Advertisement

ನಾಣ್ಯವನ್ನು ಮಾಯ ಮಾಡೋ ತಂತ್ರ! 

06:30 AM Feb 22, 2018 | |

ಅಂಗಡಿಗೆ ಹೋಗುವಾಗ ಚಾಕೊಲೇಟ್‌, ಪೆಪ್ಪರ್‌ವೆುಂಟ್‌ ತಗೋ ಅಂತ ಅಮ್ಮನೋ, ಅಪ್ಪನೋ ದುಡ್ಡು ಕೊಟ್ಟರೆ ಎಷ್ಟು ಖುಷಿಯಾಗುತ್ತೆ. ಹಾಗೆ ಸಿಕ್ಕ ಒಂದೆರಡು ನಾಣ್ಯಗಳನ್ನಿಟ್ಟುಕೊಂಡೇ ನೀವು ಜಾದೂ ಪ್ರದರ್ಶಿಸಬಹುದು. ನಾಣ್ಯವನ್ನು ಮಾಯ ಮಾಡೋ ಶಕ್ತಿ ನನಗಿದೆ ಅಂತ ಗೆಳೆಯರ ಮುಂದೆ ಗತ್ತಿನಿಂದ ಬೀಗಬಹುದು. ಹೇಗೆ ಗೊತ್ತಾ?

Advertisement

ಬೇಕಾಗುವ ವಸ್ತುಗಳು: ನಾಣ್ಯಗಳು, ಅಲ್ಯುಮಿನಿಯಂ ಹಾಳೆ, ಕತ್ತರಿ.

ಪ್ರದರ್ಶನ: ಜಾದೂಗಾರ ಕೈಯ ಮುಷ್ಟಿಯಲ್ಲಿ ನಾಲ್ಕು ನಾಣ್ಯಗಳನ್ನು ಹಿಡಿದಿರುತ್ತಾನೆ. ನಂತರ ಮುಷ್ಟಿಯನ್ನು ಮುಚ್ಚಿ ಹಿಡಿದು, ಎರಡು ನಿಮಿಷಗಳ ನಂತರ ಬಿಚ್ಚಿದಾಗ ನಾಲ್ಕು ನಾಣ್ಯಗಳ ಪೈಕಿ ಮೂರೇ ನಾಣ್ಯ ಇರುತ್ತದೆ. ಒಂದು ನಾಣ್ಯವನ್ನು ಜಾದೂಗಾರ ಮಾಯ ಮಾಡಿರುತ್ತಾನೆ. 

ತಯಾರಿ: ಈ ಜಾದೂವಿನ ರಹಸ್ಯ ಅಡಗಿರುವುದು ಕೃತಕ ನಾಣ್ಯದಲ್ಲಿ. ಅಂದರೆ, ನೀವು ತೆಗೆದುಕೊಳ್ಳುವ ನಾಲ್ಕು ನಾಣ್ಯಗಳಲ್ಲಿ ಮೂರು ನಾಣ್ಯಗಳು ಮಾತ್ರ ನಿಜವಾಗಿದ್ದಾಗಿದ್ದು, ಇನ್ನೊಂದನ್ನು ನೀವೇ ತಯಾರಿಸಬೇಕು. ಹೇಗೆಂದರೆ, ಒಂದು ಅಲ್ಯುಮಿನಿಯಂ ಹಾಳೆಯನ್ನು ತೆಗೆದುಕೊಂಡು, ಅದರ ಮೇಲೆ ನಾಣ್ಯದ ಅಚ್ಚು ಬೀಳುವಂತೆ ನಾಣ್ಯದಲ್ಲಿ ಸುತ್ತಿ ನಾಣ್ಯದ ಆಕಾರದಲ್ಲಿಯೇ ಕತ್ತರಿಸಿ.

ನೋಡುವವರಿಗೆ ಅದು ಕೃತಕ ನಾಣ್ಯ ಎಂದು ತಿಳಿಯದ ರೀತಿಯಲ್ಲಿ ನಾಣ್ಯದ ಅಚ್ಚು, ಆಕಾರವಿರಲಿ. ಮೂರು ನಾಣ್ಯಗಳ ಜೊತೆಗೆ ಕೃತಕ ನಾಣ್ಯವನ್ನು ಹಿಡಿದು ಪ್ರೇಕ್ಷಕರಿಗೆ ತೋರಿಸಿ. ಅವರ ನಾಲ್ಕೂ ನಾಣ್ಯಗಳು ನಿಜವೆಂದು ನಂಬುತ್ತಾರೆ.

Advertisement

ನಂತರ ಮುಷ್ಟಿಯನ್ನು ಮುಚ್ಚಿ ಹಿಡಿದು, ಕೃತಕ ನಾಣ್ಯವನ್ನು ನಿಧಾನಕ್ಕೆ ಹೊಸಕಿ ಮುದ್ದೆ ಮಾಡಿ, ಅದನ್ನು ಉಳಿದ ನಾಣ್ಯಗಳ ಹಿಂದೆ ಅಡಗಿಸಿಡಿ. ಮುಷ್ಟಿ ತೆಗೆದಾಗ ನಾಲ್ಕರ ಬದಲು ಮೂರೇ ನಾಣ್ಯಗಳಿರುತ್ತವೆ. ಗೆಳೆಯರ ಮುಂದೆ ಈ ಜಾದೂ ಪ್ರದರ್ಶಿಸುವ ಮುನ್ನ ನಾಲ್ಕೈದು ಬಾರಿ ಮನೆಯಲ್ಲಿ ಪ್ರಯೋಗ ಮಾಡಿ. ನಾಣ್ಯದ ಬಣ್ಣದ ಅಲ್ಯುಮಿನಿಯಂ ಹಾಳೆಯನ್ನೇ ಜಾದೂವಿಗೆ ಉಪಯೋಗಿಸಿ. 

* ವಿನ್ಸೆಂಟ್ ಲೋಬೋ

Advertisement

Udayavani is now on Telegram. Click here to join our channel and stay updated with the latest news.

Next