ಚೆನ್ನೈ: ಅಂಚೆಯಣ್ಣ ಡಿ.ಶಿವನ್ ದಟ್ಟ ಕಾಡುಗಳಲ್ಲಿ ಪತ್ರಗಳನ್ನು ತಲುಪಿಸಲು ನಡೆದು ಹೋದದದ್ದು 1-2 ವರ್ಷಗಳಲ್ಲ.
ಮೂವತ್ತು ವರ್ಷಗಳ ಕಾಲ ಅವರು ಕ್ರೂರ ಮೃಗಗಳಿಗೆ ಬೆದರದೆ ಕರ್ತವ್ಯ ನಿರ್ವಹಿಸಿದ್ದರು.
ಹೀಗೆ ಅಭೂತಪೂರ್ವವಾಗಿ ಕರ್ತವ್ಯ ನಿರ್ವಹಿಸಿದ ಶಿವನ್ ಕಳೆದ ವಾರ ನಿವೃತ್ತಿಯಾದರು.
ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಅವರು ಶಿವನ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಹಾಕಿದ ಫೋಟೋ ಮತ್ತು ಶೀರ್ಷಿಕೆ ಭಾರೀ ವೈರಲ್ ಆಗಿದೆ.
Related Articles
ತಮಿಳುನಾಡಿನ ನೀಲಗಿರಿ ಪರ್ವತ ಪ್ರದೇಶದ ಹಿಲ್‌ಗ್ರೋವ್ ಅಂಚೆ ಕಚೇರಿಯಲ್ಲಿ ಪೋಸ್ಟ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು.
ಅವರು ಕುನೂರ್ ಎಂಬ ಪ್ರದೇಶದ ಕುಗ್ರಾಮಗಳಿಗೆ ನಡೆದು ಕೊಂಡು ಹೋಗಿ ಪತ್ರ ಬಟವಾಡೆ ಮಾಡುತ್ತಿದ್ದರು.
ಹಲವಾರು ಬಾರಿ ಆನೆ, ಕರಡಿ, ಇತರ ಕಾಡುಪ್ರಾಣಿಗಳು ಅವರನ್ನು ಓಡಿಸಿಕೊಂಡು ಬಂದಿವೆ.
ಹಲವಾರು ನದಿ, ತೊರೆಗಳನ್ನು ಅವರು ದಾಟಿದ್ದಾರೆ. ಕಷ್ಟವಿದ್ದರೂ ಶ್ರದ್ಧೆಯಿಂದ ಕರ್ತವ್ಯ ನಿರ್ವಹಿಸಿದ್ದರು ಎಂದು ಸುಪ್ರಿಯಾ ಸಾಹು ಟ್ವೀಟ್ ಮಾಡಿದ್ದಾರೆ.