Advertisement
ಸೋಮವಾರ ಸದನದಲ್ಲಿ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಆರ್.ಅಶೋಕ್ ವರದಿ ಮಂಡಿಸಿದ್ದು, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಕಾರ್ಯವೈಖರಿ ಉಲ್ಲೇಖೀಸಿ ವಸತಿ ಶಾಲೆಗಳ ಸ್ಥಾಪನೆಯಲ್ಲಿ ಭೌಗೋಳಿಕವಾಗಿ ಸಮಾನತೆ ಅನುಸರಿಸಿಲ್ಲ ಎಂದು ತಿಳಿಸಲಾಗಿದೆ.
Related Articles
Advertisement
ಕುಷ್ಠಗಿ ಅಕ್ರಮಅದೇ ರೀತಿ ಸಣ್ಣ ನೀರಾವರಿ ಇಲಾಖೆಯ ಕುಷ್ಠಗಿ ವಿಭಾಗದಲ್ಲಿ ತುಂಡುಗುತ್ತಿಗೆ ಕಾಮಗಾರಿಯಲ್ಲಿ 34.55 ಕೋಟಿ ರೂ. ದುರ್ಬಳಕೆಯಾಗಿರುವುದನ್ನೂ ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಪತ್ತೆ ಹಚ್ಚಿದೆ. ತುಂಡು ಗುತ್ತಿಗೆ ಆಧಾರದ ಮೇಲೆ ನಿಯಮ ಬಾಹಿರವಾಗಿ 1 ಲಕ್ಷ ರೂ. ಅಂದಾಜು ವೆಚ್ಚದಲ್ಲಿ 3,938 ಕಾಮಗಾರಿಗಳನ್ನು 39.38 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಲಲಾಗಿದೆ. ಕಾಮಗಾರಿಗಳ ಅಂದಾಜು, ತುಂಡು ಗುತ್ತಿಗೆ ಪ್ರಸ್ತಾವನೆ, ಬಿಲ್ಲು ಪಾವತಿಸುವ ಪ್ರಕ್ರಿಯೆಗಳನ್ನು ವಿಭಾಗ ಹಾಗೂ ಉಪ ವಿಭಾಗ ಕಚೇರಿಗಳಲ್ಲಿಯೇ ನಿರ್ವಹಿಸಲಾಗಿದೆ. ಸಮಿತಿಯ ನಿರ್ದೇಶನಂದಂತೆ ಇಲಾಖೆಯ ಅಧಿಕಾರಿಗಳು 2,504 ಕಾಮಗಾರಿಗಳ ಅನುಷ್ಟಾನದ ಬಗ್ಗೆ ಸ್ಥಳ ಪರಿವೀಕ್ಷಣೆ ನಡೆಸಿದಾಗ ಯಾವುದೇ ಕಾಮಗಾರಿ ಕೈಗೊಂಡಿಲ್ಲದಿರುವುದು ಪತ್ತೆಯಾಗಿದೆ. ಕಾಮಗಾರಿ ಕೈಗೊಳ್ಳದೆ ಬಿಲ್‌ಗಳನ್ನು ಬಂಡವಾಳ ಲೆಕ್ಕ ಶೀರ್ಷಿಕೆ ಅಡಿಯಲ್ಲಿ ನಗದೀಕರಿಸಲಾಗಿದೆ. ಹಗರಣದಲ್ಲಿ ಇಲಾಖೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಪಾತ್ರವಿದ್ದು, ಕಾಮಗಾರಿ ಅನುಷ್ಟಾನಗೊಳಿಸದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ ಹಣ ವಸೂಲಾತಿಗಾಗಿ ಪ್ರಕರಣದಲ್ಲಿ ಶಾಮೀಲಾಗಿರುವ ಅಧಿಕಾರಿ ಸಿಬ್ಬಂದಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.