಅಥವಾ ಮರುಬಳಕೆ ಮಾಡಬಲ್ಲಂಥ ವಸ್ತುಗಳಿಂದ ತಯಾರಿಸಿದ ಆಟಿಕೆಗಳನ್ನು ನೀಡಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next