ದೊಡ್ಡಬಳ್ಳಾಪುರ: ಚಿರಋಣಿ ಕನ್ನಡಾಂಬೆ ಹೋರಾಟ ಸಮಿತಿಯಿಂದ ಕನ್ನಡಿಗರ ಹಬ್ಬ ಹಾಗೂ ನಮ್ಮೂರ ಕನ್ನಡ ಸಾರಥಿ ಪ್ರಶಸ್ತಿ ಪ್ರದಾನ ಸಮಾರಂಭ ಬಾಶೆಟ್ಟಿಹಳ್ಳಿ ಬ್ಯಾಂಕ್ ವೃತ್ತದಲ್ಲಿ ನಡೆಯಿತು.
ಈ ವೇಳೆ ಬಿಜೆಪಿ ಫಲಾನುಭವಿಗಳ ಪ್ರಕೋಷ್ಠದ ಸಂಚಾಲಕ ಧೀರಜ್ ಮುನಿರಾಜು ಮಾತನಾಡಿ, ಕನ್ನಡ ಸಾಹಿತ್ಯ ಪರಂಪರೆ ಶ್ರೀಮಂತವಾಗಿದ್ದು, ಇಂದಿನ ಪೀಳಿಗೆ ಇದನ್ನು ಅರಿತು ನಾಡು-ನುಡಿಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕಿದೆ. ಕನ್ನಡ ಭಾಷೆಯ ಬಳಕೆ ಹೆಚ್ಚಾಗಬೇಕಿದ್ದು, ನಾಡು- ನುಡಿಯ ಉಳಿವಿಗಾಗಿ ಹೋರಾಟ ನಡೆಸುತ್ತಿರುವ ಸಂಘಟನೆಗಳ ಪಾತ್ರ ಮಹತ್ವದ್ದಾಗಿದೆ ಎಂದರು.
ಚಿರಋಣಿ ಕನ್ನಡಾಂಬೆ ಹೋರಾಟ ಸಮಿತಿಯ ಸಂಸ್ಥಾಪಕ ರವಿ ಮಾವಿನಕುಂಟೆ ಮಾತನಾಡಿ, ಕರ್ನಾಟಕ ಶಾಂತಿಪ್ರಿಯ ರಾಜ್ಯವಾಗಿದೆ. ಆದರೆ,ಗಡಿ ವಿವಾದಗಳನ್ನು ಕೆದಕುವ ಮೂಲಕ ಇಲ್ಲಿ ಶಾಂತಿ ಕದಡುವ ಕೆಲ ಸಂಘಟನೆಗಳಿಂದ ಜನರು ಆತಂಕದಿಂದ ಬದುಕುವಂತಾಗಿದೆ. ಕರ್ನಾಟಕದಲ್ಲಿ ಕನ್ನಡ ಭಾಷೆಯೇ ಸಾರ್ವಭೌಮ. ಮಾತೃಭಾಷೆ ಯಾವುದೇ ಇರಲಿ, ಇಲ್ಲಿನ ಭಾಷೆ ಗೌರವಿಸಬೇಕಾಗಿರುವುದು ಎಲ್ಲರ ಕರ್ತವ್ಯ ಆಗಿದೆ. ಕೈಗಾರಿಕಾ ಪ್ರದೇಶದಲ್ಲಿ ಸ್ಥಳೀಯ ಕನ್ನಡಿಗರಿಗೆ ಉದ್ಯೋಗ ಸಿಗಬೇಕಿದೆ ಎಂದರು.
ನಮ್ಮೂರ ಕನ್ನಡ ಸಾರಥಿ ಪ್ರಶಸ್ತಿ ಪ್ರದಾನ: ಹಿರಿಯ ಕನ್ನಡ ಪರ ಹೋರಾಟಗಾರ ಟಿ.ಎನ್.ಪ್ರಭುದೇವ್, ಸಂಜೀವನಾಯಕ್, ಹಿರಿಯ ನ್ಯಾಯವಾದಿ ರಾ.ಭೈರೇಗೌಡ, ಕನ್ನಡ ಪಕ್ಷದ ರಾಜ್ಯ ಸಮಿತಿ ಸದಸ್ಯ ಡಿ.ಪಿ.ಆಂಜನೇಯ, ಕರವೇ ಪ್ರವೀಣ್ ಶೆಟ್ಟಿ ಬಣದ ರಾಜ್ಯ ಮುಖಂಡ ರಾಜಘಟ್ಟ ರವಿ, ಕರ್ನಾಟಕ ಯಕ್ಷಗಾನ ಅಕಾಡೆಮಿ ಪುರಸ್ಕೃತ ಎಸ್.ಪಿ ಮುನಿಕೆಂಪಯ್ಯ, ಯಕ್ಷಸಿರಿ ಪುರಸ್ಕೃತ ಎಸ್.ಪಿ. ಅಪ್ಪಯ್ಯಣ್ಣ ಅವರಿಗೆ ನಮ್ಮೂರ ಕನ್ನಡ ಸಾರಥಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಕೆಎಂಎಫ್ ನಿರ್ದೇಶಕ ಬಿ.ಸಿ. ಆನಂದ್ ಕುಮಾರ್, ಬಾಶೆಟ್ಟಿಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಕೃಷ್ಣಪ್ಪ, ಬಾಶೆಟ್ಟಿಹಳ್ಳಿ ಪಪಂ ಮುಖ್ಯಾಧಿಕಾರಿ ಎ.ಮುನಿರಾಜ್, ಮಾಜಿ ಸದಸ್ಯ ಪ್ರೇಮ್ ಕುಮಾರ್, ಸುರೇಶ್ ಬಾಬು, ಅಂಬುಜಾಕ್ಷಿ ಮುನಿರಾಜು, ಬಿ.ಎಂ. ಮುನಿರಾಜಪ್ಪ, ವಿಎಸ್ ಎಸ್‌ಎನ್ ಅಧ್ಯಕ್ಷ ವಿಶ್ವನಾಥ್, ಜಿಲ್ಲಾ ಕಾರ್ಯಧ್ಯಕ್ಷ ಅಶೋಕ್, ತಾಲೂಕು ಅಧ್ಯಕ್ಷ ರಮೇಶ್, ಮುಖಂಡ ಕೃಷ್ಣಮೂರ್ತಿ, ನಾಗರಾಜ್ ನಾಯಕ್, ಆನಂದ್, ಯಮನೂರು, ಸುನೀಲ್ ಕುಮಾರ್ ಹಾಗೂ ಮತ್ತಿತರರು ಇದ್ದರು.
ನೂತನ ಪದಾಧಿಕಾರಿಗಳ ನೇಮಕ: ಇದೇ ವೇಳೆ ಸಂಘದ ನೂತನ ರಾಜ್ಯಾಧ್ಯಕ್ಷರಾಗಿ ಎಸ್.ಎನ್ ಸುಬ್ರಮಣಿ, ರಾಜ್ಯ ಉಪಾಧ್ಯಕ್ಷರಾಗಿ ಹಮಾಮ್ ನವೀನ್, ರಾಜ್ಯ ಕಾರ್ಯಧ್ಯಕ್ಷರಾಗಿ ಬಸವರಾಜ್ ಗೊಲ್ಲಹಳ್ಳಿ, ರಾಜ್ಯ ಖಚಾಂಚಿಯಾಗಿ ಹಮಾಮ್ ಶ್ರೀನಿವಾಸ್, ರಾಜ್ಯ ಜಂಟಿ ಕಾರ್ಯದರ್ಶಿಯಾಗಿ ತಿಪ್ಪಾಪುರ ಶಿವಕುಮಾರ್ ಹಾಗೂ ತಾಲೂಕು ಘಟಕದ ಅಧ್ಯಕ್ಷರಾಗಿ ಶ್ರೀರಾಮ್ , ತಾಲೂಕು ಕಾರ್ಯಧ್ಯಕ್ಷರಾಗಿ ಪುರುಷೋತ್ತಮ್ ಅವರನ್ನು ಆಯ್ಕೆ ಮಾಡಲಾಯಿತು.