ಕಾಳಗಿ: ಘೋಷಿತ ತಾಲೂಕು ಕೇಂದ್ರವಾಗಿರುವ ಕಾಳಗಿಯನ್ನು ಅಧಿಧಿಕೃತವಾಗಿ ಜಾರಿ ಮಾಡಿ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡುವಂತೆ ಆಗ್ರಹಿಸಿ ಜೈ ಕನ್ನಡಿಗರ ರಕ್ಷಣಾ ವೇದಿಕೆ, ಬಿಜೆಪಿ ಮುಖಂಡರು, ವ್ಯಾಪಾರಸ್ಥರ ಸಂಘ ಹಾಗೂ ಗ್ರಾಮಸ್ಥರು ಹಮ್ಮಿಕೊಂಡಿರುವ ಕಾಳಗಿ ಬಂದ್ ಸಂಪೂರ್ಣ ಯಶಸ್ವಿಯಾಯಿತು.
ಇಲ್ಲಿನ ನೀಲಕಂಠ ಕಾಳೇಶ್ವರ ದೇವಸ್ಥಾನದಿಂದ ಅಂಬೇಡ್ಕರ್ ವೃತ್ತದ ವರೆಗೆ ಪ್ರತಿಭಟನಾ ರ್ಯಾಲಿ ನಡೆಸಿ ಸೇಡಂ ಸಹಾಯಕ ಆಯುಕ್ತ ಭೀಮಾಶಂಕರ ತೆಗ್ಗಳ್ಳಿ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಲಾಯಿತು. ನಂತರ ಪ್ರತಿಭಟನಾ ರ್ಯಾಲಿ ಉದ್ದೇಶಿಸಿ ಮಾಜಿ ಸಚಿವ ಸುನೀಲ ವಲ್ಲಾಪುರೆ ಮಾತನಾಡಿ ಸಾವಿರಾರೂ ಕೋಟಿ ರೂ. ಲೂಟಿ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಹೊಸ ತಾಲೂಕು ರಚನೆಯಲ್ಲಿ ಹಣಕಾಸಿನ ಅಭಾವ ಬೀಳುತ್ತಿದೆ.
ಅದಕ್ಕೆ ತಾಲೂಕು ರಚನೆಯಲ್ಲಿ ಆಸಕ್ತಿಯಿಲ್ಲ ಎನ್ನುವುದನ್ನು ತೋರಿಸುತ್ತದೆ ಎಂದರು. ಶಾಸಕ ಡಾ| ಉಮೇಶ ಜಾಧವ್, ಮಾಜಿ ಶಾಸಕ ವಿಶ್ವನಾಥ ಪಾಟೀಲ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಿ ಕಾಳಗಿ ತಾಲೂಕು ಅಭಿವೃದ್ಧಿಗೆ ಹಣ ಬಿಡುಗಡೆಗೊಳಿಸಿ ಇನ್ನುಳಿದ ಕಚೇರಿಗಳನ್ನು ಸ್ಥಾಪಿಸಿ, ಕಾಳಗಿಯನ್ನು ಅಧಿಕೃತವಾಗಿ ತಾಲೂಕನ್ನಾಗಿ ಘೋಷಿಸಬೇಕು.
50ಕ್ಕೂ ಹೆಚ್ಚು ಗ್ರಾಮಗಳಿಗೆ ಕಾಳಗಿ ಕೇಂದ್ರಸ್ಥಾನವಾಗಿದೆ ಎಂದು ಹೇಳಿದರು. ಜೈ ಕನ್ನಡಿಗರ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಸಚಿನ್ ಫರತಾಬಾದ, ಜಿಪಂ ಸದಸ್ಯ ಸಂಜೀವನ್ ಯಾಕಾಪುರ, ಸುಭಾಷ ರಾಠೊಡ್, ಶಶಿಕಲಾ ಟೆಂಗಳಿ, ಶರಣಪ್ಪ ತಳವಾರ, ಮಾಜಿ ಗ್ರಾಪಂ ಅಧ್ಯಕ್ಷ ರಾಘವೇಂದ್ರ ಡಿ.ಗುತ್ತೇದಾರ ಮಾತನಾಡಿದರು.
ಜೈ ಕರವೇ ವಲಯ ಅಧ್ಯಕ್ಷ ಪರಮೇಶ್ವರ ಕಟ್ಟಿಮನಿ, ದಿಲೀಪ ಅರಣಕಲ್, ಬಜಾರ ಯೂನಿಯನ್ ಅಧ್ಯಕ್ಷ ಚಂದ್ರಕಾಂತ ವನಮಾಲಿ, ಎಪಿಎಂಸಿ ಸದಸ್ಯ ರಾಮಶೇಟ್ಟಿ ಮಾಲಿ ಪಾಟೀಲ, ಜಿಪಂ ಸದಸ್ಯ ರಾಮಲಿಂಗರೆಡ್ಡಿ ದೇಶಮುಖ, ಸಂತೋಷ ಪಾಟೀಲ ಮಂಗಲಗಿ, ಸತ್ಯನಾರಾಯಣರಾವ್ ಭರತನೂರ, ಪ್ರಶಾಂತ ಕದಂ, ರಾಜು ಸಲಗೂರ, ಮಲ್ಲಿನಾಥ ಪಾಟೀಲ ಕೊಲಕುಂದಿ ಕೋಡ್ಲಿ ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.
ಬಿಕೋ ಎನ್ನುತ್ತಿದ್ದ ರಸ್ತೆಗಳು: ಬಂದ್ ನಿಂದಾಗಿ ಅಂಗಡಿ ಮುಗ್ಗಟ್ಟುಗಳು, ಬಸ್ ಸಂಚಾರ ಬಂದ್ ಆಗಿದ್ದವು. ಇದರಿಂದ ಪ್ರಯಾಣಿಕರು ಪರದಾಡಿದರು.