Advertisement
2016-17ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ 125ಕ್ಕೆ 120 ಅಂಕ ಪಡೆದವರಿಗೆ ಭಾನುವಾರ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯಿಂದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಕನ್ನಡ ಕೌಸ್ತುಭ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡದಲ್ಲಿ ಓದಿದಂತಹ ಮಕ್ಕಳಿಗೆ ಇಂಜಿನಿಯರಿಂಗ್, ವೈದ್ಯಕೀಯ ಸೀಟ್, ಉದ್ಯೋಗ ದೊರೆಯುವುದಿಲ್ಲ. ವಿದೇಶಕ್ಕೆ ಹೋಗಲಿಕ್ಕಾಗುವುದಿಲ್ಲ ಎಂಬ ಭಾವನೆ ಪೋಷಕರಲ್ಲಿ ಮನೆ ಮಾಡುತ್ತಿರುವುದರಿಂದಲೇ ಕನ್ನಡದ ಶಾಲೆ ಮುಚ್ಚುವಂತ ವಾತಾವರಣ ನಿರ್ಮಾಣವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ತಮ್ಮದೇ ಊರಲ್ಲಿ ಶಾಲೆಗಳಿದ್ದರೂ ದೂರದ ಊರಿನ ಆಂಗ್ಲ ಮಾಧ್ಯಮ ಶಾಲೆಗಳಿಗೆ ಮಕ್ಕಳನ್ನು ಕಳಿಸುವ ಆಂಗ್ಲ ವ್ಯಾಮೋಹ ಹೆಚ್ಚಾಗಿ ಕಂಡು ಬರುತ್ತಿದೆ. ಸರ್ಕಾರ ಏನೇ ಕ್ರಮ ತೆಗೆದುಕೊಂಡರೂ ಅದನ್ನು ದಿಕ್ಕು ತಪ್ಪಿಸುವ ಬುದ್ಧಿವಂತಿಕೆ ಹೊಂದಿರುವ ಶಾಲಾ ಆಡಳಿತ ಮಂಡಳಿಗಳು ಇವೆ ಎಂದು ತಿಳಿಸಿದರು.
Related Articles
ಬೆಳೆಸಿಕೊಳ್ಳಲು ಆಗುವುದಿಲ್ಲ. ವಿದ್ಯಾರ್ಥಿಗಳಿದ್ದಾಗಲೇ ಸಾಧನೆ ಮಾಡಬೇಕು. ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಕಳೆದ ಹಲವಾರು ವರ್ಷದಿಂದ ಕನ್ನಡದ ಕೆಲಸ ಮಾಡುತ್ತಿದೆ. ಇನ್ನೂ ವೈವಿಧ್ಯಮಯ ರೀತಿ ಕಾರ್ಯಕ್ರಮ ನಡೆಸುವಂತಾಗಲಿ ಎಂದರು.
Advertisement
ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಅಧ್ಯಕ್ಷ ಕೆ.ಎಚ್. ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಖ್ಯಾತ ಕವಿ ಬಿ.ಆರ್. ಲಕ್ಷ್ಮಣರಾವ್, ರಾಜ್ಯಸಭೆ ಮಾಜಿಸದಸ್ಯ ಕೆ.ಆರ್. ಜಯದೇವಪ್ಪ, ಶಿಮುಲ್ ಅಧ್ಯಕ್ಷ ಜಗದೀಶಪ್ಪ ಬಣಕಾರ್, ನಿರ್ದೇಶಕ ಆರ್. ಹನುಮಂತಪ್ಪ, ಹೇಮಾ ಶಾಂತಪ್ಪ ಪೂಜಾರಿ,
ಜಿ.ಬಿ. ಲೋಕೇಶ್, ಕುಸುಮಾ ಲೋಕೇಶ್ ಇತರರು ಇದ್ದರು. ಸಾಲಿಗ್ರಾಮ ಗಣೇಶ ಶೆಣೈ ಪ್ರಾಸ್ತಾವಿಕ ಮಾತುಗಳಾಡಿದರು. ರೇಖಾ ಪುರಾಣಿಕ್
ನಿರೂಪಿಸಿದರು. ಪಠ್ಯ-ಪಠ್ಯೇತರ ಚಟುವಟಿಕೆಗೆ ಆದ್ಯತೆ ನೀಡಿ: ಮಕ್ಕಳು 10ನೇ ತರಗತಿಗೆ ಬರುವ ತನಕ ಕ್ರೀಡೆ, ಸಂಗೀತ, ಕಲೆಗೆ ಪ್ರೋತ್ಸಾಹ ನೀಡುವ ಪೋಷಕರು 10ನೇ ತರಗತಿ ಎಂದಾಕ್ಷಣಕ್ಕೆ ಎಲ್ಲವನ್ನೂ ನಿಲ್ಲಿಸಿ, ತಮ್ಮ ಮಕ್ಕಳು ಅಂಕಗಳಿಸುವಂತಾಗಬೇಕು ಎನ್ನುವುದರತ್ತ ಗಮನ ನೀಡುತ್ತಾರೆ.
ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಭಾಗವಹಿಸುವುದರಿಂದ ಹೆಚ್ಚಿನ ಅಂಕ ಗಳಿಸಲಿಕ್ಕೆ ಸಾಧ್ಯ ಇಲ್ಲ ಎಂಬ ಭಾವನೆ ನಿಜಕ್ಕೂ ತಪ್ಪು. ಅನೇಕರು ಸಾಂಸ್ಕೃತಿಕ ಚಟುವಟಿಕೆಯಲ್ಲಿ ಭಾಗವಹಿಸುತ್ತಲೇ ಅತ್ಯುತ್ತಮ ಅಂಕ, ಅತ್ಯುನ್ನತ ಸ್ಥಾನಮಾನ ಪಡೆದಿದ್ದಾರೆ. ಬದುಕನ್ನ ಎದುರಿಸುವ ಶಕ್ತಿ ಪಠ್ಯೇತರ ಚಟುವಟಿಕೆಯಿಂದ ದೊರೆಯುತ್ತದೆ. ಹಾಗಾಗಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗೆ ಪೋಷಕರು ಮತ್ತು ಮಕ್ಕಳು ಸಮಾನ ಆದ್ಯತೆ ನೀಡಬೇಕು.
ಎಚ್. ಡುಂಡಿರಾಜ್, ಕವಿ.