Advertisement

ಗೃಹ ಪ್ರವೇಶಕ್ಕೆ ಬಂದ ಉಡುಗೊರೆ ಹಣ ನೆರೆ ಸಂತ್ರಸ್ತರಿಗೆ ನೀಡಿದ ಶಿಕ್ಷಕ ದಂಪತಿ

09:52 AM Aug 21, 2019 | sudhir |

ಚಿಕ್ಕಬಳ್ಳಾಪುರ:  ನಗರದ ಕಾಲೇಜು ಉಪನ್ಯಾಸಕರೊಬ್ಬರು ತಮ್ಮ ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ಸ್ನೇಹಿತರ, ಬಂಧು ಬಳಗದಿಂದ ಉಡುಗೊರೆಯಾಗಿ ಬಂದ ಹಣವನ್ನು ಉತ್ತರ ಕರ್ನಾಟಕದ ಪ್ರವಾಹ ಪೀಡಿತ ನೆರೆ ಸಂತ್ರಸ್ತರಿಗೆ ನೀಡಲು ಮುಂದಾಗಿ ಮಾನವೀಯತೆ ಮೆರೆದ್ದಿದ್ದಾರೆ.

Advertisement

ಹೌದು, ಚಿಕ್ಕಬಳ್ಳಾಪುರ ನಗರದ ಪ್ರಶಾಂತ ನಗರದ ನಿವಾಸಿ ರಮಾಂಜಿನಪ್ಪ ಹಾಗೂ ರೂಪ ಶ್ರೀ ದಂಪತಿಗಳು ತಮ್ಮ ಸಾಯಿ ಕನಸು ನಿಲಯದ ಗೃಹ ಪ್ರವೇಶದಲ್ಲಿ ನೆರೆ ಸಂತ್ರಸ್ತರಿಗೆ ದೇಣಿಗೆ ಸಂಗ್ರಹಿಸಿದ್ದು ಮಾತ್ರವಲ್ಲದೇ ಹೊಸ ಮನೆಗೆ ಉಡುಗೊರೆ ಆಗಿ ಬಂದ ಬರೋಬರಿ 38 ಸಾವಿರ ಜೊತೆಗೆ ಎರಡು ಸಾವಿರ ತಮ್ಮ ಸ್ವಂತ ಹಣ ಸೇರಿಸಿ ಒಟ್ಟು 40 ಸಾವಿರಕ್ಕೂ ಅಧಿಕ ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಡಿಡಿ ಮಾಡಿ ಕಳುಹಿಸಿ ಕೊಡುವುದಾಗಿ ತಿಳಿಸಿದರು.

ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಹೇಗೆ ರೂಡಸಿಕೊಳ್ಳಬೇಕು ಎಂಬುದನ್ನು ಶಾಲೆಯಲ್ಲಿ ಮಕ್ಕಳಿಗೆ ಪಾಠ ಹೇಳಿ ಕೊಡುವ ಶಿಕ್ಷಕರ ಮಧ್ಯೆ ಅದನ್ನು ಪ್ರಾಯೋಗಿಕವಾಗಿ ಹೇಗೆ ಅನುಷ್ಟಾನಗೊಳಿಸಬಹುದು ಎಂಬುದನ್ನು ಶಿಕ್ಷಕ ದಂಪತಿಗಳಾದ ರಾಮಾಂಜಿನಪ್ಪ ಹಾಗೂ ರೂಪಶ್ರೀ ತೋರಿಸಿಕೊಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next