ಗ್ರೂಪ್ ಹೆಸರು: ಜೇನಿನ ಗೂಡಿನ ಗೆಳೆಯ- ಗೆಳತಿಯರು…
ಅಡ್ಮಿನ್: ಪವನ್, ಧನುಷ್, ಶರತ್
ಕಾಲೇಜು ಅಂತ ಅಂದಮೇಲೆ ಗೆಳೆಯರೆಲ್ಲ ಸೇರಿಕೊಂಡು, ವಾಟ್ಸಾಪ್ ಗುಂಪು ಕಟ್ಟಿಕೊಂಡು, ಹರಟೋದು ಕಾಮನ್. “ಜೇನಿನ ಗೂಡಿನ ಗೆಳೆಯ- ಗೆಳತಿಯರು’ ಎಂಬ ನಮ್ಮ ಗ್ರೂಪ್ ಕೂಡ ಅಂಥದ್ದೇ ಹರಟೆಕಟ್ಟೆ. ಏನಿಲ್ಲವೆಂದರೂ ನಮ್ಮ ಗ್ರೂಪ್‌ನಲ್ಲಿ ದಿನಕ್ಕೆ 300ರಿಂದ 500 ಮೆಸೇಜ್‌ಗಳು, ಫೋಟೋ - ವಿಡಿಯೋಗಳು ಹರಿದಾಡುತ್ತಿದ್ದವು. ಇದನ್ನೆಲ್ಲ ನೋಡಿ ರೋಸಿ ಹೋಗಿದ್ದ ಗೆಳೆಯನೊಬ್ಬ “ಯಾಕೆ ಅನವಶ್ಯವಾಗಿ ಇಷ್ಟೊಂದು ಮೆಸೇಜ್ ಮಾಡ್ತೀರಾ? ನಿಮ್ಮ ಖಾಸಗಿ ಸಂಗತಿಗಳನ್ನು ಗುಂಪಿನಲ್ಲಿ ಹಾಕುವುದು ಸರಿಯಲ್ಲ’ ಅಂತ ಅಂದಿದ್ದಷ್ಟೇ. ಅಷ್ಟಕ್ಕೇ ಗ್ರೂಪ್‌ನಲ್ಲಿ ಜಗಳ. ಆದರೆ, ಆಗ ನಾನು ಆನ್‌ಲೈನ್‌ನಲ್ಲಿ ಇರಲಿಲ್ಲ. ಜಗಳ ತಾರಕಕ್ಕೇರಿತ್ತು.
ನಾನು ಆನ್‌ಲೈನ್‌ನಲ್ಲಿ ಇರದ ಕಾರಣ ಗೆಳೆಯನೊಬ್ಬ ಕರೆಮಾಡಿ, “ಗ್ರೂಪ್ ಚೆಕ್ ಮಾಡು’ ಎಂದ. ನಾನು “ಏಕೆ? ಏನಾಗಿದೆ?’ ಎಂದೆ. ಅವನು ನೀನೆ ನೋಡು ಗೊತ್ತಾಗುತ್ತೆ’ ಅಂದ. ತಕ್ಷಣ ಆನ್‌ಲೈನ್‌ಗೆ ಬಂದು ನೋಡಿದರೆ ಗ್ರೂಪ್‌ನ ಮೆಸೇಜುಗಳು ಐನೂರರ ಗಡಿಯನ್ನು ದಾಟಿವೆ. ಇರೋ ಮೆಸೇಜನ್ನೇ ಓದಲು ಸಾಧ್ಯವಾಗುತ್ತಿಲ್ಲ. ಇನ್ನೂ ಮೆಸೇಜುಗಳು ಬರುತ್ತಲೇ ಇವೆ. ಕೆಲವರು ಗ್ರೂಪ್‌ನಿಂದ ಲೆಫ್ಟ್ ಆಗುತ್ತಲೇ ಇದ್ದರು. ಜೇನಿನ ಗೂಡಿನಲ್ಲಿದ್ದ ನಮ್ಮ ಗ್ರೂಪ್‌ಗೆ ಕಲ್ಲನ್ನು ಹೊಡೆದಂತಾಗಿತ್ತು. ಗ್ರೂಪ್ ಇಬ್ಭಾಗವಾಗಿ ಹೋಗಿತ್ತು. ನಮ್ಮ ಗೆಳೆಯ- ಗೆಳತಿಯರು “…ಪಾರ್ಟ್ 2′ ಎಂಬ ಗ್ರೂಪ್ ಅನ್ನೂ ರಚಿಸಿಕೊಂಡಿದ್ದರು.
ಅಡ್ಮಿನ್‌ಗಳೆಲ್ಲ ಸೇರಿಕೊಂಡು ಗ್ರೂಪ್‌ನ ಸದಸ್ಯರನ್ನು ಸಮಾಧಾನ ಮಾಡುವಷ್ಟರಲ್ಲಿ ಹೈರಾಣಾಗಿ ಹೋಗಿದ್ದೆವು. ಗ್ರೂಪಿನಲ್ಲಿ ಲೆಫ್ಟ್ ಆದವರನ್ನು ಮತ್ತೆ ಸೇರಿಸಿ, “ಜಗಳ ಮಾಡಬೇಡಿ’ ಎಂದು ಸಮಾಧಾನ ಹೇಳಿದೆವು.
ಪವನ್ ಕುಮಾರ್ ಎಂ., ರಿಪ್ಪನ್‌ಪೇಟೆ