Advertisement

ಯೋಗದ ಕಡೆಗೆ ಹೆಚ್ಚಿದೆ ಒಲವು

01:37 PM Jun 09, 2017 | Team Udayavani |

ದಾವಣಗೆರೆ: ಜಿಲ್ಲಾಡಳಿತದಿಂದ ಜೂ.21ರಂದು ವಿಶ್ವ ಯೋಗ ದಿನ ಆಚರಸಲಿದ್ದು, ಎಲ್ಲಾ ಯೋಗಾಸ್ತಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಡಿಸಿ ಡಿ.ಎಸ್‌. ರಮೇಶ್‌ ಮನವಿ ಮಾಡಿದರು. ತಮ್ಮ ಕಚೇರಿ ಸಭಾಂಗಣದಲ್ಲಿ ಗುರುವಾರ 3ನೇ ವಿಶ್ವ ಯೋಗ ದಿನದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ, ಮಾತನಾಡಿದರು.

Advertisement

ಆರೋಗ್ಯದ ಕಾಳಜಿ ಹೊಂದಿದವರು ಇಂದು ಯೋಗದ ಕಡೆಗೆ ಹೆಚ್ಚಿನ ಒಲವು ತೋರುತ್ತಿದ್ದಾರೆ. ವಿಶ್ವಸಂಸ್ಥೆ ಸಹ ಜೂ.21 ವಿಶ್ವ ಯೋಗದಿನವನ್ನಾಗಿ ಘೋಷಿಸಿದೆ ಎಂದರು. ಈ ಬಾರಿಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ 17 ರಿಂದ ಯೋಗಕ್ಕೆ ಸಂಬಂಧಿಸಿದ ವಿವಿಧ ಚಟುವಟಿಕೆಗಳು ಆರಂಭವಾಗಲಿವೆ. 

21ರಂದು ಮೋತಿ ವೀರಪ್ಪ ಕಾಲೇಜು ಮೈದಾನದಲ್ಲಿ ವಿವಿಧ ವಯೋಮಾನದ 8 ಸಾವಿರ ಜನರು ಏಕಕಾಲಕ್ಕೆ ಯೋಗ ಮಾಡುವ ಮೂಲಕ ಅದ್ಧೂರಿಯಾಗಿ ಯೋಗದಿನ ಆಚರಿಸಲಾಗುವುದು. ಅಂತಾರಾಷ್ಟ್ರೀಯ ಯೋಗಗುರು ಡಾ| ಸಂತೋಷ ಗುರೂಜಿ ವಿಶೇಷ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. 

ಅಂದಿನ ಜಾಥಕ್ಕೆ ಟ್ಯಾμಕ್‌ ಸಮಸ್ಯೆ ಆಗದಂತೆ ಬ್ಯಾರಿಕೇಡ್‌ ಅಳವಡಿಸಲು ಪೊಲೀಸ್‌ ಇಲಾಖೆಗೆ ಜಿಲ್ಲಾಧಿಕಾರಿ ಸೂಚಿಸಿದರು. ಜಿಲ್ಲಾ ಯೋಗ ಒಕ್ಕೂಟದ ವಾಸುದೇವ ರಾಯ್ಕರ್‌ ಮಾತನಾಡಿ, ಕಳೆದ ವರ್ಷ 42 ಕಡೆ ಯೋಗ ಶಿಬಿರ ಆಯೋಜಿಸಲಾಗಿತ್ತು. ಈ ಸಾಲಿನಲ್ಲಿ 40 ಕಡೆ ಶಿಬಿರ ನಡೆಸಲಾಗಿದೆ.

ಜೂ.17ರಂದು ಬೃಹತ್‌ ಯೋಗ ನಡಿಗೆ ಮೋತಿವೀರಪ್ಪ ಕಾಲೇಜಿನಿಂದ ಹೊರಟು ಗುಂಡಿ ವೃತ್ತ, ವಿದ್ಯಾರ್ಥಿ ಭವನ, ನಗರಪಾಲಿಕೆ ಕಚೇರಿ, ಎವಿಕೆ ಕಾಲೇಜು, ಹರಳೆಣ್ಣೆ ಕೊಟ್ರಬಸಪ್ಪ ವೃತ್ತ, ಚರ್ಚ್‌ ರಸ್ತೆ ಮೂಲಕ ವಾಪಸ್ಸು ಮೋತಿ ವೀರಪ್ಪ ಕಾಲೇಜು ಮೈದಾನ ತಲುಪಲಿದೆ ಎಂದರು.

Advertisement

ಜೂನ್‌ 18 ಜಿಲ್ಲಾ ಮಟ್ಟದ ಯೋಗ ಸ್ಪರ್ಧೆ, 19 ರಂದು ಇಂಧನ ಉಳಿಸಿ ಯೋಗ ಬೆಳಸಿ ಎಂಬ ಶೀರ್ಷಿಕೆಯಡಿ ಸೈಕಲ್‌ ರ್ಯಾಲಿ, 20ರಂದು ಶಾಲಾ ಮಕ್ಕಳಿಗೆ ಚಿತ್ರ ರಚನಾ ಸ್ಪರ್ಧೆ ಆಯೋಜಿಸಲಾಗಿದೆ. ಯೋಗ ಸ್ಪರ್ಧೆಗಳು ಮಕ್ಕಳಿಗೆ ಹಾಗೂ ವಯಸ್ಕರಿಗೆ ಬೇರೆ ಬೇರೆ ವಿಭಾಗಗಳಲ್ಲಿ ನಡೆಯಲಿದೆ. 

ಇದರಲ್ಲಿ ಭಾಗವಹಿಸುವ ಯೋಗಪಟುಗಳಿಗೆ ರೂ. 50 ಪ್ರವೇಶ ಧನ ನಿಗದಿಪಡಿಸಲಾಗಿದೆ. ಚಿತ್ರಕಲಾ ಸ್ಪರ್ಧೆ ಶಿವಯೋಗಿ ಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ತಿಳಿಸಿದರು. ಜಿಲ್ಲಾ ಆಯುಷ್‌ ಅ ಧಿಕಾರಿ ಡಾ. ಸಿದ್ದೇಶ್‌ ಮಾತನಾಡಿ, ಜೂನ್‌ 21ರಂದು ಬೆಳಿಗ್ಗೆ 6 ರಿಂದ 8 ರವರೆಗೆ ನಡೆಯಲಿರುವ ಜಾಥದಲ್ಲಿ ಭಾಗವಹಿಸುವ ಎಲ್ಲರಿಗೂ ಉಪಹಾರ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು. 

ಶ್ರೀ ಪತಂಜಲಿ ಯೋಗ ಸಂಸ್ಥೆಯ ಮಂಜುನಾಥ್‌, ಜಯಪ್ರಕಾಶ್‌, ಪತಂಜಲಿ ಯೋಗ ಸಂಸ್ಥೆಯ ಷಣ್ಮುಖಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಎಚ್‌.ಎಂ. ಪ್ರೇಮಾ, ಜಿಲ್ಲಾ ಆರೋಗ್ಯಾಧಿಕಾರಿ ತ್ರಿಪುಲಾಂಬ, ಡಿವೈಎಸ್‌ಪಿ ಅಶೋಕ್‌ಕುಮಾರ್‌, ಆಯುರ್ವೇದಿಕ್‌ ಕಾಲೇಜಿನ ಪ್ರಾಂಶುಪಾಲರು ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು, ಯೋಗ ಸಂಸ್ಥೆ ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next