Advertisement

ಕೆಮ್ರಾಲ್ಗೆ ಟ್ಯಾಂಕರ್‌ ನೀರು ಅನಿವಾರ್ಯ

05:21 PM May 03, 2019 | pallavi |

ರಘುನಾಥ್‌ ಕಾಮತ್‌ ಕೆಂಚನಕೆರೆ

Advertisement

ಕೆಮ್ರಾಲ್: ಕೆಮ್ರಾಲ್ ಗ್ರಾ.ಪಂ. ವ್ಯಾಪ್ತಿಯ ಎರಡು ಓವರ್‌ ಹೆಡ್‌ಟ್ಯಾಂಕ್‌ಗಳಿಗೆ ಕಿನ್ನಿಗೋಳಿ ಬಹುಗ್ರಾಮ ಯೋಜನೆಯ ಸಮರ್ಪಕವಾಗಿ ನೀರು ಒದಗಿಸಿದರೆ ಯಾವುದೇ ಸಮಸ್ಯೆಯಾಗುವುದಿಲ್ಲ . ಈಗ ಬಹುಗ್ರಾಮ ಕುಡಿಯುವ ನೀರನ್ನು ಎರಡು ದಿನಗಳಿಗೊಮ್ಮೆ ಸರಬರಾಜಾಗುತ್ತಿದ್ದು, ಪ್ರಶರ್‌ ಕಡಿಮೆಯಿಂದಾಗಿ ಓವರ್‌ ಹೆಡ್‌ಟ್ಯಾಂಕ್‌ ತುಂಬದ ಕಾರಣ ನೀರಿನ ಸಮಸ್ಯೆ ಉದ್ಭವಿಸಿದೆ.

ಗ್ರಾ.ಪಂ.ನಲ್ಲಿ 4 ವಾರ್ಡ್‌ ಗಳಿದ್ದು 7,367 ಜನಸಂಖ್ಯೆ ಇದ್ದು, 786 ಕುಡಿಯುವ ನೀರಿನ ನಳ್ಳಿ ನೀರಿನ ಸಂಪರ್ಕ ಇದೆ , 2 ತೆರೆದ ಬಾವಿ, 12 ಬೋರ್‌ವೆಲ್ಗಳಿವೆ, 4 ಓವರ್‌ ಹೆಡ್‌ಟ್ಯಾಂಕ್‌ ಇದೆ.

ಪಂಜ ಉಲ್ಯದಲ್ಲಿ ನೀರಿನ ಸಮಸ್ಯೆ

ಪಂಜ ಗ್ರಾಮದ ನದಿ ಭಾಗದಲ್ಲಿನ ಪಂಜ, ಉಲ್ಯ ಪರಿಸರದಲ್ಲಿ ಉಪ್ಪು ನೀರಿನ ಒರೆತೆವಿದೆ. ಅಲ್ಲಿನ ಪ್ರದೇಶಕ್ಕೆ ಕುಡಿಯುವ ನೀರಿನ ಆವಶ್ಯಕತೆ ಇದ್ದು, ಭಾಗದ ಕೆಲವು ಮನೆಗಳಿಗೆ ಕಳೆದ ಒಂದು ವಾರದಿಂದ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಕೆಂಪುಗುಡ್ಡೆ , ಕೆಮ್ರಾಲ್ ಮುಲ್ಲಟ್ಟೊ ಪ್ರದೇಶದಲ್ಲಿ ನೀರಿನ ಅಭಾವವಿದ್ದು ಕೆಲವು ದಿನಗಳಲ್ಲಿ ಸಮಸ್ಯೆ ಆಗಬಹುದು . ಅತ್ತೂರು , ಭಟ್ಟಕೋಡಿ ಪ್ರದೇಶದ ಮನೆಗಳಿಗೆ ನೀರಿನ ಸಮಸ್ಯೆ ಇದ್ದು ಎರಡು ದಿನಗಳಿಗೆ ಒಮ್ಮೆ ನೀರು ಸರಬರಾಜು ನಡೆಯುತ್ತಿದೆ.

ಕೊಳವೆ ಬಾವಿ ನಿರ್ಮಾಣ
– ನಾಗೇಶ್‌ ಅಂಚನ್‌, ಬೊಳ್ಳೂರು ,ಅಧ್ಯಕ್ಷರು, ಕೆಮ್ರಾಲ್ ಗ್ರಾ.ಪಂ.

ಕುಡಿಯುವ ನೀರಿನ ಸಮಸ್ಯೆ ಮನಗಂಡು ಪಂಚಾಯತ್‌ ವ್ಯಾಪ್ತಿಯಲ್ಲಿ ನೂತನ ಕೊಳವೆ ಬಾವಿ ನಿರ್ಮಾಣ ಮಾಡಲಾಗಿದೆ. ವಾರ್ಡ್‌ ಮಟ್ಟದಲ್ಲಿ ನೀರಿನ ಸಮಸ್ಯೆಯ ಬಗ್ಗೆ ಈಗಾಗಲೇ ವರದಿ ಸಿದ್ಧಪಡಿಸಲಾಗಿದ್ದು ಅದಕ್ಕೆ ನೀರಿನ ಮೂಲಕ್ಕೆ ವ್ಯವಸ್ಥೆ ಮಾಡಲಾಗುವುದು.
••ಕುಡಿಯುವ ನೀರಿನ ಸಮಸ್ಯೆ
•ಎರಡೂ ದಿನಕ್ಕೊಮ್ಮೆ ಸರಬರಾಜು
•ಪರ್ಯಾಯ ವ್ಯವಸ್ಥೆಗೆ ಆಲೋಚನೆ
ಪರ್ಯಾಯ ವ್ಯವಸ್ಥೆ
– ರಮೇಶ್‌ ರಾಥೋಡ್‌, ಪಿಡಿಒ, ಕೆಮ್ರಾಲ್ ಗ್ರಾಮ ಪಂಚಾಯತ್‌

ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ಗ್ರಾಮಪಂಚಾಯತ್‌ನ ಎರಡು ಓವರ್‌ ಹೆಡ್‌ಟ್ಯಾಂಕ್‌ಗೆ ಸಂಪರ್ಕ ಕಲ್ಪಿಸಲಾಗಿದೆ. ಆದರೇ ನೀರಿನ ಪ್ರಶರ್‌ ಇಲ್ಲದೆ ಟ್ಯಾಂಕ್‌ಗೆ ನೀರು ತುಂಬುತ್ತಿಲ್ಲ ಅದಕ್ಕೆ ಪರ್ಯಾಯ ವ್ಯವಸ್ಥೆ ಮಾಡಬೇಕಾಗಿದೆ .
Advertisement
Advertisement

Udayavani is now on Telegram. Click here to join our channel and stay updated with the latest news.

Next