Advertisement
ನಾಲ್ಕಾರು ತಿಂಗಳಲ್ಲೇ ಬಿ.ಎಸ್ಸಿ ಕಲಿಕೆಯ ಯಾಂತ್ರಿಕ ಜೀವನ ಬೇಸರವೆನಿಸಿ, ಪಕ್ಕದ ಕಟ್ಟಡಗಳಲ್ಲೇ ನಡೆಯುತ್ತಿದ್ದ ಪ್ರಾಣ ಸ್ನೇಹಿತರ ಬಿ.ಎ. ತರಗತಿಗಳಿಗೆ ಹಾಜರಾಗಲು ಪ್ರಾರಂಭಿಸಿದ್ದೆ. ಭಾಷಾ ವಿಷಯಗಳಿಗೆ (ಕನ್ನಡ, ಇಂಗ್ಲಿಷ್, ಹಿಂದಿ) ಮಾತ್ರ ಅವರೊಟ್ಟಿಗೆ ಕ್ಲಾಸ್‌ಗಳಲ್ಲಿ ಕುಳಿತುಕೊಳ್ಳುತ್ತಿದ್ದೆ. ಇದೇ ಮುಂದುವರಿದು ಪ್ರತಿ ದಿನ ಅವರೊಟ್ಟಿಗೆ ಕುಳಿತು ಕ್ಲಾಸ್ ಕೇಳಲು ಪ್ರಾರಂಬಿಸಿದೆ. ಬರಬರುತ್ತಾ ಅದೇ ಅಭ್ಯಾಸವಾಯ್ತು. ಎಷ್ಟರಮಟ್ಟಿಗೆಯೆಂದರೆ ನಾನು ದಾಖಲಾಗಿರುವುದು ಬಿಎಸ್ಸಿಗೆ ಎಂಬುದೇ ನನಗೆ ಮರೆತು ಹೋಗುವಷ್ಟರ ಮಟ್ಟಿಗೆ! ಪ್ರಾರಂಭದಿಂದ ಕೊನೆಯ ತನಕವೂ ಅವರೊಂದಿಗೆ ಕಾಲಹರಣ ಮಾಡತೊಡಗಿದೆ.
Related Articles
ಸತ್ಯನೊಡನೆಯೇ ನಿಂತು ಇದನ್ನೆಲ್ಲಾ ನೋಡುತ್ತಿದ್ದ ನಮಗೆ ಸತ್ಯನ ಧೈರ್ಯ ನೋಡಿ ಪ್ರಶಂಸಿಸಬೇಕೋ ಅಥವಾ ಉಪನ್ಯಾಸಕರ ಫಜೀತಿಗೆ ಅನುಕಂಪಿಸಬೇಕೋ ತೋಚದೆ ಸುಮ್ಮನೆ ನಿಂತಿದ್ದೆವು.
Advertisement
ಸತ್ಯನ ಕೀಟಲೆ ಇಲ್ಲಿಗೇ ಮುಗಿಯಲಿಲ್ಲ. ಅಂದು ನಮಗಿದ್ದ ಮೊದಲ ತರಗತಿ ಕಲ್ಲಪ್ಪನವರದ್ದೇ ಎಂದು ತಿಳಿದು ಕ್ಲಾಸ್‌ರೂಮಿಗೂ ಬಂದು ಕಲ್ಲಪ್ಪನವರನ್ನು ಕಾಡಿಸಲಾರಂಭಿಸಿದ. ಉಪನ್ಯಾಸಕರು ಹಳೆಗನ್ನಡ ಪದ್ಯವೊಂದನ್ನು ನಿರರ್ಗಳವಾಗಿ ವಾಚಿಸುತ್ತಿದ್ದರು. ಮಧ್ಯದಲ್ಲಿ ಎದ್ದು ನಿಂತ ಸತ್ಯ, “ಸ್ವಾಮಿ, ನಿಮ್ಮ ಉಪನ್ಯಾಸವನ್ನು ನಮಗೆ ಅರ್ಥಮಾಡಿಕೊಳ್ಳಲಾಗುತ್ತಿಲ್ಲ. ದಯಮಾಡಿ ನಮಗೆ ಅರ್ಥವಾಗುವ ಭಾಷೆಯಲ್ಲಿ ಹೇಳುತ್ತೀರಾ?’ ಎಂದಾಗ ಹುಡುಗರೆಲ್ಲಾ ಹೋ.. ಎಂದು ಕೂಗಲಾರಂಬಿಸಿದರು. ಇಷ್ಟಾದರೂ ವಿಚಲಿತರಾಗದ ಕಲ್ಲಪ್ಪ”ಹಳೆಗನ್ನಡ ಪದ್ಯವನ್ನೇ ಹೊಸಗನ್ನಡ ರೂಪದಲ್ಲಿ ಸ್ಫಷ್ಟವಾಗಿ ಉಚ್ಚರಿಸಿ ಸ್ಪಷ್ಟ ವಿವರಣೆ ನೀಡಿದರು.
ಸಮಾಧಾನವಾಗಲಿಲ್ಲವೆಂಬಂತೆ ತಲೆಯಾಡಿಸಿದ ಸತ್ಯ “ಮಹಾಪ್ರಭು.. ನನಗೆ ನಿಮ್ಮ ಬೋಧನೆ ತಿಳಿಯುತ್ತಿಲ್ಲ. ದಯಮಾಡಿ ನನ್ನನ್ನು ಹೊರಹೋಗಲು ಅನುಮತಿಸುವಿರಾ..?’ ಎಂದು ಛೇಡಿಸಿದ. ಕಲ್ಲಪ್ಪನವರು ಸಂಯಮದಿಂದಲೇ “ನೀವೇಕೆ ಹೊರಹೋಗುತ್ತೀರಿ ಸ್ವಾಮಿ? ನನಗಾದರೋ ಅದಾಗಲೇ ಬಹಳಷ್ಟು ಸಂಬಳ ಕೊಡುವ ನೌಕರಿ ಸಿಕ್ಕಿದೆ… ಪಾಪ, ನೀವಿನ್ನೂ ಓದಿ ಬದುಕನ್ನು ರೂಪಿಸಿಕೊಳ್ಳಬೇಕಾದವರು. ನೀವೇ ಕುಳಿತು ಕಲಿಯಿರಿ, ನಾನೇ ಹೊರಹೋಗುತ್ತೇನೆ’ ಎಂದುತ್ತರಿಸಿ ಅಲ್ಲಿಂದ ಹೊರನಡೆದರು. ಕ್ಷಣಮಾತ್ರಕ್ಕೆ ಕೆಲವರಿಗೆ ಸತ್ಯನ ನಡೆ ಮಜಾ ಕೊಟ್ಟಿದ್ದರೂ ತದನಂತರ ಹಲವರು ಒಟ್ಟಾಗಿ ಸೇರಿ ಸತ್ಯನನ್ನು ಚೆನ್ನಾಗಿಯೇ ದಬಾಯಿಸಿ ಇನ್ನೊಮ್ಮೆ ಕಲ್ಲಪ್ಪನವರ ತಂಟೆಗೆ ಬಾರದಂತೆ ಎಚ್ಚರಿಸಿದರು.
ಇಂದಿಗೂ ಸಿರಾ ಖಾಸಗಿ ಬಸ್ ಒಂದರಲ್ಲಿ ಕಂಡಕ್ಟರ್ ಕಾರ್ಯ ನಿರ್ವಹಿಸುತ್ತಿರುವ ಸತ್ಯನನ್ನು ಕಂಡಾಗಲೆಲ್ಲಾ ಕಲ್ಲಪ್ಪನವರು ಹದಿನೈದು ವರ್ಷಗಳ ಹಿಂದೆಯೇ ಹೇಳಿದ ಮಾತು ಸತ್ಯದಂತೆ ಭಾಸವಾಗುತ್ತಿರುತ್ತದೆ.– ಪ.ನಾ.ಹಳ್ಳಿ. ಹರೀಶ್ ಕುಮಾರ್, ತುಮಕೂರು