Advertisement
ಬಂಟ್ವಾಳ ತಾಲೂಕಿನಲ್ಲಿ ಇತ್ತೀಚೆಗೆ ನಡೆದ ಗಲಭೆಯ ಪ್ರಯೋಜನ ಪಡೆಯಲು ಹವಣಿಸಿದ ಮಂಗಳೂರು ತಾಲೂಕು ಕುಪ್ಪೆಪದವಿನ ಅಬೂಬಕರ್ ಸಿದ್ದಿಕಿ ಪೊಲೀಸ್ ತನಿಖೆಯ ವೇಳೆ ನೈಜ ಸಂಗತಿ ಬಹಿರಂಗಗೊಂಡು ತಾನೇ ತೋಡಿದ ಗುಂಡಿಗೆ ತಾವೇ ಬಿದ್ದಿದ್ದಾರೆ.
Related Articles
ಕೋಮು ಗಲಭೆ ಸಂತ್ರಸ್ತ ಎಂದು ಲಾಭ ಪಡೆಯಲು ತಾನು ಈ ರೀತಿಯ ನಾಟಕ ಮಾಡಿದ್ದಾಗಿ ಆತ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆತ ಕೈ, ಮುಖ ಹಾಗೂ ತಲೆಗೆ ಬ್ಲೇಡ್‌ನಿಂದ ಸ್ವತಃಕೊಯ್ದುಕೊಂಡು ಹಲ್ಲೆಗೊಳಗಾಗಿದ್ದೇನೆ ಎಂದು ಬಿಂಬಿಸಿಕೊಂಡಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.
Advertisement
ಸಾಲ ಮರು ಪಾವತಿ ಮಾಡಿಲ್ಲ ಕೆಂಪು ಕಲ್ಲು ಸಾಗಿಸುವ ಲಾರಿಯಲ್ಲಿ ಲೋಡಿಂಗ್ ಮತ್ತು ಅನ್‌ಲೋಡಿಂಗ್ ಕೆಲಸ ಮಾಡುತ್ತಿರುವ ಆತ, ಸಲಾಂ ಎಂಬಾತನ ಬಳಿಯಿಂದ 36 ಸಾವಿರ ರೂ. ಸಾಲ ಪಡೆದಿದ್ದ. ಅದನ್ನು ಮರು ಪಾವತಿ ಮಾಡಲು ದಾರಿ ಕಾಣದೇ ಈ ರೀತಿ ಮಾಡಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾನೆ. ಅಬೂಬಕರ್ ಸಿದ್ದಿಕ್ ಹಲ್ಲೆ ಪ್ರಕರಣದ ಬಳಿಕ ಪೊಲೀಸರು ಮತ್ತಷ್ಟು ಒತ್ತಡಕ್ಕೆ ಸಿಲುಕಿದ್ದರು. ಆಡಳಿತ ಪಕ್ಷ ಮತ್ತು ಹಿರಿಯ ಅಧಿಕಾರಿಗಳು ಪ್ರತಿಪಕ್ಷ ಹಾಗೂ ಸಾರ್ವಜನಿಕರಿಂದ ತೀವ್ರ ಟೀಕೆಗೆ ಒಳಗಾಗಿದ್ದರು.
ಪೊಲೀಸ್ ತಂಡಕ್ಕೆ ಬಹುಮಾನ
ಡಿಜಿಪಿ ಆರ್.ಕೆ.ದತ್ತ ಅವರು ಈ ಪ್ರಕರಣವನ್ನು ಬೇಧಿಸಿದ ಬಜಪೆ ಠಾಣೆ ಇನ್‌ಸ್ಪೆಕ್ಟರ್ ಟಿ.ಡಿ ನಾಗರಾಜ್ ನೇತೃತ್ವದ ತಂಡಕ್ಕೆ ನಗದು ಬಹುಮಾನ ಘೋಷಿಸುವ ಮೂಲಕ ಅಭಿನಂದಿಸಿದ್ದಾರೆ. ಆದರೆ ಪೊಲೀಸರ ಕೆಲಸ ಇಲ್ಲಿಗೇ ಮುಗಿದಿಲ್ಲ. ಆದರೆ ಅಪರಿಚಿತರು ಹಲ್ಲೆ ನಡೆಸಿದ್ದಲ್ಲ, ತಾನೇ ಸ್ವತಃ ಗಾಯಗಳನ್ನು ಮಾಡಿಕೊಂಡಿದ್ದಾಗಿ ಆತ ಪೊಲೀಸರಿಗೆ ತಿಳಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಅಬೂಬಕರ್ ಸಿದ್ದಿಕಿ ಮೇಲೆ ಕೇಸು ದಾಖಲಾಗ ಬೇಕಿದೆ. ನ್ಯಾಯಾಲಯಕ್ಕೆ ಮನವರಿಕೆ
ಆದರೆ ಅದಕ್ಕೆ ಕೆಲವು ಕಾನೂನು ಪ್ರಕ್ರಿಯೆಗಳಿವೆ. ಮೊದಲನೆಯದಾಗಿ ಪೊಲೀಸರು ಈ ಪ್ರಕರಣದ ಬಗ್ಗೆ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸ ಬೇಕಾಗಿದೆ. ಎರಡನೆಯದಾಗಿ ಪೊಲೀಸರು ಪುನಃ ವಿಚಾರಣೆ ನಡೆಸಿ ಅಬೂಬಕರ್ ಸಿದ್ದಿಕಿ ಮೇಲೆ ನಡೆದಿದೆ ಎನ್ನಲಾದ ಹಲ್ಲೆ ಬಗೆಗಿನ ದೂರು ಸುಳ್ಳು ಎಂಬುದಾಗಿ ಸರದಿ ಸಲ್ಲಿಸಿ ನ್ಯಾಯಾಲಯಕ್ಕೆ ಮನವರಿಕೆ ಮಾಡ ಬೇಕಾಗುತ್ತದೆ. ಅದಾದ ಬಳಿಕ, ಮನವರಿಕೆಯಾದರೆ ನ್ಯಾಯಾಲಯವು ಅಬೂಬಕರ್ ಸಿದ್ಧಿಕ್ ವಿರುದ್ಧ ಆತ್ಮಹತ್ಯೆಗೆ ಯತ್ನ ಪ್ರಕರಣ ದಾಖಲಿಸುವಂತೆ ನ್ಯಾಯಾಲಯವು ಪೊಲೀಸರಿಗೆ ಆದೇಶಿಸ ಬಹುದು. ಹಿಂದೆ ಇಂತಹ ಪ್ರಕರಣ
ಇಂತಹುದೇ ಪ್ರಕರಣ ಈ ಹಿಂದೆ ಪುತ್ತೂರಿನಲ್ಲಿ 2013 ಸಪ್ಟೆಂಬರ್ ತಿಂಗಳಲ್ಲಿ ನಡೆದಿತ್ತು. ಆ ಪ್ರಕರಣದಲ್ಲಿ ಯುವತಿಯೊಬ್ಬಳು ತನ್ನನ್ನು ಅಪಹರಿಸಲಾಗಿದೆ ಎಂಬುದಾಗಿ ದೂರು ನೀಡಿದ್ದರು. ಅದರಂತೆ ಪುತ್ತೂರು ಗ್ರಾಮಾಂತರ ಪೊಲೀಸರು ಕೇಸು ದಾಖಲಿಸಿದ್ದರು. ಈ ಪ್ರಕರಣದ ಬಗ್ಗೆ ಪೊಲೀಸರು ಕೂಲಂಕಷ ತನಿಖೆ ನಡೆಸಿದಾಗ ಯುವತಿ ನೀಡಿದ ದೂರು ಸುಳ್ಳು ಎಂಬುದಾಗಿ ತಿಳಿದು ಬಂದಿತ್ತು.