Advertisement

ಮರೆತೇ ಹೋದ ಇಂದ್ರಾಣಿ ಕಥೆ: ಉದಯವಾಣಿ ಸರಣಿಯಿಂದ ಜಾಗೃತಿ: ಡಿಸಿ

09:35 PM Oct 02, 2020 | mahesh |

ಉಡುಪಿ: ಉದಯವಾಣಿ ಪತ್ರಿಕೆಯು ಕಲುಷಿತಗೊಳ್ಳುತ್ತಿರುವ ಇಂದ್ರಾಣಿ ಹಾಗೂ ಒಳಚರಂಡಿ ಅವ್ಯವಸ್ಥೆ ಬಗ್ಗೆ ಅಧ್ಯಯನ ವರದಿಗಳನ್ನು ಪ್ರಕಟಿಸುವ ಮೂಲಕ ಅಧಿಕಾರಿಗಳನ್ನು ಜಾಗೃತಿಗೊಳಿಸಿದೆ. ಇದೀಗ ಎಸ್‌ಟಿಪಿ, ವೆಟ್‌ವೆಲ್‌ಗ‌ಳ ನಿರ್ವಹಣೆ ಹಾಗೂ ಇತರೆ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್‌ ಹೇಳಿದ್ದಾರೆ.

Advertisement

ಶುಕ್ರವಾರ ಶೀಂಬ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸ್ವರ್ಣಾರಾಧನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಉದಯವಾಣಿ ಪತ್ರಿಕೆಯು “ಮರೆತೇ ಹೋದ ಇಂದ್ರಾಣಿ ಕಥೆ ಜಲಮೂಲ ರಕ್ಷಿಸಿ ಉಡುಪಿ ಉಳಿಸಿ’ ಎನ್ನುವ ಸರಣಿಯನ್ನು ಫೆ. 13ರಿಂದ ಪ್ರಾರಂಭಿಸಿ, ಮಾರ್ಚ್‌ ಮಾ.11ರ ವರೆಗೆ ನಿರಂತರವಾಗಿ ಇಂದ್ರಾಣಿ ಕಲುಷಿತವಾಗಲು ಕಾರಣ, ಹಾಳಾದ ಬಾವಿಗಳು, ರೋಗಗ್ರಸ್ತ ವೆಟ್‌ವೆಲ್‌ಗ‌ಳು, ನಿರ್ವಹಣೆಯಿಲ್ಲದ ತ್ಯಾಜ್ಯ ನೀರು ಶುದ್ಧೀಕರಣ ಘಟಕ, ಕೃಷಿ, ತೋಟಗಾರಿಕೆ ಭೂಮಿ ನಾಶ, ಸಾಂಕ್ರಾಮಿಕ ರೋಗ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತ ವರದಿಯನ್ನು ಪ್ರಕಟಿಸಿತ್ತು.

ನದಿ ಆರಂಭವಾಗುವ ಪ್ರದೇಶದಿಂದ ಸಮುದ್ರ ಸೇರುವವರೆಗೆ ಎಲ್ಲೆಲ್ಲಿ ಯಾವ್ಯಾವ ರೀತಿಯ ತಡೆಗಳಿವೆ. ಎಲ್ಲೆಲ್ಲಿ ಕಸ, ಪ್ಲಾಸ್ಟಿಕ್‌ ಎಸೆಯಲಾಗುತ್ತದೆ. ತ್ಯಾಜ್ಯ ನೀರುಗಳನ್ನು ಬಿಡಲಾಗುತ್ತದೆ ಎಂಬುವುದರ ಕುರಿತು ಸಮಗ್ರ ವರದಿ ತಯಾರಿಸಲಾಗಿತ್ತು.  ನದಿ ಹಲವು ವರ್ಷಗಳ ಹಿಂದೆ ಹೇಗಿತ್ತು. ಎಷ್ಟು ಜನರಿಗೆ ಉಪಯೋಗವಾಗಿತ್ತು. ಎಷ್ಟು ಪ್ರದೇಶಗಳಲ್ಲಿ ಕೃಷಿ ನಡೆಯುತ್ತಿತ್ತು. ಈಗ ಪರಿಸ್ಥಿತಿ ಹೇಗಿದೆ ಎಂಬ ಕುರಿತು ಸ್ಥಳೀಯ ಹಿರಿಯ ಕೃಷಿಕರಿಂದ ಹಿಡಿದು ಈಗಿನ ಯುವಕರವರೆಗೆ ಎಲ್ಲರಿಂದಲೂ ಮಾಹಿತಿಯನ್ನು ಸಂಗ್ರಹಿಸಿ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ  ಮುಂದಿಡಲಾಗಿತ್ತು.

ಇಂದ್ರಾಣಿ ನದಿ ಶುದ್ಧೀಕರಣಕ್ಕೆ ಎಲ್ಲರ ಸಹಕಾರ ಬೇಕು ಎನ್ನುವ ನಿಟ್ಟಿನಲ್ಲಿ ನದಿ ಪಾತ್ರದ ಜನರು, ನದಿ ಕುರಿತು ಜ್ಞಾನ ಹೊಂದಿದ್ದ ಹೊರ ಪ್ರದೇಶದ ಜನರ ಅಭಿಪ್ರಾಯಗಳನ್ನು ಜನಪ್ರತಿನಿಧಿಗಳು, ಅಧಿಕಾರಿಗಳು ನೀಡಿರುವ ವಿವಿಧ ಅಭಿಪ್ರಾಯಗಳನ್ನು ಪ್ರಕಟಿಸಲಾಗಿತ್ತು.

ಪತ್ರಿಕೆಯು ಅಂಕಿ ಸಂಖ್ಯೆಗಳ ಸಹಿತ
ವಿವರವಾದ ಚಿತ್ರ ಸಹಿತ ವರದಿ ಪ್ರಕಟಿಸಿದ್ದರಿಂದ ಸರಣಿಗೆ ಸ್ಪಂದಿಸಿದ ಅಧಿಕಾರಿಗಳು ವೆಟ್‌ವೆಲ್‌ಗ‌ಳಿಗೆ ಜನರೇಟರ್‌ ಆಳವಡಿಕೆ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ತಾತ್ಕಾಲಿಕ ಉಪಕ್ರಮವನ್ನು ತತ್‌ಕ್ಷಣವೇ ತೆಗೆದುಕೊಂಡಿದ್ದರು. ಇನ್ನು ಕೆಲವು ಉಪಕ್ರಮಗಳಿಗೆ ಸಂಬಂಧಿಸಿ ಯೋಜನೆ ತಯಾರಿಸಿ ಸರಕಾರದ ಮುಂದಿಡಲಾಗಿತ್ತು.

Advertisement

ನಗರಕ್ಕೆ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಡಿಪಿಆರ್‌ ಆದೇಶ
ಉಡುಪಿ: ನಗರಸಭೆ ವ್ಯಾಪ್ತಿಯಲ್ಲಿ ಒಳಚರಂಡಿ ವ್ಯವಸ್ಥೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಸಮಗ್ರ ಯೋಜನಾ ವರದಿಯನ್ನು (ಡಿಪಿಆರ್‌) ಯಾರಿಸಲು ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್‌ ತಿಳಿಸಿದರು. ಶುಕ್ರವಾರ ಶೀಂಬ್ರದಲ್ಲಿ ಮಾತನಾಡಿದ ಅವರು ನಗರದಲ್ಲಿ ಹರಿಯುವ
ಇಂದ್ರಾಣಿ ಶುದ್ಧವಾಗಿದ್ದರೆ ಮಾತ್ರ ಜನರ ಆರೋಗ್ಯ ಚೆನ್ನಾಗಿರುತ್ತದೆ. ಈ ನಿಟ್ಟಿನಲ್ಲಿ ನಾವು ಗಮನ ಹರಿಸಬೇಕು. ನಗರದಲ್ಲಿ ವ್ಯವಸ್ಥಿತ ಒಳಚರಂಡಿ ನಿರ್ಮಿಸಲು ಸುಮಾರು 400 ಕೋ.ರೂ. ಬೇಕಾಗಿದ್ದು, ಈ ಅನುದಾನವನ್ನು ತರುವಲ್ಲಿ ಶಾಸಕ ಕೆ.ರಘುಪತಿಭಟ್‌ ಅವರು ಶ್ರಮಿಸುತ್ತಿದ್ದಾರೆ. ಒಳಚರಂಡಿ ವ್ಯವಸ್ಥೆ ಪೂರ್ಣವಾದರೆ ಇಂದ್ರಾಣಿ ಕಲುಷಿತವಾಗುವುದು ತಪ್ಪುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next