Advertisement

“ಭಾರತಾಂಬೆಯ ಮಕ್ಕಳ ಬೆವರು, ರಕ್ತದ ಫ‌ಲವೇ ತಾಜ್‌’

06:00 AM Oct 18, 2017 | Harsha Rao |

ಲಕ್ನೋ: “ತಾಜ್‌ಮಹಲ್‌ ಅನ್ನು ನಿರ್ಮಿಸಿದ್ದು ಭಾರತ  ಮಾತೆಯ ಮಕ್ಕಳು. ಅದರ ನಿರ್ಮಾಣಕ್ಕಾಗಿ ಅವರೆ ಲ್ಲರೂ ಬೆವರು ಮತ್ತು ರಕ್ತ ಹರಿಸಿದ್ದಾರೆ.ಹಾಗಾಗಿ, ಯಾರು ನಿರ್ಮಿಸಿದರು ಎನ್ನುವುದು ಮುಖ್ಯವಲ್ಲ. ಐತಿಹಾಸಿಕ ಸ್ಮಾರಕವಾದ ಅದನ್ನು ರಕ್ಷಿಸುವುದು ಸರಕಾರದ ಹೊಣೆ.’

Advertisement

ಹೀಗೆಂದು ಹೇಳಿರುವುದು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌. ಇದೇ ರಾಜ್ಯದ ಬಿಜೆಪಿ ಶಾಸಕ ಸಂಗೀತ್‌ ಸೋಮ್‌ ಅವರು ತಾಜ್‌ಮಹಲ್‌ ಭಾರತದ ಇತಿಹಾಸದ ಕಪ್ಪುಚುಕ್ಕೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ ಬೆನ್ನಲ್ಲೇ ಸಿಎಂ ಯೋಗಿ ಅವರಿಂದ ಸಂಪೂರ್ಣ ತದ್ವಿರುದ್ಧ ಹೇಳಿಕೆ ಹೊರಬಿದ್ದಿದೆ. ಅಷ್ಟೇ ಅಲ್ಲ, ಇದೇ 26ರಂದು ಪ್ರೇಮಸೌಧಕ್ಕೆ ಭೇಟಿ ನೀಡಿ, ಅಲ್ಲಿನ ವಿವಿಧ ಯೋಜನೆಗಳ ಪರಿಶೀಲನೆ ನಡೆಸುವುದಾಗಿಯೂ ತಿಳಿಸಿದ್ದಾರೆ. 

ಇದೇ ವೇಳೆ, ಶಾಸಕ ಸೋಮ್‌ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಸಮಾಜವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿ ಅಜಂ ಖಾನ್‌, “ತಾಜ್‌ಮಹಲ್‌ ದಾಸ್ಯದ ಸಂಕೇತವೆಂದಾದರೆ, ಅದೊಂದನ್ನಷ್ಟೇ ಅಲ್ಲ, ಅದರ ಜೊತೆಗೆ ರಾಷ್ಟ್ರಪತಿ ಭವನ, ಸಂಸತ್‌ ಭವನ ಹಾಗೂ ಕೆಂಪು ಕೋಟೆಯಂಥ ಸ್ಮಾರಕಗಳನ್ನೂ ಧ್ವಂಸಗೊಳಿಸಬೇಕಾ ಗುತ್ತದೆ. ಇವುಗಳು ಕೂಡ ದಾಸ್ಯದ ಸಂಕೇತವೇ ಅಲ್ಲವೇ’ ಎಂದು ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next