Advertisement

ತ್ಯಾಜ್ಯಮುಕ್ತ ಜಿಲ್ಲೆ ಗುರಿ: ಶಿರ್ವಕ್ಕೆ ಜಿಲ್ಲಾಧಿಕಾರಿ ಭೇಟಿ

08:00 AM Aug 07, 2017 | |

ಶಿರ್ವ: ತ್ಯಾಜ್ಯ ಮುಕ್ತ ಗ್ರಾಮೀಣ ಜಿಲ್ಲೆಯಾಗಿಸುವ  ಗುರಿಯೊಂದಿಗೆ ಜಿಲ್ಲಾಡಳಿತ “ಸ್ವಚ್ಛ ಉಡುಪಿ ಜಿಲ್ಲಾ ಮಿಷನ್‌-2018′ ಘೋಷಿಸಿದ್ದು ಈ ನಿಟ್ಟಿನಲ್ಲಿ ಸರಳ ತ್ಯಾಜ್ಯ ನಿರ್ವಹಣೆಯ ಮಾದರಿಯನ್ನು ಅಳವಡಿಸಲು ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ರವಿವಾರ ಬೆಳ್ಳಂಬೆಳಿಗ್ಗೆ ಶಿರ್ವಕ್ಕೆ ಭೇಟಿ ನೀಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಸ್ಥಳ ಪರಿಶೀಲನೆ ನಡೆಸಿದರು.

Advertisement

ಸ್ಥಳೀಯಾಡಳಿತದ ನಿರ್ಲಕ್ಷé
ಉಡುಪಿ ಜಿಲ್ಲೆಯಲ್ಲಿ ಅತೀ ಹೆಚ್ಚು ಆದಾಯವಿರುವ ಶಿರ್ವ ಗ್ರಾ.ಪಂ.ವ್ಯಾಪ್ತಿಯಲ್ಲಿ ಕಸ/ತ್ಯಾಜ್ಯ ವಿಲೇವಾರಿ ಅತಿ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿತ್ತು.ಶಿರ್ವದ ಕಸದ ಸಮಸ್ಯೆ, ಬೀದಿ ನಾಯಿಗಳ ಸಮಸ್ಯೆ,ಮೀನು ಮಾರುಕಟ್ಟೆ , ಪಾಳು ಬಿದ್ದ ಸರಕಾರಿ ಕಟ್ಟಡಗಳು ಇತ್ಯಾದಿ ಜ್ವಲಂತ ಸಮಸ್ಯೆಗಳ ಬಗ್ಗೆ ಸ್ಥಳೀಯಾಡಳಿತ ನಿರ್ಲಕ್ಷé ವಹಿಸಿತ್ತು. ಈ ಬಗ್ಗೆ ಉದಯವಾಣಿ ಸಚಿತ್ರ ವರದಿ ನೀಡಿದ್ದು ,ಇದೀಗ ಜಿಲ್ಲಾಧಿಕಾರಿಗಳ ರವಿವಾರದ ಬೆಳಗ್ಗಿನ ಭೇಟಿ ಶಿರ್ವ ಗ್ರಾಮಸ್ಥರಲ್ಲಿ ಕುತೂಹಲ ಮೂಡಿಸಿದೆ.

ಗ್ರಾ.ಪಂ.ಗೆ ಸೂಚನೆ
ಕಸತ್ಯಾಜ್ಯ ವಿಲೇವಾರಿ ಸಲುವಾಗಿ ಗ್ರಾ.ಪಂ.ಸದಸ್ಯರು ಕೂಡಾ ವಾರ್ಡ್‌ಮಟ್ಟದಲ್ಲಿ ಘಟಕ ಸ್ಥಾಪಿಸಲು ಆಸಕ್ತಿ ವಹಿಸಬೇಕಾಗಿದೆ. ಶಿರ್ವದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲು ಸಾರ್ವಜನಿಕ ಅಭಿಪ್ರಾಯ ಕೋÅಢೀಕರಿಸಿ ಸಾಧಕ ಬಾಧಕಗಳನ್ನು ಚರ್ಚಿಸಿ ಗ್ರಾ.ಪಂ.ಸೂಕ್ತ ನಿರ್ಣಯ ಕೈಗೊಂಡು ಈ ಬಗ್ಗೆ ಕೂಡಲೇ ನಿರ್ಧಾರ ತಿಳಿಸುವಂತೆ ಗ್ರಾ.ಪಂ.ಗೆ ಜಿಲ್ಲಾಧಿಕಾರಿ ಸೂಚಿಸಿದರು ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.ಈ ಸಂದರ್ಭ ಜಿಲ್ಲಾಧಿಕಾರಿಗಳ ಭೇಟಿಯ ವೇಳೆ ಉಡುಪಿ ಜಿ.ಪಂ. ಯೋಜನಾಧಿಕಾರಿ ಶ್ರೀನಿವಾಸ ರಾವ್‌, ಪರಿಸರ ಅಭಿಯಂತರು, ಶಿರ್ವ ಗ್ರಾ.ಪಂ.ಅಧ್ಯಕ್ಷರು, ಸದಸ್ಯರು, ಪಂಚಾಯತ್‌ ಅಭಿವೃದ್ಧಿ ಅಧಿಕಾರಿ, ಗ್ರಾಮಕರಣಿಕರು ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಸಾರ್ವಜನಿಕರ ಅಸಹಕಾರ
ಜಿಲ್ಲಾಧಿಕಾರಿಗಳು ಕಸ ವಿಲೇವಾರಿ ಸಮಸ್ಯೆಯಿರುವ ಗ್ರಾ.ಪಂ.ಗಳಿಗೆ ಭೇಟಿ ನೀಡುತ್ತಿದ್ದು, ಶಿರ್ವ ಭೇಟಿಯ ಸಂದರ್ಭದಲ್ಲಿ ಕಸ ವಿಲೇವಾರಿಯ ಬಗ್ಗೆ ಗ್ರಾ.ಪಂ. ನಿರ್ಲಕ್ಷé ಕೂಡಾ ತೋರಿಬಂದಿದ್ದು, ಸಾರ್ವಜನಿಕರ ಅಸಹಕಾರವೆಂಬಂತೆ ಬೆಳ್ಳಂಬೆಳಗ್ಗೆ ದ್ವಿಚಕ್ರ ವಾಹನದಲ್ಲಿ ಬಂದ ಪರಿಸರದ ಸುಶಿಕ್ಷಿತ ನಾಗರಿಕರು ಕಸವನ್ನು ರಸ್ತೆ ಬದಿಯಲ್ಲಿ ಸುರಿದ ಘಟನೆ ಕೂಡಾ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next