Advertisement

ಲಕ್ಷಾಂತರ ಜನರ ಮನಗೆದ್ದ ಕಡಲೆಕಾಯಿ ವ್ಯಾಪಾರಿಯ ಕಚ್ಚಾ ಬಾದಾಮ್ ಹಾಡು ವೈರಲ್ ಆಗಿದ್ದೇಗೆ?

12:41 PM Feb 16, 2022 | Team Udayavani |

ಪ್ರತಿಭೆಗಳು ಯಾವ ಸಂದರ್ಭದಲ್ಲಿಯೂ ಅನಾವರಣಗೊಳ್ಳಬಹುದು. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳು ಹೆಚ್ಚು, ಹೆಚ್ಚು ಪ್ರಚಲಿತವಾಗುತ್ತಿರುವ ನಡುವೆಯೇ ನಮಗೆ ರಾನು ಮಂಡಲ್, ಕೇರಳದ ಕೂಲಿ ಕಾರ್ಮಿಕ ಮಮ್ಮಿಕ್ಕಾನ್ ಹೀಗೆ ಹಲವಾರು ಮಂದಿ ಜನಪ್ರಿಯರಾಗಿದ್ದರು, ಇತ್ತೀಚೆಗೆ ಅದಕ್ಕೊಂದು ಹೊಸ ಸೇರ್ಪಡೆ ಕಚ್ಚಾ ಬಾದಾಮ್ ಹಾಡು.!

Advertisement

ಕಚ್ಛಾ ಬಾದಾಮ್ (ನೆಲಗಡಲೆ) ಹಾಡು ಹೇಗೆ ಏಕಾಏಕಿ ಲಕ್ಷಾಂತರ ಜನರ ಗಮನ ಸೆಳೆಯಿತು. ಈ ಹಾಡು ಇಷ್ಟೊಂದು ಕುತೂಹಲ ಹುಟ್ಟುಹಾಕಲು ಕಾರಣವೇನು? ಎಂಬ ಸಂಕ್ತಿಪ್ತ ನೋಟ ಇಲ್ಲಿದೆ…

ನಿಮ್ಮ ಊಹೆಯಂತೆ ಕಚ್ಚಾ ಬಾದಾಮ್ ಹಾಡನ್ನು ಯಾವುದೇ ಪ್ರಸಿದ್ಧ ಸಂಗೀತಗಾರನ ಹಿನ್ನೆಲೆ ಹೊಂದಿಲ್ಲ. ಇದು ಪಶ್ಚಿಮಬಂಗಾಳದ ಬೀದಿ ಬದಿ ವ್ಯಾಪಾರಿ ಭುಬನ್ ಬಡ್ಯಾಕರ್ ಅವರು ಕಡಲೆಕಾಯಿ ಮಾರಲು ಕಚ್ಚಾ ಬಾದಾಮ್ ಹಾಡನ್ನು ಹಾಡಿದ್ದರು. ಈ ಕಡಲೆಕಾಯಿ ವ್ಯಾಪಾರಿ ಪಶ್ಚಿಮಬಂಗಾಳದ ಬಿರ್ಭೌಮ್ ಜಿಲ್ಲೆಯ ಲಕ್ಷ್ಮೀನಾರಾಯಣ್ ಪುರ್ ಪಂಚಾಯತ್ ನ ಕುರ್ಲಾಜುರಿ ಗ್ರಾಮದ ನಿವಾಸಿಯಾಗಿದ್ದಾರೆ.

ಬಡ್ಯಾಕರ್ ಸಮೀಪದ ಗ್ರಾಮಗಳಿಗೆ ತೆರಳಿ ಬಳೆ, ಸಣ್ಣ ಆಭರಣ ಹಾಗೂ ಇತರ ವಸ್ತುಗಳನ್ನು ಪಡೆದು (ವಿನಿಮಯ)ಕಡಲೆಕಾಯಿಯನ್ನು ಮಾರಾಟ ಮಾಡುತ್ತಾರಂತೆ. ಹೀಗೆ ಗ್ರಾಹಕರನ್ನು ಸೆಳೆಯಲು ಬಡ್ಯಾಕರ್ ಕಚ್ಚಾ ಬಾದಾಮ್ ಹಾಡನ್ನು ಕಟ್ಟಿ ಹಾಡುವ ಮೂಲಕ ಹೊಸ ಗ್ರಾಹಕರ ಮನಸೆಳೆಯುತ್ತಿದ್ದರು.

ಕಚ್ಚಾ ಬಾದಾಮ್ ಹಾಡನ್ನು ಮೊದಲ ಬಾರಿಗೆ ಏಕ್ತಾರಾ ಎಂಬ ಯೂಟ್ಯೂಬ್ ಚಾನೆಲ್ ನಲ್ಲಿ ಹಂಚಿಕೊಳ್ಳಲಾಗಿತ್ತು. ಬಡ್ಯಾಕರ್ ಅವರ ವಿನಮ್ರ ಹಾಡು ಎರಡು ತಿಂಗಳಲ್ಲಿಯೇ ಲಕ್ಷಾಂತರ ಮಂದಿಯ ಮನ ಸೆಳೆದಿತ್ತು. ನಂತರ ಕಚ್ಚಾ ಬಾದಾಮ್ ಹಾಡು ಇನ್ಸಾಟಾಗ್ರಾಮ್ ಸೇರಿದಂತೆ ಇತರ ಸಾಮಾಜಿಕ ಜಾಲತಾಣದಲ್ಲೂ ವೈರಲ್ ಆಗಿತ್ತು.

Advertisement

ಬಾಂಗ್ಲಾದೇಶದ ಗಾಯಕ ನಜ್ಮು ರಿಯಚತ್ ಬಡ್ಯಾಕರ್ ಅವರ ಟ್ಯೂನ್ ಬಳಸಿ ರೀಮಿಕ್ಸ್ ಹಾಡು ರಚಿಸಿದ್ದು, ಅದು ಅಂತರ್ಜಾಲ ತಾಣದಲ್ಲಿ ಜನಪ್ರಿಯಗೊಂಡಿತ್ತು. ತದನಂತರ ಬಡ್ಯಾಕರ್ ಅವರ ಕಚ್ಚಾ ಬಾದಾಮ್ ಹಾಡು ಲಕ್ಷಾಂತರ ಇನ್ಸಾಟಾಗ್ರಾಮ್ ಬಳಕೆದಾರರ ಮನೆಗೆಲ್ಲುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next