Advertisement

‌ಕಥೆಗಾರನಿಗೆ ಲೋಕಾನುಭವ ಅರಿವು ಅಗತ್ಯ

07:56 AM May 23, 2020 | Suhan S |

ಶಿರೂರ: ಕಳೆದ ನಾಲ್ಕು ವಾರಗಳಿಂದ ಗ್ರಾಮದ ಗ್ರಾಮೀಣ ಕಲೆ ಹಾಗೂ ಸಾಹಿತ್ಯ ವೇದಿಕೆ ಕೋವಿಡ್ ಲಾಕ್‌ಡೌನ್‌ ಆದ ಸಮಯದಲ್ಲಿ ವಿಶೇಷ ಸಾಹಿತ್ಯ ಓದು ಅಭಿಯಾನ ಹಮ್ಮಿಕೊಂಡು ಬರುತ್ತಿದೆ.

Advertisement

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಶ್ರೀಶೈಲ ಕರಿಶಂಕರಿ, ಇಂದು ಕಥೆಗಾರನಿಗೆ ಲೋಕಾನುಭವ ಸ್ಥಳೀಯತೆಯ ಅರಿವು ಬಹಳ ಮುಖ್ಯ. ಅದು ಇದ್ದಾಗಲೇ ಕಥೆಗಳು ಸಶಕ್ತವಾಗಿ ಬರಲು ಸಾಧ್ಯ ಎಂದರು. ಗ್ರಾಮದ ಕಥೆಗಾರ ಲಕ್ಷ್ಮಣ ಬಾದಾಮಿ ಅವರ ಒಂದು ಚಿಟಿಕೆಯ ಮಣ್ಣು ಕಥೆಯನ್ನು ಸಾಹಿತ್ಯ ವೇದಿಕೆಯ ಸದಸ್ಯ ಕಲ್ಲಪ್ಪ ಭಗವತಿ ಓದಿದರು. ನಂತರ ಕಥೆಯ ಕುರಿತು ಚರ್ಚೆ ನಡೆಯಿತು.

ದಿನದಿನಕ್ಕೆ ಮನುಷ್ಯ ಅನ್ನ ಬೆಳೆಯುವ ಭೂಮಿಯನ್ನು ಕಬಳಿಸುತ್ತಿರುವುದನ್ನು ಕಂಡು ನನ್ನಲ್ಲಿ ಉಂಟಾದ ನೋವು ಆತಂಕಗಳೇ “ಒಂದು ಚಿಟಿಕೆಯ ಮಣ್ಣು’ ಕಥೆಯಾಗಿದೆ ಎಂದು ಕಥೆಗಾರ ಲಕ್ಷ್ಮಣ ಬಾದಾಮಿ ಹೇಳಿದರು. ವೇದಿಕೆ ಅಧ್ಯಕ್ಷ ಶಂಕರ ಹೂಗಾರ, ಉಪಾಧ್ಯಕ್ಷ ಎನ್‌.ಪಿ. ಮೆಣಸಗಿ, ಮಲ್ಲು ಬೂದಿಹಾಳ, ಮತ್ತು ಕಾಚಿಟ್ಟಿ, ಕೆ.ಎಂ. ಭಗವತಿ, ಎಂ.ಎಸ್‌. ಕಲಗುಡಿ, ಎಸ್‌.ಬಿ. ನಡುವಿನಮನಿ, ಸುಭಾ ಹುಲ್ಯಾಳ, ಎಸ್‌.ಆರ್‌. ಜಡ್ರಾಮಕುಂಟಿ, ನಾಗೇಶ ಮಂಗಳೂರ, ಶ್ರೀಶೈಲ ಹೊಸೂರ, ಸಿದ್ದಪ್ಪ ಹಳ್ಳೂರ, ಸಿದ್ದರಾಜ ಹಳೇಮನಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next