Advertisement

ಟ್ಯಾಂಕರ್‌ ನೀರು ಪೂರೈಕೆ ಪ್ರಾರಂಭಿಸಲು ಸೂಚನೆ

03:45 PM Sep 08, 2017 | |

ಇಂಡಿ: ತಾಲೂಕಿನಲ್ಲಿ ಸರ್ಮಪಕ ಮಳೆಯಾಗದೆ ಇರುವುದರಿಂದ ಅನೇಕ ಹಳ್ಳಿಗಳಲ್ಲಿ ಮತ್ತು ತೋಟದ
ವಸತಿ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ನೀರಿನ ತೊಂದರೆ ಇದೆ. ಕೂಡಲೇ ಟ್ಯಾಂಕರ್‌ ನೀರು ಪೂರೈಕೆ
ಪ್ರಾರಂಭಿಸುವಂತೆ ಶಾಸಕ ಯಶವಂತರಾಯಗೌಡ ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ತಾಲೂಕಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಸಮರ್ಪಕವಾಗಿ ಕಾರ್ಯನಿರ್ವವಹಿಸುತ್ತಿಲ್ಲ ಏಕೆ?
ಇಲಾಖೆ ಮೂಲ ಉದ್ದೇಶ ಈಡೇರದಿದ್ದರೆ ಇಂತಹ ಯೋಜನೆಗಳು ಎಷ್ಟಿದ್ದರೇನು. ಮುಖ್ಯಮಂತ್ರಿಗಳು
ಬರುವುದರೊಳಗಾಗಿ ಪ್ರತಿ ಗ್ರಾಮೀಣ ಭಾಗದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕ ಪ್ರಾರಂಭಿಸಲು
ಕ್ರಮ ಕೈಗೊಳ್ಳಬೇಕು. ಯಾವುದೇ ತಾಂತ್ರಿಕ ಕಾರಣ ಹೇಳಕೂಡದು ಎಂದು ಅಧಿಕಾರಿ ಬಿ.ಎಫ್‌. ನಾಯ್ಕರ
ಅವರಿಗೆ ಸೂಚಿಸಿದರು.

ಅಕ್ಟೋಬರ್‌ 16ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ತಾಲೂಕಿಗೆ ಆಹ್ವಾನಿಸಿ ಭೀಮಾಶಂಕರ ಸಕ್ಕರೆ ಕಾರ್ಖಾನೆ, ಸುಮಾರು 10 ಕೋಟಿ ರೂ. ಅನುದಾನದಲ್ಲಿ ನಿರ್ಮಾಣಗೊಂಡ ಮಿನಿ ವಿಧಾನಸೌಧ, ಬಹು ಹಳ್ಳಿ ಕುಡಿಯುವ ನೀರಿನ ಯೋಜನೆ, ಝಳಕಿ ಡಿಪ್ಲೋಮಾ ಕಾಲೇಜು, ಮೊರಾರ್ಜಿ ವಸತಿ ಶಾಲೆಗಳು, ನಗರದ ಅಲ್ಪಸಂಖ್ಯಾತ ವಸತಿ ಶಾಲೆ ಹೀಗೆ ಹತ್ತು ಹಲವಾರು ಕಾಮಗಾರಿ ಲೋಕಾರ್ಪಣೆ ಮಾಡಿಸಲಾಗುವುದು ಎಂದು ಹೇಳಿದರು.

ಕಂದಾಯ ಉಪವಿಭಾಗಾಧಿಕಾರಿ ಮಹಾದೇವ ಮುರಗಿ, ಸಿಪಿಐ ಚಂದ್ರಶೇಖರ ನಂದರೆಡ್ಡಿ, ತಹಶೀಲ್ದಾರ
ಸಂತೋಷ ಮ್ಯಾಗೇರಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರಾಜಕುಮಾರ ತೊರವಿ, ತೋಟಗಾರಿಕಾ
ಅಧಿಕಾರಿ ಎಚ್‌.ಎಸ್‌. ಪಾಟೀಲ, ಶಿಕ್ಷಣಾಧಿಕಾರಿ ಜೆ.ಟಿ. ತಳಕೇರಿ, ಬಿ.ಎಫ್‌. ನಾಯ್ಕರ, ಕೃಷಿ ಅಧಿಕಾರಿ
ಮಹಾದೇವಪ್ಪ ಏವೂರ, ಪಶುವೈದ್ಯಾಧಿಕಾರಿ ಸಿ.ಬಿ.ಕುಂಬಾರ, ಸಣ್ಣ ನೀರಾವರಿ ಅಧಿಕಾರಿ ಬಿ.ಐ.
ಬಿರಾದಾರ, ಶಿಶು ಅಭಿವೃದ್ಧಿ ಅಧಿಕಾರಿ ಮಲ್ಲಿಕಾರ್ಜುನ ರೆಡ್ಡಿ, ಬಿಸಿಎಂ ಅಧಿಕಾರಿ ಬಿ.ಎಂ. ಕಾರೆ, ಪಿಎಸ್‌ಐ
ಜಿ.ಎಸ್‌. ಬಿರಾದಾರ ಸೇರಿದಂತೆ ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next