Advertisement
ಚಾಮುಂಡಿಬೆಟ್ಟ ಉಳಿಸಿ ಹೋರಾಟದ ಭಾಗವಾಗಿ ಸೋಮವಾರ ಮೈಸೂರು ಗ್ರಾಹಕ ಪರಿಷತ್‌ನಲ್ಲಿ ನಡೆದ ಸಾರ್ವಜನಿಕ ಸಭೆ ಯಲ್ಲಿ ಬೆಟ್ಟಕ್ಕೆ ಸಂಪೂರ್ಣ ಖಾಸಗಿ ವಾಹನ ನಿರ್ಬಂಧಿಸಿ, ಸರ್ಕಾರಿ ವಾಹನಕ್ಕೆ ಮಾತ್ರ ಅವಕಾಶ ಕೊಡಬೇಕೆಂಬ ವಿಚಾರ ದೊಂದಿಗೆ ಕೆಲ ಪರಿಸರವಾದಿಗಳು, ಬೆಟ್ಟ ದಲ್ಲಿ ವಾಸವಿರುವ ನಿವಾಸಿಗಳ ಸ್ವಂತ ವಾಹನ ವನ್ನೂ ನಿರ್ಬಂಧಿಸಬೇಕೆಂಬ ಮಾತು ಕೇಳಿ ಬಂತು. ಇದಕ್ಕೆ ವಿರೋಧಭಾಸ ವ್ಯಕ್ತವಾಯಿತು. ಇನ್ನೂ ಕೆಲವರು ಬೆಟ್ಟದ ನಿವಾ ಸಿ ಗಳಿಗೆ ಪಾಸ್ ನೀಡಿ ಅವರ ವಾಹನ ದಲ್ಲೇ ಓಡಾಡಲು ಅವಕಾಶ ಕೊಡ ಬೇಕೆಂದು ಕೆಲವರು ಸಲಹೆ ನೀಡಿದರು.
Related Articles
Advertisement
ಪರಿಸರವಾದಿ ಶೈಲಜೇಶ್ ಮಾತನಾಡಿ, ನಂದಿ ಮಾರ್ಗ ರಸ್ತೆಯಲ್ಲಿ ಭೂ ಕುಸಿತ ಆಗಿದೆ. ಮತ್ತೆ ನಂದಿ ಸಮೀಪದಲ್ಲೂ ಕುಸಿತ ಕಂಡಿದೆ. ಮುಂದೆ ಜನರು ವಾಸಿಸುವ ಪ್ರದೇಶ ದಲ್ಲೂ ಭೂ ಕುಸಿತ ಆಗಬಹುದು. ಇದನ್ನು ಅಲ್ಲಿನ ನಿವಾಸಿಗಳೇ ಮನಗಾಣಬೇಕು ಎಂದು ಹೇಳಿದರು.
ಜಾಗೃತಿ: ಪರಿಸರವಾದಿ ಪರಶುರಾಮೇ ಗೌಡ ಮಾತನಾಡಿ, ಚಾಮುಂಡಿಬೆಟ್ಟ ಉಳಿ ಸುವ ವಿಚಾರ ದಲ್ಲಿ ಕಾರ್ಯಸಾದುವಾಗು ವ ಬೇಡಿಕೆಗಳನ್ನು ಮಾತ್ರ ಮಂಡಿಸಬೇಕು. ಅವು ಗಳನ್ನು ಈಡೇರಿಕೆಗಾಗಿ ಮೈಸೂರಿಗೆಲ್ಲರು ಒಟ್ಟಾಗಿ ಹೋರಾಟ ನಡೆಸಬೇಕು. ಇದಕ್ಕಾಗಿ ಜಾಗೃತಿ ಮೂಡಿಸಿ ಮೈಸೂರಿಗರನ್ನು ಸಜ್ಜಾಗೊಳಿಸಬೇಕೆಂದು ಸಲಹೆ ನೀಡಿದರು.
ಸಭೆಯಲ್ಲಿ ಮೈಸೂರು ಗ್ರಾಹಕರ ಪರಿಷತ್ತಿನ ಭಾಮಿ ಶಣೈ, ಪರಿಸರ ವಾದಿಗಳು ಹಾಗೂ ವಿವಿಧ ಸಂಘಟನೆಯ ಮುಖಂಡರಾದ ಮಾಳವಿಕ ಗುಬ್ಬಿವಾಣಿ, ಶೈಲಜೇಶ, ಕುಸುಮಾ ಆಯರಹಳ್ಳಿ, ವಿದ್ಯಾರ್ಥಿ ಯಶವಂತ್, ಪ್ರೊ.ಕಾಳಚನ್ನೇಗೌಡ, ಲೀಲಾ, ನಂಜುಂಡ, ಪ್ರವೀಣ್, ಗೀತಾ, ಆದರ್ಶ್, ಟೀಂ ಮೈಸೂರಿನ ಹರೀಶ್ ಇನ್ನಿತರರು ಪಾಲ್ಗೊಂಡಿದ್ದರು.
ಜನವರಿಯಿಂದ ಜಾಗೃತಿಗೆ ತಂಡ ರಚನೆ
ಮೈಸೂರು: ಚಾಮುಂಡಿಬೆಟ್ಟ ಉಳಿವಿಗಾಗಿ ಜನವರಿಯಿಂದ ಸತ್ಯಾಗ್ರಹ ಕೈಗೊಳ್ಳಬೇಕು, ಶಾಲಾ ಕಾಲೇ ಜುಗಳಲ್ಲಿ ಸಹಿ ಸಂಗ್ರಹ ಅಭಿಯಾನ ನಡೆಸಬೇಕು, ಮಾನವ ಸರಪಳಿ, ಜಾಗೃತಿ ಜಾಥಾ ಸೇರಿದಂತೆ ಹಲವು ಹೋರಾಟ ಕೈಗೊಳ್ಳುವ ಮೂಲಕ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯಬೇಕು ಎನ್ನುವ ನಿರ್ಣಯಗಳನ್ನು ಮೈಸೂರು ಗ್ರಾಹಕ ಪರಿಷತ್ ಸಭೆಯಲ್ಲಿ ತೀರ್ಮಾನಿಸಲಾಯಿತು. ಬೆಟ್ಟ ಉಳಿವಿಗಾಗಿ ಸತ್ಯಾಗ್ರಹ ನಡೆಸಬೇಕಿದೆ.
ಇದು ಯಾರನ್ನೂ ಒತ್ತಾಯಿಸುವಂತಿರಬಾರದು, ಅಂದು ಪ್ರತಿಯೊಬ್ಬರೂ ತಮ್ಮ ಮನೆಯಲ್ಲೇ ಸ್ವಯಂ ಲಾಕ್‌ಡೌನ್ ಆಗುವಂತೆ ಮಾಡಬೇಕು. ಬೆಟ್ಟದಲ್ಲಿ ಖಾಸಗಿ ಚಟುವಟಿಕೆಗಳನ್ನು ಉತ್ತೇಜಿಸದಂತೆ ನೋಡಿಕೊಳ್ಳಬೇಕು. ಇದಕ್ಕೆ ಜನ ಬೆಂಬಲ ಪಡೆಯಲು ಮೈಸೂರು ನಗರಾದ್ಯಂತ ಸಹಿ ಸಂಗ್ರಹ, ಭಿತ್ತಿಪತ್ರ, ಕರಪತ್ರ ಹಂಚುವ ಹಾಗೂ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಬೇಕು ಎಂಬ ಸಲಹೆ ಕೇಳಿಬಂದವು.
ಮುಖ್ಯವಾಗಿ ಚಾಮುಂಡಿಬೆಟ್ಟ ಏಕೆ ಉಳಿಸ ಬೇಕು? ಅದಕ್ಕೆ ನಾವೇನು ಮಾಡಬೇಕು? ಎನ್ನುವ ಜಾಗೃತಿ ಮಾಹಿತಿ ಕುರಿತಂತೆ ತಿಳಿವಳಿಕೆ ಮೂಡಿ ಸಲು, ಕರಪತ್ರ ಕರಡು ರಚನಾ ಸಮಿತಿ (ಕುಸುಮಾ ಆಯರಹಳ್ಳಿ, ಮಾಳವಿಕಾ ಗುಬ್ಬಿವಾಣಿ, ಶೈಲಜೇಶ), ಶಾಲಾ ಕಾಲೇಜುಗಳಲ್ಲಿ ಸಹಿ ಸಂಗ್ರಹ ಅಭಿಯಾನ ಸಮಿತಿ(ವಿದ್ಯಾರ್ಥಿ ಯಶವಂತ್, ಕಾಳಚನ್ನೇಗೌಡ), ಸಾರ್ವಜನಿಕರಿಂದ ವಿವಿಧೆಡೆ ಸಹಿ ಸಂಗ್ರಹ ಅಭಿಯಾನ ಸಮಿತಿ (ಲೀಲಾ, ನಂಜುಂಡ, ಪ್ರವೀಣ್, ಗೀತಾ) ಸೇರಿ ದಂತೆ ವಿವಿಧ ತಂಡಗಳನ್ನು ರಚಿಸಲಾಯಿತು.
ಇದೇ ವೇಳೆ ಸಭೆಯಲ್ಲಿದ್ದವರಿಂದ ಈ ವೇಳೆ ಚಾಮುಂಡಿಬೆಟ್ಟವನ್ನು ಸಂರಕ್ಷಿತ ಪ್ರದೇಶ ಹಾಗೂ ಪ್ಲಾಸ್ಟಿಕ್ ಮುಕ್ತ ಪ್ರದೇಶವೆಂದು ಘೋಷಿಸಬೇಕು. ಬೆಟ್ಟದಲ್ಲಿ ಹಾಗೂ ಸುತ್ತಮುತ್ತ ನಡೆಯುತ್ತಿರುವ ಅಭಿವೃದ್ಧಿ ಕೆಲಸಗಳಿಗೆ ಕಡಿವಾಣ ಹಾಕಬೇಕು. ಖಾಸಗಿ ವಾಹನಗಳ ಪ್ರವೇಶ ಸಂಪೂರ್ಣ ನಿರ್ಬಂಧಿಸಿ, ನೈಸರ್ಗಿಕ ಬದಲಾವಣೆಗೆ ಅವಕಾಶ ಮಾಡಿಕೊಡಬೇಕು. ಗಿಡ ನೆಡುವುದು, ಅಭಿವೃದ್ಧಿ ಕಾರ್ಯಕ್ರಮವನ್ನು ಮಾಡುವುದು ಆಗದಂತೆ ನೋಡಿಕೊಳ್ಳಬೇಕು. ಇದಕ್ಕಾಗಿ ಮೊದಲು ಗ್ರಾಪಂನಿಂದ ಬೆಟ್ಟದ ಆಡಳಿತವನ್ನು ಜಿಲ್ಲಾಡಳಿತದ ಸುಪರ್ದಿಗೆ ಪಡೆದುಕೊಳ್ಳಬೇಕು. ಜೊತೆಗೆ ಬೆಟ್ಟದಲ್ಲಿರುವ ನಿವಾಸಿಗಳನ್ನು ಸ್ಥಳಾಂತರಗೊಳಿಸಬೇಕು ಎಂದು ಒತ್ತಾಯಿಸಲಾಯಿತು.