ಕೊಪ್ಪಳ: ಕೊರೊನಾ ಉಲ½ಣದ ಹಿನ್ನೆಲೆಯಲ್ಲಿ ನಾಡಿನ ಪ್ರಸಿದ್ಧ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವವನ್ನು ಈ ಬಾರಿ ರದ್ದುಪಡಿಸಲಾಗಿದೆ ಆದರೂ ಧಾರ್ಮಿಕ ವಿಧಿ ವಿಧಾನಗಳಿಗೆ ಯಾವ ತೊಂದರೆಯೂ ಬಾರದಂತೆ ಜಾತ್ರೆಗೆ ಸಾಂಕೇತಿಕವಾಗಿ ಚಾಲನೆ ನೀಡಲಾಯಿತು.
ಪ್ರತಿ ವರ್ಷವೂ ಮಠದ ಸಂಪ್ರದಾಯದಂತೆ ತಾಲೂಕಿನ ಹಲಗೇರಿಯಿಂದ ಮಹಾ ರಥೋತ್ಸವದ ಕಳಸ, ಮುದ್ದಾಬಳ್ಳಿ ಹಾಗೂ ಮಂಗಳಾಪುರದಿಂದ ಮೂರ್ತಿ, ಜಡೇಗೌಡರ ಮನೆಯಿಂದ ಪಲ್ಲಕ್ಕಿಯ ಮೆರವಣಿಗೆ ಅದ್ಧೂರಿಯಾಗಿ ಶ್ರೀಮಠಕ್ಕೆ ಆಗಮಿಸುತ್ತಿದ್ದವು. ಆದರೆ ಈ ಬಾರಿ ಜಾತ್ರೆಯ ಎಲ್ಲ ಧಾರ್ಮಿಕ ಕಾರ್ಯಕ್ರಮಗಳು ರದ್ದಾಗಿವೆ ಎಂದು ಗವಿಮಠವು ತಿಳಿಸಿದೆ.
ಆದರೆ ಧಾರ್ಮಿಕ ಕಾರ್ಯಗಳಿಗೆ ಯಾವ ತೊಂದರೆ ಬಾರದಂತೆ ಎಲ್ಲ ಗ್ರಾಮಗಳಿಂದಲೂ ಸರಳವಾಗಿಯೇ ಮೂರ್ತಿ, ಕಳಸ, ಪಲ್ಲಕ್ಕಿ ತಂದು ಅರ್ಪಿಸಲಾಯಿತು. ಧಾರ್ಮಿಕ ಕಾರ್ಯಕ್ರಮಗಳಿಗೆ ಆಂತರಿಕವಾಗಿಯೇ ಅತ್ಯಂತ ಸರಳ ಹಾಗೂ ಸಾಂಕೇತಿಕವಾಗಿ ವಿದ್ಯುಕ್ತವಾಗಿ ಚಾಲನೆ ನೀಡಲಾಗಿದೆ. ಮಹಾರಥ ಸ್ವತ್ಛಗೊಳಿಸಿದ ಶ್ರೀಗಳು: ಅಭಿನವ ಗವಿಸಿದ್ದೇಶ್ವರ ಮಹಾ ಸ್ವಾಮಿಗಳು ಶನಿವಾರ ಮಹಾರಥವನ್ನು ಸ್ವತ್ಛಗೊಳಿಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೋವಿಡ್-19 ಹಾಗೂ ಓಮಿಕ್ರಾನ್ ಸೋಂಕಿನ ಉಲ½ಣದ ಹಿನ್ನೆಲೆಯಲ್ಲಿ ಗವಿಸಿದ್ದೇಶ್ವರ ಜಾತ್ರೆಯ ಎಲ್ಲ ಧಾರ್ಮಿಕ ಕಾರ್ಯಕ್ರಮಗಳು ರದ್ದಾಗಿವೆ. ಯಾವುದೇ ಕಾರ್ಯಕ್ರಮಗಳೂ ನಡೆಯುವುದಿಲ್ಲ ಎಂದು ಶ್ರೀಮಠ ತಿಳಿಸಿದೆ.
ಈ ಮಧ್ಯೆ ರಥವನ್ನು ಶ್ರೀಗಳು ಸರಳತೆಯಿಂದಲೇ ಸ್ವತ್ಛಗೊಳಿಸುವ ವೀಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಭಕ್ತ ವಲಯದಲ್ಲಿಯೂ ಕುತೂಹಲ ಮೂಡಿಸಿದೆ. ಮಹಾ ರಥೋತ್ಸವ ನಡೆಯುತ್ತದೆಯಾ? ಅಥವಾ ಇಲ್ಲವಾ? ಎನ್ನುವ ಗೊಂದಲ ಮೂಡಿದೆ. ಕೇವಲ ಪೂಜೆ ಸಲ್ಲಿಸಲಾಗುತ್ತಾ? ಅಥವಾ ಮಹಾ ರಥೋತ್ಸವ ಸಾಂಕೇತಿಕವಾಗಿ ನೆರವೇರಲಿದೆಯಾ ಎನ್ನುವ ಪ್ರಶ್ನೆಗಳೂ ಮೂಡಿವೆ.