Advertisement

MLA ವೇದವ್ಯಾಸ ಕಾಮತ್‌ ಒತ್ತಡದಿಂದ ಶಿಕ್ಷಕಿಯನ್ನು ವಜಾಗೊಳಿಸಬೇಕಾಯಿತು

08:03 PM Feb 15, 2024 | |

ಮಂಗಳೂರು: ಶಿಕ್ಷಕಿ ಹಿಂದೂಗಳ ಭಾವನೆಗೆ ಧಕ್ಕೆ ಎಸಗಿಲ್ಲ, ಶಾಸಕ ವೇದವ್ಯಾಸ ಕಾಮತ್‌ ಅವರ ಒತ್ತಡದಿಂದ
ಆಕೆಯನ್ನು ವಜಾಗೊಳಿಸಬೇಕಾಯಿತು ಎಂದು ನಗರದ ಖಾಸಗಿ ಶಾಲಾ ಆಡಳಿತ ಮಂಡಳಿ ಗುರುವಾರ ಪತ್ರಿಕಾ ಪ್ರಕಟನೆ ಹೊರಡಿಸಿದೆ.

Advertisement

ರವೀಂದ್ರನಾಥ ಠಾಗೋರರ ವರ್ಕ್‌ ಈಸ್‌ ವರ‍್ಶಿಪ್‌ ಪದ್ಯವನ್ನು ಶಿಕ್ಷಕಿ ತರಗಯಲ್ಲಿ ವಿವರಿಸಿದ್ದು ಮಾತ್ರ. ನಾವು ಶಿಕ್ಷಕಿಯನ್ನು ವಿಚಾರಣೆ ಮಾಡಿದಾಗ ಆಕೆ ಆರೋಪವನ್ನು ನಿರಾಕರಿಸಿದ್ದಾರೆ.ಆಕೆ ಹಿಂದೂ ಧರ್ಮವನ್ನಾಗಲೀ ದೇವರನ್ನಾಗಲೀ ಅಪಮಾನಿಸಿಲ್ಲ. ಆಡಿಯೋ ಕ್ಲಿಪ್ಪಿಂಗ್‌ನಲ್ಲಿ ಶಾಲೆಯ ಬಗ್ಗೆ ಶಿಕ್ಷಕಿಯ ಬಗ್ಗೆ ಆರೋಪಿಸಿರುವ ಮಹಿಳೆ ನಮ್ಮ ಶಾಲಾ ವಿದ್ಯಾರ್ಥಿಗಳ ಪೋಷಕಿ ಎನ್ನುವುದೇ ಸಂಶಯಾಸ್ಪದ ಈ ಬಗ್ಗೆ ನಾವು ಪೊಲೀಸರಿಗೆ ದೂರು ನೀಡಿದ್ದೇವೆ ಎಂದು ಹೇಳಿದೆ.

ಇದನ್ನೂ ಓದಿ : BJP ಶಾಸಕರ ವಿರುದ್ಧ ಕೇಸ್: ಮಂಗಳೂರು ಪೊಲೀಸ್ ಠಾಣೆಗಳ ಎದುರು ಹರತಾಳಕ್ಕೆ ಕರೆ

ಇಷ್ಟರ ಹೊರತಾಗಿಯೂ ಶಾಲೆಯ ಮುಂಭಾಗ ಶಾಸಕ ವೇದವ್ಯಾಸ ಕಾಮತ್‌, ಹಿಂದೂ ಪರಗುಂಪು ಬಂದು ವಿದ್ಯಾರ್ಥಿಗಳನ್ನೇ ಸೇರಿಸಿಕೊಂಡು ಘೋಷಣೆ ಕೂಗಿದ್ದಾರೆ. ಶಾಸಕರನ್ನು ನಾವು ಆಹ್ವಾನಿಸಿದರೂ ಬರದೆ ಹೊರಗೆ ಕುಳಿತು, ಶಿಕ್ಷಕಿಯನ್ನು ವಜಾಗೊಳಿಸಲೇಬೇಕೆಂಬ ಹಠ ಹಿಡಿದಿದ್ದಾರೆ. ಕಾನೂನು ಸುವ್ಯವಸ್ಥೆಯನ್ನು ನಿಭಾಯಿಸುವ ಸಲುವಾಗಿ ಬೇರೆ ದಾರಿಯಿಲ್ಲದೆ ಆಕೆಯನ್ನು ವಜಾ ಮಾಡಬೇಕಾಯಿತು ಎಂದು ಶಾಲಾಡಳಿತ ಮಂಡಳಿ ಹೇಳಿಕೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next