Advertisement
ಅಲ್ಲಿ ಸ್ವರಗಳಿಗೆ ವಿರಾಮವೇ ಇಲ್ಲ. ರಾತ್ರಿ ಕಪ್ಪಾದರೂ, ಆ ತಂಬೂರಿ ನಿದ್ರಿಸುವುದೂ ಇಲ್ಲ. ತೊಂಬತ್ತು ವರುಷಗಳಿಂದ ತಂಬೂರಿ, ಹೀಗೆ ನಿರಂತರವಾಗಿ- ಸುಶ್ರಾವ್ಯವಾಗಿ ನುಡಿಯುತ್ತಿರುವುದು ಹುಬ್ಬಳ್ಳಿಯ ಶ್ರೀ ಸಿದ್ಧಾರೂಢರ ಮಠದಲ್ಲಿ. ಒಂದು ದಿನವೂ ಆ ತಂಬೂರಿಯನ್ನು ನೆಲಕ್ಕೆ ಇಡದಂತೆ, ಸ್ವರತಪಸ್ಸನ್ನು ಆಚರಿಸಿಕೊಂಡು ಬಂದಿರುವುದು ಮಠದ ಹೆಗ್ಗಳಿಕೆ. ಶ್ರೀಮಠಕ್ಕೆ ಬಂದ ಯಾರಿಗೇ ಆದರೂ, ಸ್ವಾಗತಿಸುವುದು ಈ ತಂಬೂರಿಯ ಸ್ವರಗಳು.
Related Articles
Advertisement
ತಂಬೂರಿಗೂ ಆರತಿ: ಇಲ್ಲಿ ಸೇವೆಗೊಳ್ಳುವ ತಂಬುರಾಗೆ ದಿನದ ಮೂರೂ ಹೊತ್ತು ಪೂಜೆ ಹಾಗೂ ಆರತಿ ಮಾಡಲಾಗುತ್ತದೆ. ಬೆಳಗ್ಗೆ 6, ಸಂಜೆ 6 ಹಾಗೂ ರಾತ್ರಿ 8 ಗಂಟೆ ವೇಳೆ ನಡೆಯುವ ಪೂಜೆ ವೇಳೆ ಇದಕ್ಕೂ ಪೂಜೆ, ಆರತಿ ಮಾಡಲಾಗುತ್ತದೆ. ಒಟ್ಟಿನಲ್ಲಿ ಈ ಮಠಕ್ಕೆ ಬಂದ ಭಕ್ತಾದಿಗಳಿಗೆ “ಸ್ವರಪ್ರಸಾದ’ ಈ ತಂಬೂರಿ ಮೂಲಕವೇ ಸಿಗುತ್ತಿದೆ ಎನ್ನಬಹುದು.
ತಂಬೂರಿ! ಉತ್ತರದಿಂದ, ದಕ್ಷಿಣಕೂ…: ತಂಬೂರಿಗೆ ಭಾರತೀಯ ಸಂಗೀತ ಪರಂಪರೆಯಲ್ಲಿ ವಿಶಿಷ್ಟವಾದ ಸ್ಥಾನವಿದೆ. ಹಿಂದೂಸ್ಥಾನಿ ಸಂಗೀತಗಾರರು “ತಾನ್ಪುರ’ ಎಂಬ ಪದ ಬಳಸಿದರೆ, ಕರ್ನಾಟಕ ಸಂಗೀತಗಾರರು “ತಂಬುರಾ’ ಎನ್ನುತ್ತಾರೆ. “16ನೇ ಶತಮಾನದ ಅಂತ್ಯದ ವೇಳೆ ತಾನ್ಪುರಾ ಆಧುನಿಕ ರೂಪದಲ್ಲಿ ಅಭಿವೃದ್ಧಿಗೊಂಡಿತು’ ಎಂದು ಸಿತಾರ್ ತಜ್ಞ ಸ್ಟಿಫನ್ ಸ್ಲಾವೆಕ್, ಅದರ ವೃತ್ತಾಂತ ಹೇಳುತ್ತಾರೆ.
ಮಿರಾಜ್‌ನ ಮಿರಾಜ್ಕರ್ ಕುಟುಂಬದವರು ವಿಶ್ವದ ತಾನ್ಪುರಾಗಳ ಅತ್ಯುತ್ತಮ ಉತ್ಪಾದಕರು. ಈ ಕಕ್ಷಿುಟುಂಬ, 7 ತಲೆಮಾರುಗಳಿಂದ ತಾನ್ಪುರಾಗಳನ್ನು ತಯಾರಿಸುತ್ತಿದೆ. ದೊಡ್ಡ ತಾನ್ಪುರಾಗಳನ್ನು ಗಂಡಸರು, ಸಣ್ಣ ತಾನ್ಪುರಾಗಳನ್ನು ಮಹಿಳೆಯರೂ ಬಳಸುವುದು ವಾಡಿಕೆ. ಉತ್ತರ ಭಾರತೀಯರು “ಮಿರಾಜ್ ಶೈಲಿ’ಯನ್ನೂ, ದಕ್ಷಿಣದವರು “ತಾಂಜೋರ್’ ಶೈಲಿಯನ್ನೂ ನುಡಿಸುತ್ತಾರೆ.
* ರಂಗನಾಥ ಕಮತರ