Advertisement

ಯೋಗಾಪುರದಲ್ಲಿ ಕನಕದಾಸರ ಮೂರ್ತಿ ಪ್ರತಿಷ್ಠಾಪನೆ

09:40 PM Dec 30, 2021 | Girisha |

ವಿಜಯಪುರ: ವಿಜಯಪುರದ ಯೋಗಾಪುರದಲ್ಲಿ ಶ್ರೀ ಕನಕದಾಸರ ಮೂರ್ತಿ ಪ್ರತಿಷ್ಠಾಪನೆ ಹಾಗೂ ಶ್ರೀ ಕನಕದಾಸರ ಕುರಿತಾದ ಚಿಂತನಗೋಷ್ಠಿ ನಡೆಯಿತು. ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಭಕ್ತ ಕನಕದಾಸರ ಮೂರ್ತಿ ಭವ್ಯ ಮೆರವಣಿಗೆ ವೈಭವದಿಂದ ನಡೆಯಿತು.

Advertisement

ಕುಂಭಮೇಳ, ಸಕಲ ವಾದ್ಯ-ವೈಭವದೊಂದಿಗೆ ಮೆರವಣಿಗೆ ಶ್ರೀ ಪವಾಡ ಬಸವೇಶ್ವರ ದೇವಸ್ಥಾನದಿಂದ ಆರಂಭಗೊಂಡಿತು. ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ಕನಕದಾಸ ವೃತ್ತಕ್ಕೆ ತಲುಪಿ ಸಂಪನ್ನಗೊಂಡಿತು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ದೇವಾನಂದ ಚವ್ಹಾಣ, ಭಕ್ತ ಕನಕದಾಸರ ಮಹಾನ್‌ ಸಂತರು, ಅವರ ಆದರ್ಶವನ್ನು ಎಲ್ಲರೂ ಪಾಲಿಸಬೇಕು. ದಾಸರ, ಸಂತರ ಹಾಗೂ ಸ್ವಾತಂತ್ರÂ ಹೋರಾಟಗಾರರ ಮೂರ್ತಿಗಳನ್ನು ಸ್ಥಾಪನೆಯನ್ನು ಮಾಡುವುದು ನಮ್ಮ ಪರಂಪರೆ ಎಂದರು. ನಮ್ಮ ಪೂರ್ವಜ ದಾರ್ಶನಿಕರ ಆದರ್ಶದ ಸವಿ ನೆನಪು ಉಳಿಯಲು ಇಂತಹ ಕಾರ್ಯಕ್ರಮಗಳ ಅಗತ್ಯವಿದೆ.

3 ಲಕ್ಷ ರೂ. ಅನುದಾನದಲ್ಲಿ ದಾಸಶ್ರೇಷ್ಠ ಕನಕದಾಸರ ಮೂರ್ತಿ ಸ್ಥಾಪಿಸಲಾಗುತ್ತಿದೆ. ನಗರದ ಇನ್ನೂ ಅನೇಕ ಸಮಸ್ಯೆಗಳನ್ನು ರಸ್ತೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಹತ್ತು ಹಲವಾರು ಸಮಸ್ಯೆ ಈಡೇರಿಸುವ ಸಂಕಲ್ಪ ಮಾಡಿದ್ದೇನೆ ಎಂದರು. ಮಖಣಾಪುರ ಗುರುಪೀಠದ ಸೋಮೇಶ್ವರ ಮಹಾರಾಜರು, ಹುಲಜಂತಿಯ ಮಾಳಿಂಗರಾಯ ಮಹಾರಾಜರು, ಶಿವಣಗಿಯ ಅಮೋಘ ಸಿದ್ದೇಶ್ವರ ಮಾಹಾರಾಜರು, ಯೋಗಾಪುರ ಬೀರಲಿಂಗೇಶ್ವರ ಮಾಹಾರಾಜರು, ಮಾನಪ್ಪ ಸೋಮು ಕಪೆì, ಬಾಬು ಕಪೆì, ಶಿವಾನಂದ ಹಿರೇಕುರಬರ ಮಾತನಾಡಿದರು.

ಬಿ.ಡಿ. ಪಾಟೀಲ, ಶಿಲ್ಪಾ ಕುದರಗೊಂಡ, ಪ್ರೊ| ಮೋಹನ ಮೇಟಿ, ಚೆನ್ನಬಸಪ್ಪ ಮರೆಗುದ್ದಿ, ರಮೇಶ್‌ ಬಸವಪ್ರಭ ಯೋಗಿ, ಮೋಹನಸಿಂಗ್‌ ರಜಪೂತ, ಹಣಮಂತ ಬೊಳೆಗಾಂವ, ಮಡಿವಾಳಪ್ಪ ಉಕ್ಕಲಿ, ಪ್ರವೀಣ ಸೊಲ್ಲಾಪುರ, ಪೀರಪ್ಪ ವಾಲಿಕಾರ, ಸಿದ್ದಣ್ಣಗೌಡ ಪೋಲಿಸ್‌ ಪಾಟೀಲ, ಪೀರಭಾಷಾ ಗಚ್ಚಿನಮಹಲ, ಧರೆಪ್ಪ ಅರ್ಧವರ, ಮಲ್ಲಿಕಾರ್ಜುನ ಹಿಪ್ಪರಗಿ, ಪ್ರಭು ಪರಸನಹಳ್ಳಿ, ಬಾಬು ಹಿಪ್ಪರಗಿ ಉಪಸ್ಥಿತರಿದ್ದರು

 

Advertisement

 

Advertisement

Udayavani is now on Telegram. Click here to join our channel and stay updated with the latest news.

Next