Advertisement
ಅಲ್ಲೇ ಕೂತಿದ್ದಾನೆ. ಇವೊತ್ತು ಕಲ್ಲು ಕಲ್ಲು ಮಾತ್ರ ಆಗಿದೆ. ಅದನ್ನೇ ನೋಡ್ತಾ ಇದ್ದವನು, ಬಲಗೈಗೆ ಏನೋ ತಾಗಿದಂತಾಗಿ ತಿರುಗಿದನು. ಒಂದು ದಪ್ಪ ರಟ್ಟಿನ ಪೊಟ್ಟಣ. ಒಂದು ಅಡಿ ಉದ್ದ, ಒಂದು ಅಡಿ ಅಗಲ ಅರ್ಧ ಅಡಿ ಎತ್ತರ ಇದೆ. ಕಪ್ಪು ಬಣ್ಣದ್ದು. ಅದರ ಮೇಲೆ ನಿಜದ್ದೇನೋ ಎನ್ನುವ ಹಾಗೆ, ಈಗಷ್ಟೇ ಗಿಡದಿಂದ ಕೀಳಲ್ಪಟ್ಟಿದೆಯೇನೋ ಎಂಬಂತೆ ಕಡುಗೆಂಪು ಗುಲಾಬಿ ಹೂವಿನ ಚಿತ್ರವನ್ನು ಅಂಟಿಸಲಾಗಿದೆ. ವಿಳಾಸ ಇಲ್ಲ. ಅವನಿಗೆ ಆಶ್ಚರ್ಯ. ಯಾರು ತಂದಿಟ್ಟರು ಇದನ್ನು- ಎಂದು ಸುತ್ತಮುತ್ತ ನೋಡುತ್ತಿದ್ದಾನೆ. ಯಾರೂ ಕಾಣುತ್ತಿಲ್ಲ. ಕಲ್ಲಿನ ದಿಕ್ಕಿನ ಕಡೆಯಿಂದ ಒಂದು ಹೆಣ್ಣಿನ ನಗುವಿನ ಶಬ್ದ ತೇಲಿಬಂದು ಅವನ ಕಿವಿಗೆ ಮೆತ್ತಿಕೊಂಡಿತು. ಆದರೆ, ಯಾರೂ ಕಾಣಲಿಲ್ಲ. ಏನಪ್ಪ ಇದು ವಿಚಿತ್ರ ಎಂದು ಗಾಬರಿಗೊಂಡ. ಪಕ್ಕದಲ್ಲಿದ್ದ ಮರದಿಂದ ಯಾವುದೋ ಒಂದು ಹಕ್ಕಿ ಹಾರಿ ಹೋಯಿತು. ಏನೇನೋ ವಿಚಿತ್ರ ಭಾವನೆಗಳು ಅವನ ಮನಸ್ಸಿನಲ್ಲಿ ಓಡತೊಡಗಿದವು.
Related Articles
Advertisement
“ಡ್ರೈವರ್‌ನ ಹೆಂಡತಿ ಸತ್ತು ಹೋದಳಂತೆ. ಅದಕ್ಕೆ ಡ್ರೈವರ್ ಇಲ್ಲಿಯೇ ನಿಲ್ಲಿಸಿ ತನ್ನ ಊರಿಗೆ ಹೋದ. ಇನ್ನೇನು ಹೊಸ ಡ್ರೈವರ್ ಬರುತ್ತಾನೆ, ಫೋನ್ ಮಾಡಿದೆ’ ಎಂದ ನಿರ್ವಾಹಕ. ಎಲ್ಲ ಇಳಿದು ಬೇರೆ ಬಸ್ಸಿಗೆ ಹೋದರು ಎಂದವನು, ಮತ್ತೆ, “ಆದರೆ ನಿಮ್ಮ ಶಾಲನ್ನು ನೋಡಿದ ಹಾಗೆ ಕಾಣಲಿಲ್ಲ ಕಣಿÅ’ ಎಂದ. ಅವನು ಪ್ರಯಾಣ ಮಾಡುತ್ತಿದ್ದ ಬಸ್ಸಿನಿಂದ ಹಾರನ್ನಿನ ಶಬ್ದ. “ಬೇಗ ಬನ್ನಿ, ಟೈಮಾಗ್ತಿದೆ’ ಎಂದು ಕೂಗಿದ ಆಚೆ ಬಸ್ಸಿನ ಡ್ರೈವರ್. “ಶಾಲು ಶಾಲು’ ಎಂದು ಥಟಾರನೆ ಎದ್ದ. ಅವನು ಎದ್ದ ರಭಸಕ್ಕೆ , ಶಬ್ದಕ್ಕೆ ಇವನ ಪಕ್ಕದಲ್ಲಿ ಮಲಗಿದ್ದ ಇವನ ಅಮ್ಮ ಬೆಚ್ಚಿಬಿದ್ದು ಎದ್ದು ಕೂತು, “ಸ್ವಪ್ನಗಿಪ್ನ ಬಿತ್ತೇನೋ, ಅದೇನೋ ಶಾಲು ಶಾಲು ಅಂತಿದ್ದೇಯಲ್ಲೋ’ ಎಂದರು.
“ಅರೆ! ಕನಸಲ್ಲಿ ಕಂಡಂತಹ ಶಾಲು. ನಿಜಜೀವನದಲ್ಲಿ. ಏನು ವೈಚಿತ್ರ್ಯ!’ ಎಂದುಕೊಂಡ. ಅದನ್ನು ಸಂಪೂರ್ಣ ಹರವಿದ. ಒಂದು ಕಾಗದದ ತುಣುಕು ಅದರೊಳಗಿಂದ ಕೆಳಗೆ ಬಿದ್ದಿತು. ಅದನ್ನು ಎತ್ತಿಕೊಂಡ. ಅದರಲ್ಲಿ ಹೀಗೆ ಬರೆದಿತ್ತು- ಸಂಜೆ ಸಿಹಿನೀರು ಹೊಂಡದ ಬಳಿ. ಸೂರ್ಯ ಮುಳುಗಿ ಬೆಳ್ಳಿ ಚುಕ್ಕಿ ಕಾಣುವಾಗ – ಇದೇನಪ್ಪ ಇದು ಯಾವುದೋ ಸಿನಿಮಾ ನೋಡಿದ ಹಾಗೆ ಆಗ್ತಿದೆ ಎಂದುಕೊಂಡ. ಆದರೂ ಮತ್ತೂಮ್ಮೆ ಸುತ್ತಮುತ್ತ ನೋಡಿದ, ಯಾರೂ ಕಾಣಲಿಲ್ಲ. ಎದ್ದು ಆಟೋ ಒಂದನ್ನು ಹಿಡಿದು ಮನೆಕಡೆ ಹೋದ. ಮನೆಗೆ ಹೋಗಿ ಮುಖವನ್ನು ತೊಳೆಯುವಾಗ, “ಅರೆ ನನ್ನ ಶಾಲು’ ಎಂದು ನೆನಪಿಸಿಕೊಂಡ. “ಥೋ! ಆಟೋದಲ್ಲಿ ಬಿಟ್ಟು ಬಂದಿದ್ದೀನಿ’ ಎಂದು ಕೊಂಡವನೆ, ಸೀದಾ ಹೊರನಡೆದ. “ಪಕ್ಕದ ಓಣಿಯ ಅಂಗಡಿಯವನ ಬಳಿ ಈಗ ಒಂದು ಆಟೋ ಬಂತಲ್ಲ, ಯಾವ ಕಡೆ ಹೋಯಿತು?’ ಎಂದು ಕೇಳಿದ. “ಅರಳೀಕಟ್ಟೆ ಕಡೆ’ ಎಂದ. ಸರಸರನೆ ಅರಳೀಕಟ್ಟೆ ಕಡೆ ನಡೆದ ದಾಪುಗಾಲು ಇಟ್ಟುಕೊಂಡು. ಅಲ್ಲಿ ನಾಲ್ಕಾರು ಆಟೋಗಳು ನಿಂತಿದ್ದವು. ತನ್ನ ಮನೆಯ ದಿಕ್ಕನ್ನು ಅಲ್ಲಿದ್ದವರಿಗೆ ತೋರಿಸಿ, “ಈಗಷ್ಟೇ ಒಂದು ಆಟೋ ಹೋಯ್ತಲ್ಲ, ಯಾವ ಕಡೆ ಹೋಯಿತು?’ ಎಂದು ಕೇಳಿದ. “ಬಸ್‌ಸ್ಟ್ಯಾಂಡಿನ ಕಡೆ ಹೋಯಿತು, ಯಾಕೆ?’ ಎಂದು ಕೇಳಿದರು. “ಅದರಲ್ಲಿ ಒಂದು ಲಗೇಜನ್ನು ಬಿಟ್ಟು ಇಳಿದಿದ್ದೆ, ಅದಕ್ಕೆ’ ಎಂದ. ಅಲ್ಲಿದ್ದವರು ಆ ಆಟೋದವನ ಫೋನ್ ನಂಬರನ್ನು ಕೊಟ್ಟರು. ಅವರಿಂದ ಅದನ್ನು ಇಸಕೊಂಡು, ತನ್ನ ಮೊಬೈಲ್‌ನಿಂದ ಆ ನಂಬರಿಗೆ ಫೋನ್ ಮಾಡಿದ. ರಿಂಗ್ ಆಯಿತು- “ಸರ್ ಈಗ ಸ್ವಲ್ಪಹೊತ್ತಿನ ಮುಂದೆ ನಿಮ್ಮ ಆಟೋದಲ್ಲಿ ಬಂದೆನಲ್ಲ, ಅದರಲ್ಲಿ ಶಾಲನ್ನೇನಾದರೂ ಬಿಟ್ಟಿದ್ದೇನಾ?’ ಅಂತ ಕೇಳಿದ. “ಹಿಂದಿನ ಸೀಟಲ್ಲಿ ನೋಡಿಲ್ಲ, ತಡೀರಿ ನೋಡಿ ಹೇಳ್ತೀನಿ’ ಎಂದು ಹೇಳಿ, “ಹೌದುರೀ, ಶಾಲು ಇದೆ’ ಎಂದ.
“ಹೌದಾ, ಓಹ್ ಸದ್ಯ, ನೀವೀಗ ಎಲ್ಲಿದ್ದೀರಾ ಹೇಳಿ, ನಾನೇ ಅಲ್ಲಿಗೆ ಬರುತ್ತೀನಿ’ ಎಂದ. ಅವನು ಹೇಳಿದ ವಿಳಾಸಕ್ಕೆ ನೇರ ಮತ್ತೂಂದು ಆಟೋವನ್ನು ಹಿಡಿದು ಹೋದ. ಅಲ್ಲಿ ಸುಮಾರು ಆಟೋಗಳು ಇದ್ದವು, ತಾನು ಹೋಗಿದ್ದ ಆಟೋವನ್ನು ಮತ್ತು ಅದರ ಚಾಲಕನನ್ನು ಪತ್ತೆಹಚ್ಚಿ ನೇರ ಅಲ್ಲಿಗೆ ಹೋದ. “ಥ್ಯಾಂಕ್ಸಪ್ಪ ಡ್ರೈವರಣ್ಣ, ಸದ್ಯ ಶಾಲು ಆಟೋದಲ್ಲಿಯೇ ಇತ್ತಲ್ಲ’ ಎಂದು, ತನ್ನ ಶಾಲನ್ನು ಕೇಳಿದ.
“ಅರೆ! ಈಗಿನ್ನೂ ಬಂದು ಈಸಕೊಂಡು ಹೋದ್ರಲ್ರಿ, ಮತ್ತೆ ಬಂದಿದ್ದೀರಾ?’ ಎಂದ. “ಸರ್, ನಾನೇ ಶಾಲು ಕಳೆದುಕೊಂಡಿರೋದು, ಈಗತಾನೆ ಫೋನ್ ಮಾಡಿದ್ದೆನಲ್ಲ, ಅದು ನಾನೇ, ಬೇಕಾದರೆ ಫೋನ್ ನಂಬರ್ ಚೆಕ್ ಮಾಡಿಕೊಳ್ಳಿ’ ಎಂದು ತನ್ನ ಮೊಬೈಲ್ ಫೋನ್ ಅನ್ನು ತೋರಿಸಿದ. “ಸರಿನಪ್ಪ, ಇಲ್ಲ ಅಂದವರ್ಯಾರು, ನೀನೇ ತಾನೆ ಬಂದು ಇಸಕೊಂಡು ಹೋದವನು ಐದು ನಿಮಿಷದ ಮುಂಚೆ, ಈಗ ಮತ್ತೆ ಬಂದಿದ್ದೀರಾ, ನಿಮ್ಮದೊಳ್ಳೆ’ ಎಂದ.
“ಅರೆ! ಫೋನ್ ಮಾಡಿ ಇಪ್ಪತ್ತು ನಿಮಿಷಕ್ಕೆ ಬಂದಿದ್ದೀನಿ. ಮಧ್ಯೆ ಯಾವುದೋ ಒಂದು ಹೆಣ ತೆಗೆದುಕೊಂಡು ಹೋಗ್ತಾ ಇದ್ದರು, ಅದಕ್ಕೆ ಸ್ವಲ್ಪ ತಡವಾಯಿತು ಅಷ್ಟೆ’ ಎಂದ. “ಹೋಗ್ರಿ ಹೋಗ್ರಿ ಯಾರಿಗೆ ಕತೆ ಕಟ್ಟುತ್ತಿದ್ದೀರಾ ಇಲ್ಲಿ, ನಾನೇ ನನ್ನ ಕೈಯಾರೆ ಕೊಟ್ಟಿದ್ದೀನಿ. ನೀವೇ ಬಂದಿದ್ರಿ. ಈಗ ಮತ್ತೆ ಬಂದಿದ್ದೀರಾ’ ಎಂದು ಜೋರು ಮಾಡಿದ. “ಅರೆ ನಾನ್ಯಾವಾಗ ಬಂದದ್ದು!’ ಎಂದು ಹೇಳಿದ ಅವನಿಗೆ ಮತ್ತೆ ಮುಂದಕ್ಕೆ ಮಾತೇ ಹೊರಡದ ಹಾಗೆ ಆಯಿತು.
ಮಳೆ ಒಂದೊಂದೇ ಹನಿ ಬೀಳಲು ಶುರುವಾಯಿತು. ಒಂದು ಗಂಟೆ ಸುರಿದ ಮಳೆ ಸುಮ್ಮನಾಯಿತು. ಮಳೆನೇ ಬಂದಿಲ್ಲವೆನೋ ಎಂಬಂತೆ. ಸೂರ್ಯ ಮುಳುಗುವ ಹೊತ್ತಾಯಿತು. ಸಿಹಿನೀರ ಹೊಂಡದ ಕಡೆ ಹೊರಟ. ಸೂರ್ಯ ತನ್ನ ರಂಗನ್ನು ಚೆಲ್ಲಿ ಪಶ್ಚಿಮ ದಿಕ್ಕಿನಲ್ಲಿ ಮುಳುಗತೊಡಗಿತು. ಅರ್ಧಗಂಟೆ ಆಯಿತು. ಬಣ್ಣ ಕರಗಿ, ಆಕಾಶವನ್ನೆಲ್ಲ ಕಪ್ಪು ಆವರಿಸಿಕೊಳ್ಳತೊಡಗಿತು. ಬೆಳ್ಳಿ ಬಣ್ಣದ ನಕ್ಷತ್ರ ನಿಧಾನ ಕಾಣಿಸಿಕೊಳ್ಳುತ್ತ ಮಿನುಗತೊಡಗಿತು. ಗಾಳಿ ಸಿಹಿನೀರ ಹೊಂಡದಲ್ಲಿನ ನೀರ ಮೇಲೆ ಹಾದು ತಣ್ಣಗೆ ಅವನ ಕೆನ್ನೆಯ ಸವರಿತು.
“ತಾನು ಯಾಕೆ ಬಂದೆ, ಯಾರಿಗಾಗಿ ಬಂದೆ, ಇದೆಲ್ಲ ಏನು’ ಎಂದು ಕ್ಷಣ ತನಗೆ ತಾನೇ ನಾಚಿಕೆಪಟ್ಟುಕೊಂಡನು. ತಕ್ಷಣ ಚೀಟಿಯಲ್ಲಿದ್ದ ದ್ದನ್ನು ನೆನಪಿಸಿಕೊಂಡ. ಒಂದು ಗಂಟೆ ಚಡಪಡಿಸುತ್ತ ಅಡ್ಡಾಡಿದ- ಯಾರಾದರು ಬರುವರಾ ಎಂದು. ಯಾರೂ ಕಾಣಲಿಲ್ಲ. ಎರಡು ಬಿಳಿಯ ಬಾತುಗಳು ನೀರಮೇಲೆ ತೇಲಿಕೊಂಡು ಹೋಗುತ್ತಿದ್ದವು. ವಾಪಸು ತಿರುಗಿಕೊಂಡು ನಡೆದ. ಎದುರಿಗೆ ಒಂದು ಜೋಡಿ ಹಾದು ಹೋಯಿತು. ಜೋಡಿಯ ಒಂದು ವ್ಯಕ್ತಿ ಶಾಲನ್ನು ಹೊದ್ದುಕೊಂಡಿತ್ತು. ಆ ವ್ಯಕ್ತಿ, “ಈ ಶಾಲಿನ ಅಂಚಿನಲ್ಲಿ ಆ ಹೂವು ಎಷ್ಟು ಮೋಹಕವಾಗಿದೆ. ಅಂದರೆ ಆಹಾ ಥೇಟ್ ನಿನ್ನ…’ ಮುಂದಿನ ಮಾತುಗಳನ್ನು ನಗು ತುಂಬಿಕೊಂಡಿತು. ನಗು ಅವನಿಗೆ ಕಲ್ಲಿನ ಬಳಿ ತಾನು ಕೇಳಿಸಿಕೊಂಡ ನಗುವನ್ನು ನೆನಪಿಸಿತು.
ಅವನಿಗೆ ಇವರ ಈ ಮಾತುಗಳು ಅಸ್ಪಷ್ಟವಾಗಿ ಕೇಳುತ್ತಿದ್ದವು- ಅವನು ದೂರ ದೂರ ಸಾಗಿದರೂ.
ಎಚ್.ಆರ್. ರಮೇಶ