Advertisement

ನ್ಯಾಯಾಲಯದಲ್ಲಿ ಸಾಕ್ಷ್ಯಗಳು ಮಾತಾಡಲಿವೆ: ವಿಜಯ ಮಲ್ಯ

06:50 AM Nov 21, 2017 | Harsha Rao |

ಲಂಡನ್‌: ಉದ್ಯಮಿ ವಿಜಯ್‌ ಮಲ್ಯರನ್ನು ಇಂಗ್ಲೆಂಡ್‌ನಿಂದ ಭಾರತಕ್ಕೆ ಗಡಿಪಾರು ಮಾಡುವ ಬಗೆಗಿನ ವಿಚಾರಣೆ ಡಿ.4ರಿಂದ 11ರವರೆಗೆ ವೆಸ್ಟ್‌ಮಿನ್‌ಸ್ಟರ್‌ ನ್ಯಾಯಾಲಯದಲ್ಲಿ ನಡೆಯಲಿದೆ. ಈ ಸಂಬಂಧ ವಿಚಾರಣೆಗೂ ಮೊದಲಿನ ವಾದ ಮಂಡನೆಗೆ ಸೋಮವಾರ ನ್ಯಾಯಾಲಯಕ್ಕೆ ಮಲ್ಯ ಹಾಜರಾಗಿದ್ದರು. ಡಿ.24ಕ್ಕೆ ಮಧ್ಯಂ ತರ ತೀರ್ಪು ಹೊರಬೀಳುವ ಸಾದ್ಯತೆಯಿದೆ. ವಿಚಾರಣೆ ಬಳಿಕ ಮಾತನಾಡಿದ ಮಲ್ಯ, ನನ್ನ ವಿರುದ್ಧದ ಆರೋಪಗಳೆಲ್ಲ ಸುಳ್ಳು. ಕೋರ್ಟ್‌ನಲ್ಲಿ ಸಾಕ್ಷ್ಯಗಳು ಮಾತನಾಡಲಿವೆ ಎಂದು ಹೇಳಿದ್ದಾರೆ. ಬ್ಯಾರಿಸ್ಟರ್‌ ಕ್ಲೇರ್‌ ಮಾಂಟ್‌ಗೊಮೆರಿ ನೇತೃತ್ವದಲ್ಲಿ ಮಲ್ಯ ಪರ ವಕೀಲರು ವಾದಿಸಲಿದ್ದು, ದಾಖಲೆಗಳನ್ನು ಕೋರ್ಟ್‌ಗೆ ಸಲ್ಲಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next