ಉಪ್ಪಿನಬೆಟಗೇರಿ: ನಮ್ಮ ಧಾರ್ಮಿಕ ಪರಂಪರೆ, ಜೀವನದ ರೀತಿ, ನೀತಿ, ಕಲೆ, ಸಂಸ್ಕೃತಿ, ಸಂಸ್ಕಾರಗಳ ಮಹಾಸಂಗಮವೇ ನಮ್ಮ ದೇವಾಲಯಗಳಲ್ಲಿವೆ ಎಂದು ಸ್ಥಳೀಯ ಮೂರು ಸಾವಿರ ವಿರಕ್ತಮಠದ ಕುಮಾರ ವಿರೂಪಾಕ್ಷ ಸ್ವಾಮೀಜಿ ಹೇಳಿದರು.
ಗರಗ ಮಡಿವಾಳೇಶ್ವರ ಸಂಸ್ಥಾನ ಮಠದ ಚನ್ನಬಸವ ಸ್ವಾಮೀಜಿ, ಶಿರಕೋಳ ಹಿರೇಮಠದ ಶ್ರೀ ಗುರುಶಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಹಾಗೂ ದೊಡವಾಡ ಹಿರೇಮಠದ ಜಡಿಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ವೇ|ಮೂ| ಮೆಳಪ್ಪಯ್ಯ ಹಿರೇಮಠ, ತುರಮರಿ ಗ್ರಾಮದ ಶ್ರೀ ವೇದಾಂತಾಚಾರ್ಯ, ವಿದ್ವಾನ್ ಮಹಾಂತೇಶ ಶಾಸ್ತ್ರೀಜಿ, ಉಪ್ಪಿನಬೆಟಗೇರಿಯ ಮಹಾದೇವಪ್ಪ ಅಷ್ಟಗಿ ಹಾಗೂ ಧಾರವಾಡದ ವೇ|ಮೂ| ಸೋಮದೇವ ನಾರಾಯಣ ಮರಾಠೆ ಅವರ ನೇತೃತ್ವದಲ್ಲಿ ನೂತನ ಆಂಜನೇಯ ದೇವಸ್ಥಾನದ ಉದ್ಘಾಟನೆ ಮತ್ತು ಹನುಮಂತದೇವರ ಸ್ಥಿರ ಪ್ರತಿಷ್ಠೆ, ಶ್ರೀದೇವರ ಪ್ರಾಣ ಪ್ರತಿಷ್ಠೆ, ಮಹಾಪೂಜೆ, ಪೂಜಾಂಗ ಹವನ, ಪೂರ್ಣಾಹುತಿ, ಮಹಾಮಂಗಳಾರತಿ ಕಾರ್ಯಕ್ರಮಗಳು ನಡೆದವು. ಕಣವಿಹೊನ್ನಾಪುರದ ಶ್ರೀಮಾರುತಿ ಭಜನಾ ಸಂಘ ಹಾಗೂ ದೇವರಕೊಂಡದ ಶ್ರೀದುರ್ಗಾದೇವಿ ಭಜನಾ ಸಂಘದವರಿಂದ ತತ್ವಪದಗಳ ಸವಾಲ್ ಭಜನಾ ಸ್ಪರ್ಧೆ ಜರುಗಿತು.
Advertisement
ಕೊಟಬಾಗಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಆಂಜನೇಯ ದೇವಸ್ಥಾನದ ಉದ್ಘಾಟನೆ ಹಾಗೂ ಆಂಜನೇಯ ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ಗಣಪತಿ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಜರುಗಿದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಮ್ಮ ದೇವಾಲಯಗಳು ಭಕ್ತರ ಬಾಳಿಗೆ ಸುಖ, ಶಾಂತಿ, ನೆಮ್ಮದಿ ನೀಡುವ ತಾಣಗಳಾಗಿವೆ. ಸದ್ಭಕ್ತರ ಬಾಳಿನ ದಾರಿ ದೀಪಗಳಾಗಿವೆ. ಇಂತಹ ಉತ್ಕೃಷ್ಟ ಪರಂಪರೆ ಹಿನ್ನೆಲೆಯುಳ್ಳ ದೇವಾಲಯಗಳನ್ನು ಉಳಿಸಿ ಬೆಳೆಸಬೇಕಾದ ಮಹತ್ಕಾರ್ಯ ನಮ್ಮಿಂದಾಗಬೇಕಾಗಿದೆ ಎಂದರು.