Advertisement

ಬರಲಿವೆ ಸ್ಟಂಪ್‌ಗೆ ದಾರ ಕಟ್ಟಿದ ಬೈಲ್ಸ್‌ : ಕ್ರಿಕೆಟ್‌ನ ಹೊಸ ನೀತಿ!

10:50 AM Apr 13, 2017 | Team Udayavani |

ಲಂಡನ್‌: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಿಯಮಗಳನ್ನು ರೂಪಿಸುವ ಅಧಿಕಾರ ಹೊಂದಿರುವ ಮೆರಿಲ್‌ಬೋನ್‌ ಕ್ರಿಕೆಟ್‌ ಕ್ಲಬ್‌ ಇನ್ನೂ ಮಹತ್ವದ ಬದಲಾವಣೆಗೆ ಒಪ್ಪಿಗೆ ಸೂಚಿಸಿದೆ. 

Advertisement

ಕೆಲವು ತಿಂಗಳ ಹಿಂದೆ ಅಶಿಸ್ತು ಪ್ರದರ್ಶಿಸುವ ಕ್ರಿಕೆಟಿಗರನ್ನು ಮೈದಾನದಿಂದಲೇ ಹೊರಕಳುಹಿಸುವ ಮಹತ್ವದ ನಿಯಮ ರೂಪಿಸಿದ್ದ ಅದು ಇದೀಗ ಇನ್ನೂ ಒಂದೆರಡು ನಿಯಮಗಳಿಗೆ ಒಪ್ಪಿಗೆ ನೀಡಿದೆ. ಅದರ ಪ್ರಕಾರ ಸ್ಟಂಪ್‌ಗ್ಳಿಂದ ಮೇಲಕ್ಕೆ ಎಗರದ  ಬರೀ ಜಾರಿ ಬೀಳುವಂತ ಬೈಲ್‌ಗ‌ಳ ತಯಾರಿಗೆ ಒಪ್ಪಿಗೆ ನೀಡಿದೆ. ಇದರಿಂದ ವಿಕೆಟ್‌ ಕೀಪರ್‌ಗಳಿಗೆ ಹಾನಿ ತಪ್ಪಿಸಬಹುದು ಎನ್ನುವುದು ಉದ್ದೇಶ. ಈ ಪ್ರಕಾರ ಬೈಲ್‌ಗ‌ಳು ಸ್ಟಂಪ್‌ಗ್ಳಿಗೆ ಅಂಟಿಕೊಂಡಿರುವಂತೆ ಸಣ್ಣ ದಾರದಿಂದ ಕಟ್ಟಿರುವ ಸಾಧ್ಯತೆಯಿರುತ್ತದೆ. ಬೈಲ್‌ ಸ್ಟಂಪ್‌ನಿಂದ ಮೇಲಕ್ಕೆ ಎಗರಿದರೂ ದೂರ ಹೋಗಬಾರದು ಎನ್ನುವುದು ಉದ್ದೇಶ. 2012ರಲ್ಲಿ ಬೈಲ್‌ಗ‌ಳು ಬಿರುಸಾಗಿ ಎಗರಿ ದಕ್ಷಿಣ ಆಫ್ರಿಕಾದ ಖ್ಯಾತ ವಿಕೆಟ್‌ ಕೀಪರ್‌ ಮಾರ್ಕ್‌ ಬೌಷರ್‌ ಕಣ್ಣಿಗೆ ವೃತ್ತಿ ಜೀವನವೇ ಅಂತ್ಯವಾಗಿತ್ತು. ಇದನ್ನು ಗಮನಿಸಿ ಈ ನಿರ್ಧಾರ ಮಾಡಲಾಗಿದೆ.

ಇದಲ್ಲದೇ ಕೈನಿಂದ ಬ್ಯಾಟ್ಸ್‌ಮನ್‌ ಗಳು ಮುಟ್ಟಿದರೆ ಔಟ್‌ ಕೊಡುವ ನಿಯಮವನ್ನು ಬದಲಿಸಿ ಕ್ಷೇತ್ರರಕ್ಷಣೆಗೆ ಅಡ್ಡಿ ಪಡಿಸುವ ಘಟನೆಯ ವ್ಯಾಪ್ತಿಗೆ ತಂದಿದೆ. ಇದರಿಂದ ಕ್ರಿಕೆಟ್‌ನಲ್ಲಿ ಔಟ್‌ ನೀಡುವ 10 ಸಾಧ್ಯತೆಗಳಲ್ಲಿ ಒಂದನ್ನು ಇಲ್ಲವಾಗಿಸಿದೆ. ಇಲ್ಲಿಯವರೆಗೆ ಬ್ಯಾಟ್ಸ್‌ಮನ್‌ ಬ್ಯಾಟಿಂಗ್‌ ವೇಳೆ ಕೈನಿಂದ ಚೆಂಡನ್ನು
ಉದ್ದೇಶಪೂರ್ವಕವಾಗಿ ತಡೆದರೆ ಔಟ್‌ ಕೊಡಲಾಗುತ್ತಿತ್ತು. ಇದನ್ನು ಬೌಲಿಂಗ್‌ ತಂಡ ದುರುಪಯೋಗ ಪಡಿಸಿಕೊಂಡ ಹಿನ್ನೆಲೆಯಲ್ಲಿ ಈ ನಿಯಮವನ್ನು ಬದಲಿ ಸಲಾಗಿದೆ. ಆದರೆ ಉದ್ದೇಶಪೂರ್ವಕವಾಗಿ ಚೆಂಡನ್ನು ತಡೆದರೆ ಈಗಲೂ ಔಟ್‌ ನೀಡಲಾಗುತ್ತದೆ. ಅದು ಅಂಪೈರ್‌ ನಿರ್ಧಾರವನ್ನವಲಂಬಿಸಿರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next