Advertisement
ಶ್ರಮ ಏವ ಜಯತೇ ಎಂದು ಎಕ್ಸ್ ಪರ್ಟ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ಡಾಣ ಉಷಾಪ್ರಭಾ ಎನ್. ನಾಯಕ್ ಹೇಳಿದರು.
Related Articles
ಹದಿಹರೆಯದ ಹಂತದಲ್ಲಿ ವಿದ್ಯಾರ್ಥಿಗಳು ತಮ್ಮ ಜೀವನದ ಮೇಲೆ ಪರಿಣಾಮ ಬೀರುವ ಅನೇಕ ತಪ್ಪುಗಳನ್ನು ಮಾಡುತ್ತಾರೆ. ಆದರೆ ನಮ್ಮ ಸಂಸ್ಥೆ ಸರಿಯಾದ ಮಾರ್ಗದಲ್ಲಿ ನಡೆಯುವಂತೆ ವಿದ್ಯಾರ್ಥಿಗಳನ್ನು ರೂಪಿಸುತ್ತದೆ. ವಿದ್ಯಾರ್ಥಿ ಗಳು ಮೊಬೈಲ್ ಬಳಕೆಯಿಂದ ದೂರವಿರಬೇಕು. ಈ ಚಟ ಧೂಮಪಾನ ಮದ್ಯಪಾನಕ್ಕಿಂತಲೂ ಹಾನಿಕರವಾದದು. ಜೀವನದಲ್ಲಿ ಹಣವೇ ಮುಖ್ಯವಲ್ಲ. ಹಣದಿಂದ ಎಲ್ಲವನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ ಎಂದರು.
Advertisement
ಸರಿಯಾದ ಗುರಿ ಅಗತ್ಯಎಕ್ಸ್ಪರ್ಟ್ ಶಿಕ್ಷಣ ಮತ್ತು ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊಣ ನರೇಂದ್ರ ಎಲ್. ನಾಯಕ್ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಯು ಸರಿಯಾದ ಗುರಿಯನ್ನು ಹೊಂದಿರಬೇಕು. ಕಠಿನ ಪರಿಶ್ರಮ ಮತ್ತು ಗುರಿ ಸಾಧಿಸುವ ಛಲದೊಂದಿಗೆ ಮುನ್ನಡೆದರೆ ಸಾಧನೆಯ ಪಥ ಮುಟ್ಟಲು ಸಾಧ್ಯ ಎಂದು ಹೇಳಿದರು. ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಲಾಯಿತು. ದೀಪಿಕಾ ಎ. ನಾಯಕ್, ಯೋಗಗುರು ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ, ವೇಳಾಪಟ್ಟಿ ಸಂಯೋಜಕ ಪ್ರೊಣ ಸುಬ್ರಹ್ಮಣ್ಯ ಉಡುಪ, ಎಐಸಿಇ ವಿಭಾಗದ ಸಂಯೋಜಕ ಪ್ರೊಣ ಶ್ಯಾಮ್ ಪ್ರಸಾದ್, ಸಂಯೋಜಕ ಕರುಣಾಕರ ಬಳ್ಕೂರು, ಉಪನ್ಯಾಸಕ ಪ್ರಸನ್ನಕುಮಾರ ಆರ್., ಉಪನ್ಯಾಸಕಿ ತೆರೆಸಾ ವಿಲ್ಮಾ, ಕಾರ್ಯಕ್ರಮದ ಸಂಯೋಜಕಿ ಶ್ವೇತಾ ಕುಮಾರಿ ಮತ್ತಿತರರು ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಪ್ರೊಣ ರಾಮಚಂದ್ರ ಭಟ್ ಪ್ರಸ್ತಾವನೆಗೈದರು. ಉಪನ್ಯಾಸಕಿ ನೀಹಾ ಫಹೀಮ್ ನಿರೂಪಿಸಿದರು. ಶ್ರಮ ಪಡಬೇಕು
ವಿದ್ಯಾರ್ಥಿಗಳಲ್ಲಿ ಶಿಸ್ತಿನ ಕೊರತೆಯು ತಮ್ಮ ಜೀವನದ ಅಪೂರ್ಣತೆಗೆ ಕಾರಣವಾಗುತ್ತದೆ. ಯಾವುದೇ ರೀತಿಯ ಪರಿಶ್ರಮ ಪಡದೆ ದೇವರನ್ನು ಬೇಡಿದರೆ ದೇವರು ಕೂಡ ಸಹಾಯ ಮಾಡುವುದಿಲ್ಲ. ಕಾಯಕವೇ ಕೈಲಾಸ ಎಂದು ತಿಳಿದು ಶ್ರಮ ಪಡಬೇಕು. ಕಲಿಕೆಯಲ್ಲಿ ಸಮಯ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು ಎಂದು ಪ್ರೊ. ನರೇಂದ್ರ ಎಲ್. ನಾಯಕ್ ಸಲಹೆ ನೀಡಿದರು.