Advertisement

ಬದುಕು ಕಸಿದ ಕಲ್ಪವೃಕ್ಷ ಇವರಿಗೆ ಎಳನೀರಿನಲ್ಲಿ ಬದುಕು ರೂಪಿಸಿತು

11:20 PM Jan 06, 2020 | Sriram |

ಮಲ್ಪೆ: ದೇಹದ ಎಲ್ಲ ಆಂಗಾಂಗಗಳು ಸರಿಯಾಗಿದ್ದರೂ, ದುಡಿಯೋ ಮನಸ್ಸಿಲ್ಲದವರಿಗೆ, ನಿರುದ್ಯೋಗಿ ಎಂಬ ದಾರಿದ್ರದಲ್ಲಿ ಜೀವಿಸುವವರ ನಡುವೆ, ಸ್ವಾವಲಂಬನೆಗೆ ದೈಹಿಕ ವಿಕಲತೆ ಯಾವುದಕ್ಕೂ ಅಡ್ಡಿಯಾಗದು, ಸಮಸ್ಯೆ ಏನೇ ಇದ್ದರೂ ಸಾಧಿಸುವ ಛಲ ಇದ್ದಲ್ಲಿ ಎಲ್ಲವೂ ಸಾಧ್ಯ ಎಂಬುವುದನ್ನು ತನ್ನ ಎರಡೂ ಕಾಲಿನ ಸ್ವಾಧೀನತೆಯನ್ನು ಕಳೆದುಕೊಂಡರೂ ಸ್ವಾವಲಂಬನೆಯ ಬದುಕು ಕಟ್ಟಿಕೊಳ್ಳುವ ಮೂಲಕ ತೋರಿಸಿಕೊಟ್ಟಿದ್ದಾರೆ ಕಲ್ಮಾಡಿಯ ಜಯ ಪೂಜಾರಿ ಅವರು.

Advertisement

ಪ್ರತೀ ದಿನ ಅಪರಾಹ್ನ 3ಗಂಟೆಯ ಬಳಿಕ ಕಲ್ಮಾಡಿ ಸೇತುವೆಯ ಸಮೀಪ ಬೊಬ್ಬರ್ಯ ದೈವಸ್ಥಾನಕ್ಕೆ ಹೋಗುವ ರಸ್ತೆಯ ಬದಿಯಲ್ಲಿ ಸೋಲಾರ್‌ ವಿದ್ಯುತ್‌ ಚಾಲಿತ ಬಂಡಿಯಲ್ಲಿ ಕುಳಿತು ಎಳನೀರು ಮಾರಾಟ ಮಾಡುತ್ತಿರುವ ಇವರ ಆತ್ಮವಿಶ್ವಾಸದ ಬದುಕು ಎಲ್ಲರಿಗೂ ಸ್ಫೂರ್ತಿದಾಯಕವಾಗಿದೆ.

ಕಾಲಿಗೆ ಈಗಲೂ ಸ್ವಾಧೀನ ಬಂದಿಲ್ಲ. ಬೆನ್ನುನೋವು ಕಡಿಮೆಯಾಗಿಲ್ಲ. ಆದರೆ ಸ್ವಾವಲಂಬನೆ ಆವರನ್ನು ಎಚ್ಚರಿಸಿದೆ. ತಾನು ಯಾರಿಗೂ ಹೊರೆಯಾಗಬಾರದೆಂದು ಸೋಲಾರ್‌ ವಿದ್ಯುತ್‌ ಚಾಲಿತ ಬಂಡಿಯಿಂದ ಎಳನೀರು ವ್ಯಾಪಾರಕ್ಕೆ ಮುಂದಾಗಿದ್ದಾರೆ. ಇದೀಗ ದಿನಕ್ಕೆ 300-400 ರೂಪಾಯಿ ಹಣವನ್ನು ಸಂಪಾದಿಸುತ್ತಾರೆ.

ಹಾಸಿಗೆ ಹಿಡಿದಿದ್ದ ಜಯಣ್ಣನಿಗೆ ಸ್ನೇಹಿತರೊಬರು ಕನ್ಯಾಡಿಯಲ್ಲಿರುವ ಸೇವಾ ಭಾರತಿಯ ಮಾಹಿತಿ ನೀಡಿದರಂತೆ, ಆ ಸಂಸ್ಥೆ ನಡೆಸುತ್ತಿದ್ದ ಶಿಬಿರಕ್ಕೆ ಸೇರಿದರು. ಒಟ್ಟು 40 ಮಂದಿಯಲ್ಲಿ ಐದು ಜನರನ್ನು ಆಯ್ಕೆ ಮಾಡಿ ಬೆಂಗಳೂರಿನ ಎಪಿಡಿ ಸಂಸ್ಥೆಯ ಶಿಬಿರಕ್ಕೆ ಕಳುಹಿಸಿಕೊಡಲಾಯಿತು.ಅಲ್ಲಿ ಚಿಕಿತ್ಸೆ ಹಾಗೂ ಆತ್ಮವಿಶ್ವಾಸ ತುಂಬಿ ಸೊÌàದೋÂಗ ಉದ್ಯಮಗಳ ಬಗ್ಗೆ ಮಾಹಿತಿ ನೀಡಲಾಯಿತು.

10 ವರ್ಷದ
ಹಿಂದಿನ ಘಟನೆ
ಜಯ ಪೂಜಾರಿ ಉಡುಪಿಯ ಕಲ್ಮಾಡಿ ಯವರು. 8ನೇ ಕ್ಲಾಸಿನ ವರೆಗೆ ಓದಿದ ಅವರು ಬಡತನದಿಂದಾಗಿ ಶಾಲೆ ಬಿಟ್ಟು ತೆಂಗಿನ ಮರವೇರಿ ಕಾಯಿ ಕೀಳುವ ವೃತ್ತಿಯನ್ನು ಕೈಗೊಂಡರು. ಡಿಸೆಂಬರ್‌ 12, 2009 ಅವರ ಬಾಳಿಗೆ ಕೆಟ್ಟ ದಿನವಾಗಿತ್ತು. ತೆಂಗಿನ ಮರವೇರಿದ ಅವರು ಆಕಸ್ಮಿಕವಾಗಿ ಕೈ ತಪ್ಪಿ ಉರುಳಿದರು. ಬೆನ್ನು ಮೂಳೆ ಮುರಿಯಿತು.

Advertisement

ದಾನಿಗಳ ನೆರವಿನಿಂದ 1.30 ಲಕ್ಷ ರೂಪಾಯಿ ಮೌಲ್ಯದ ಸೋಲಾರ್‌ ವಾಹನ ಸೇವಾ ಭಾರತಿ ಎಪಿಡಿ ಸಂಸ್ಥೆ ನೀಡಿತು. ಸೆಲ್ಕೊ ಸಂಸ್ಥೆ ವಾಹನ ಊರಿಗೆ ತರಿಸಿಕೊಟ್ಟು ಸೋಲಾರ್‌ ಬಲ್ಬ್ಗಳನ್ನು ಅಳವಡಿಸಿ ನೆರವಾಗಿದೆ. ಸೆಲ್ಕೋ ಸಂಸ್ಥೆಯ ಗುರುಪ್ರಸಾದ್‌ ಶೆಟ್ಟಿ, ಸೇವಾ ಭಾರತೀಯ ವಿನಾಯಕ ರಾವ್‌ ಹಾಗೂ ಎಪಿಡಿ ಸಂಸ್ಥೆಯ ರೂಬಿನ್‌ ಆವರ ನೆರವನ್ನು ಯಾವತ್ತೂ ಮರೆಯಲಾಗದು ಎನ್ನುತ್ತಾರೆ ಜಯಣ್ಣ.

1.30 ಲಕ್ಷ ರೂಪಾಯಿ ಮೌಲ್ಯದ
ಸೋಲಾರ್‌ ವಾಹನ
ದಾನಿಗಳ ನೆರವಿನಿಂದ 1.30 ಲಕ್ಷ ರೂಪಾಯಿ ಮೌಲ್ಯದ ಸೋಲಾರ್‌ ವಾಹನ ಸೇವಾ ಭಾರತಿ ಎಪಿಡಿ ಸಂಸ್ಥೆ ನೀಡಿತು. ಸೆಲ್ಕೊ ಸಂಸ್ಥೆ ವಾಹನ ಊರಿಗೆ ತರಿಸಿಕೊಟ್ಟು ಸೋಲಾರ್‌ ಬಲ್ಬ್ಗಳನ್ನು ಅಳವಡಿಸಿ ನೆರವಾಗಿದೆ. ಸೆಲ್ಕೋ ಸಂಸ್ಥೆಯ ಗುರುಪ್ರಸಾದ್‌ ಶೆಟ್ಟಿ, ಸೇವಾ ಭಾರತೀಯ ವಿನಾಯಕ ರಾವ್‌ ಹಾಗೂ ಎಪಿಡಿ ಸಂಸ್ಥೆಯ ರೂಬಿನ್‌ ಆವರ ನೆರವನ್ನು ಯಾವತ್ತೂ ಮರೆಯಲಾಗದು ಎನ್ನುತ್ತಾರೆ ಜಯಣ್ಣ.

ಸೋಲನ್ನು ಗೆಲ್ಲುವ ಹಟ
ಎಳನೀರು ವ್ಯಾಪಾರ ಶುರು ಮಾಡಿ ಒಂದು ವರ್ಷ ಆಯಿತು. ವ್ಯಾಪಾರ ಒಂದೇ ರೀತಿ ಅಂತ ಇರೋದಿಲ್ಲ. ಇನ್ನೂರರಿಂದ ಐನೂರರವರೆಗೆ ಸಂಪಾದನೆ ಆಗುತ್ತಿವೆ. ಮಳೆಗಾಲದಲ್ಲಿ ನಯಾ ಪೈಸೆ ವ್ಯಾಪಾರ ಆಗಿಲ್ಲ. ಏನೇ ಆಗಲಿ ಹಾಸಿಗೆಯಲ್ಲೇ ಇದ್ದ ಎಂಟು ವರ್ಷದ ಸೋಲನ್ನು ಗೆದ್ದುಕೊಳ್ಳಬೇಕೆಂಬ ಹಟ‌ ನನ್ನದಾಗಿತ್ತು.
-ಜಯಪೂಜಾರಿ ಕಲ್ಮಾಡಿ, ಎಳನೀರು ವ್ಯಾಪಾರಿ

Advertisement

Udayavani is now on Telegram. Click here to join our channel and stay updated with the latest news.

Next