Advertisement
ಬಡ ಕುಟುಂಬದಲ್ಲಿ ಹುಟ್ಟಿದ ಸೋಯಿ ಚಿರೋ ಹೋಂಡಾ ಚಿಕ್ಕಂದಿನಿಂದಲೇ ಏನಾದರೂ ಸಾಧನೆ ಮಾಡಬೇಕು ಎನ್ನುವ ಅದಮ್ಯ ಬಯಕೆ ಇಟ್ಟುಕೊಂಡಿದ್ದರು. ಹಾಗೆಯೇ ಕಾಲೇಜಿನ ವರ್ಕ್ ಶಾಪ್‌ನಲ್ಲಿದ್ದಾಗ ಹಠಾತ್ತಾನೆ ಪಿಸ್ಟನ್ ತಯಾರಿಸುವ ಐಡಿಯಾ ಹೊಳೆಯಿತು. ಹಗಲು-ರಾತ್ರಿ ಶ್ರಮಪಟ್ಟು ತಯಾರಿಸಿ ಟೊಯೊಟೊ ಕಂಪೆನಿಗೆ ಮಾರಲು ಹೋದಾಗ, ಗುಣ ಮಟ್ಟದ ಉತ್ಪನ್ನ ಇದಲ್ಲ ಎಂದು ಕಂಪೆನಿ ನಿರಾಕರಿಸಿತು. ಎಲ್ಲರೂ ಗೇಲಿ ಮಾಡಿ ನಕ್ಕರು. ಆದರೆ ಹೋಂಡಾ ಅವರು ಮಂದಹಾಸ ಬೀರಿ ತನ್ನ ಪ್ರಯತ್ನವನ್ನು ಮುಂದುವರಿಸಿದರು. ಮುಂದೊಂದು ದಿನ ತನ್ನ ಸತತ ಪ್ರಯತ್ನದಿಂದ ತನ್ನದೇ ಆದ ಫ್ಯಾಕ್ಟರಿಯನ್ನು ಆರಂಭಿಸಿದರು.ಆದರೆ ಭೂಕಂಪಕ್ಕೀಡಾಗಿ ಧರೆಗುರುಳಿತು. ಮತ್ತೆ ಕಾರ್ಖಾನೆ ನಿರ್ಮಾಣಕ್ಕೆ ಮುಂದಾದಾಗ 2ನೇ ಮಹಾಯುದ್ಧವು ಪ್ರವೇಶಿಸಿಬಿಟ್ಟಿತ್ತು. ಆ ಹೊತ್ತಿಗೆ ಸಿಮೆಂಟಿನ ಪೂರೈಕೆ ನಿಂತೇ ಹೋಯ್ತು. ಆದರೆ ಇದಕ್ಕೆಲ್ಲ ತಲೆಕೆಡಿಸಿಕೊಳ್ಳದ ಹೋಂಡಾ ಅವರು ತಾನೆೇ ಸಿಮೆಂಟ್ ತಯಾರಿಸಿ ಕಾರ್ಖಾನೆಯ ಕೆಲಸ ಪೂರ್ಣಗೊಳಿಸಿದರು. ಹೀಗೆ ಮುಂದಿನ ದಿನಗಳಲ್ಲಿ ಹಲವು ಬಾರಿ ಸೋಲುಗಳನ್ನು ಕಂಡರೂ ಎಲ್ಲವನ್ನೂ ಮೆಟ್ಟಿನಿಂತು ಮುಂದೊಂದು ದಿನ ಹೋಂಡಾ ಕಂಪೆನಿಯನ್ನು ಜಗದ್ವಿಖ್ಯಾತ ಮಾಡಿದರು.