Advertisement

Record; 73 ಸಾವಿರ ಗಡಿ ದಾಟಿದ ಷೇರುಪೇಟೆ:ದಾಖಲೆಯ ಸಂಭ್ರಮ

12:47 AM Jan 16, 2024 | |

ಮುಂಬಯಿ: ಸೋಮವಾರ ಮುಂಬಯಿ ಷೇರುಪೇಟೆಯಲ್ಲಿ ದಾಖಲೆಯ ಸಂಭ್ರಮ. ಬಿಎಸ್‌ಇ ಸೆನ್ಸೆಕ್ಸ್‌ ಇದೇ ಮೊದಲ ಬಾರಿಗೆ 73 ಸಾವಿರದ ಗಡಿ ದಾಟಿದರೆ ನಿಫ್ಟಿ 22 ಸಾವಿರದ ಗಡಿ ದಾಟಿ ಸಾರ್ವಕಾಲಿಕ ದಾಖಲೆ ಬರೆದಿದೆ.

Advertisement

ಐಟಿ ಷೇರುಗಳು, ರಿಲಯನ್ಸ್‌, ಎಚ್‌ಡಿಎಫ್ಸಿ ಬ್ಯಾಂಕುಗಳ ಷೇರುಗಳ ಖರೀದಿಯಲ್ಲಿ ಹೂಡಿಕೆದಾರರು ಭಾರೀ ಆಸಕ್ತಿ ವಹಿಸಿದ ಪರಿಣಾಮವಾಗಿ ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ 759.49 ಅಂಕಗಳ ಏರಿಕೆ ಕಂಡು ದಿನಾಂತ್ಯಕ್ಕೆ 73,327.94ಕ್ಕೆ ತಲುಪುವ ಮೂಲಕ ಸಾರ್ವಕಾಲಿಕ ದಾಖಲೆ ಬರೆಯಿತು. ವಹಿವಾಟಿನ ಮಧ್ಯೆ 833.71 ಅಂಕಗಳಷ್ಟು ಏರಿಕೆಯಾಗಿ, 73,402.16ಕ್ಕೆ ತಲುಪುವ ಮೂಲಕ ಮಧ್ಯಾಂತರದಲ್ಲೂ ಸಾರ್ವಕಾಲಿಕ ದಾಖಲೆ ನಿರ್ಮಿಸಿ ಅನಂತರ ಕೆಳಗಿಳಿಯಿತು. ಇನ್ನು, ನಿಫ್ಟಿ 202.90 ಅಂಕಗಳಷ್ಟು ಏರಿಕೆಯಾಗಿ, ದಿನಾಂತ್ಯಕ್ಕೆ 22,097.45ಕ್ಕೆ ವಹಿವಾಟು ಅಂತ್ಯಗೊಳಿಸಿತು.

9.68 ಲಕ್ಷ ಕೋ.ರೂ. ಲಾಭ

5 ದಿನಗಳಲ್ಲಿ ಸೆನ್ಸೆಕ್ಸ್‌ 1,972.72 ಅಂಕಗಳಷ್ಟು ಏರಿಕೆ ಕಂಡಿದೆ. ಇದರಿಂದ ಬಿಎಸ್‌ಇಯಲ್ಲಿ ಲಿಸ್ಟ್‌ ಆಗಿರುವ ಕಂಪೆನಿಗಳ ಒಟ್ಟು ಮಾರುಕಟ್ಟೆ ಮೌಲ್ಯ 376 ಲಕ್ಷ ಕೋಟಿ ರೂ.ಗೆ ಏರಿದೆ. ಪರಿಣಾಮವಾಗಿ 5 ದಿನಗಳಲ್ಲಿ ಷೇರುಪೇಟೆ ಹೂಡಿಕೆದಾರರ ಸಂಪತ್ತು 9.68 ಲಕ್ಷ ಕೋಟಿ ರೂ.ಗಳಷ್ಟು ಹೆಚ್ಚಳವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next