ಸೇಡಂ: ಸೇಡಂ ಜಿಲ್ಲಾ ರಚನಾ ಹೋರಾಟ ಸಮಿತಿ ವತಿಯಿಂದ ಪಟ್ಟಣದ ಕೊತ್ತಲ ಬಸವೇಶ್ವರ ದೇವಾಲಯ ಆವರಣದಲ್ಲಿ ಹಮ್ಮಿಕೊಂಡಿದ್ದ ಮಠಾಧೀಶರ ನೇತೃತ್ವದ ಪೂರ್ವಭಾವಿ ಸಭೆಯಲ್ಲಿ ಸ್ವಾಮೀಜಿಗಳು ಸಾಮಾಜಿಕ ಚಳವಳಿಗೆ ಕರೆಕೊಟ್ಟರು. ಪಕ್ಷಾತೀತವಾಗಿ ಪ್ರತಿಯೊಬ್ಬರೂ ಸೇಡಂ ಜಿಲ್ಲೆಯಾಗಿಸುವ ನಿಟ್ಟಿನಲ್ಲಿ ಚಳವಳಿ ಪ್ರಾರಂಭಿಸಬೇಕು. ಜಿಲ್ಲಾ ಕೇಂದ್ರ ಮಾಡುವವರೆಗೂ ಹಿಂದೇಟು ಹಾಕಬಾರದು ಎಂದು ಶ್ರೀ ಕೊತ್ತಲ ಬಸವೇಶ್ವರ ಸಂಸ್ಥಾನದ ಪೀಠಾಧಿ ಪತಿ ಶ್ರೀ ಸದಾಶಿವ ಸ್ವಾಮೀಜಿ ಕರೆ ನೀಡಿದರು.
ಸೇಡಂ ತಾಲೂಕು ಎಲ್ಲ ರೀತಿಯಿಂದಲೂ ಸಂಪದ್ಭರಿತವಾಗಿದೆ. ಜಿಲ್ಲೆಯಾಗುವುದರಿಂದ ಸಿಮೆಂಟ್ ಕಾರ್ಖಾನೆಗಳು ಹಾಗೂ ವ್ಯಾಪಾರದ ತೆರಿಗೆ ನಮ್ಮವರಿಗೆ ಉಪಯೋಗವಾಗುತ್ತದೆ. ವಿಜಯನಗರದ ನಂತರ ಸೇಡಂ ಜಿಲ್ಲೆಯಾಗಿಸುವ ಮೂಲಕ ಇಲ್ಲಿನ ಪ್ರವಾಸೋದ್ಯಮ ಅಭಿವೃದ್ಧಿ ಮಾಡಬಹುದು. ಇದರಿಂದ ಉದ್ಯೋಗ ಸೃಷ್ಟಿಯಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಾಮಾಜಿಕ ಚಳವಳಿ ಕುರಿತು ಚರ್ಚೆಗಳಾಗಬೇಕು. 50 ವರ್ಷ ಹಿಂದಿದ್ದೇವೆ ಎಂದು ದಕ್ಷಿಣ ಭಾರತದವರ ಹೇಳಿಕೆಯಂತೆ ಬದುಕಬಾರದು. ಸೇಡಂ ಜಿಲ್ಲೆಯಾದರೆ ಈ ಭಾಗ ಸಮೃದ್ಧ ಕೇಂದ್ರವಾಗುತ್ತದೆ. ರಾಷ್ಟ್ರಕೂಟರ ನೆಲ ಮತ್ತೆ ಗುರುತಿಸುವಂತಾಗುತ್ತದೆ ಎಂದು ಹೇಳಿದರು.
ಶಿವಶಂಕರೇಶ್ವರ ಮಠದ ಶಿವಶಂಕರ ಶಿವಾಚಾರ್ಯರು, ಹಾಲಪ್ಪಯ್ಯ ವಿರಕ್ತ ಮಠದ ಪಂಚಾಕ್ಷರಿ ಸ್ವಾಮೀಜಿ, ಮಾಜಿ ಉಪ ಸಭಾಪತಿ ಚಂದ್ರಶೇಖರರೆಡ್ಡಿ ದೇಶಮುಖ ಮದನಾ, ಹಿರಿಯ ವಕೀಲ ವಿಭಾಕರ ಪಾಟೀಲ, ಮಾಜಿ ಶಾಸಕ ನಾಗರೆಡ್ಡಿ ಪಾಟೀಲ, ಕಾಂಗ್ರೆಸ್ ಮುಖಂಡ ಮುಕ್ರಂಖಾನ್, ಪ್ರೊ| ಬಿ.ಆರ್. ಅಣ್ಣಾಸಾಗರ, ವಿಶ್ವ ಹಿಂದೂ ಪರಿಷತ್ ವಿಭಾಗ ಸಂಘಟನಾ ಕಾರ್ಯದರ್ಶಿ ಶಿವಕುಮಾರ ಬೋಳಶೆಟ್ಟಿ , ಡಾ| ಬಿದರಿ ಚಂದ್ರಕಲಾ ಮಾತನಾಡಿದರು.
ಹಿರಿಯ ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರು ಪ್ರಾಸ್ತಾವಿಕ ಮಾತನಾಡಿದರು. ಪತ್ರಕರ್ತರ ಸಂಘದ ಅಧ್ಯಕ್ಷ ಶಿವಕುಮಾರ ನಿಡಗುಂದಾ ಸ್ವಾಗತಿಸಿದರು, ಕಾರ್ಯದರ್ಶಿ ಶರಣು ಮಹಾಗಾಂವ ನಿರೂಪಿಸಿದರು, ಜಗನ್ನಾಥ ತರ್ನಳ್ಳಿ ವಂದಿಸಿದರು.
ಹಾಪಕಾಮ್ಸ್ ರಾಜ್ಯಾಧ್ಯಕ್ಷ ಬಸವರಾಜ ಪಾಟೀಲ ಊಡಗಿ, ಬಿಜೆಪಿ ತಾಲೂಕು ಅಧ್ಯಕ್ಷ ಪರ್ವತರೆಡ್ಡಿ ಪಾಟೀಲ ನಾಮವಾರ, ನಗರಾಧ್ಯಕ್ಷ ಅನಿಲ ಐನಾಪುರ, ಯುವ ಮೋರ್ಚಾ ಅಧ್ಯಕ್ಷ ಪ್ರಶಾಂತ ಕೇರಿ, ಜೆಡಿಎಸ್ ಅಧ್ಯಕ್ಷ ಜಗನ್ನಾಥರೆಡ್ಡಿ ಗೋಟೂರ, ತಾಪಂ ಸದಸ್ಯ ನಾಗರೆಡ್ಡಿ ದೇಶಮುಖ ಮದನಾ, ಪುರಸಭೆ ಅಧ್ಯಕ್ಷೆ ಚನ್ನಮ್ಮ ಪಾಟೀಲ, ಸುಲೋಚನಾ ಬಿಬ್ಬಳ್ಳಿ, ದೇವಿಂದ್ರ ಸುಣಗಾರ, ಗೋಪಾಲ ರಾಠೊಡ, ಅಬ್ದುಲ್ ಗಫೂರ, ಡಾ| ಉದಯಕುಮಾರ ಶಹಾ, ಡಾ| ಸದಾನಂದ ಬೂದಿ, ಚಂದ್ರಶೆಟ್ಟಿ ಬಂಗಾರ, ಅಬ್ದುಲ್ ಖಾದರ, ಮಹೇಶ ಪಾಟೀಲ ತರ್ನಳ್ಳಿ, ಶ್ರೀನಿವಾಸ ಕಾಸೋಜು, ಸೈಯ್ಯದ್ ನಾಜಿಮೋದ್ದಿನ, ವಿಲಾಸಗೌತಂ ನಿಡಗುಂದಾ, ಪ್ರಶಾಂತ ಸೇಡಂಕರ್, ರಾಘವೇಂದ್ರ ಮುಸ್ತಾಜರ್ ಇನ್ನಿತರರು ಪಾಲ್ಗೊಂಡಿದ್ದರು.