Advertisement
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾರ್ಗದರ್ಶನದಂತೆ ಅಣ್ಣೂರು ಗ್ರಾಪಂ ಅಂತರ್ಜಾಲ ತಾಣ ರಚನೆಯಾಗಿದೆ. ಇಲ್ಲಿರುವ ಎಲ್ಲಾ ಮಾಹಿತಿಯೂ ಸಂಪೂರ್ಣ ಕನ್ನಡಮಯವಾಗಿದೆ. ಪಂಚಾಯಿತಿ ಕಾರ್ಯ ಚಟುವಟಿಕೆ, ಪ್ರಗತಿಯ ವಿವರ, ಸಂಕಲ್ಪ, ಪಂಚಾಯಿತಿ ಪರಿಚಯ, ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಅಧಿಕಾರಿ- ಸಿಬ್ಬಂದಿ ವರ್ಗದವರ ಮಾಹಿತಿಯೂ ಸೇರಿದಂತೆ ಪಂಚಾಯಿತಿ ಪ್ರತಿಯೊಂದು ಮಾಹಿತಿ ಯನ್ನೂ ಅಂತರ್ಜಾಲದಲ್ಲಿ ಅಡಗಿಸಿಕೊಂಡು ಎಲ್ಲರ ಗಮನ ಸೆಳೆಯುತ್ತಿದೆ.
Related Articles
Advertisement
ಸಂಪೂರ್ಣ ವಿವರ: ಬಟ್ಟೆ ಬ್ಯಾಗ್ ಮೇಲೆ ಬರೆದಿರುವ ಸ್ವಚ್ಛ ಮೇವ ಜಯತೆ ಕಲಂ ಕ್ಲಿಕ್ ಮಾಡಿದರೆ ಪ್ಲಾಸ್ಟಿಕ್ ಬಳಕೆ ನಿರ್ಮೂಲನೆಗೆ ಮಾಡಿರುವ ಸಂಕಲ್ಪ, ಪ್ಲಾಸ್ಟಿಕ್ ನಿಷೇಧ ಸೇರಿ ಘನತ್ಯಾಜ್ಯ ನಿರ್ವಹಣೆ ಸಂಬಂಧ ಪಂಚಾಯಿತಿ ಕೈಗೊಂಡಿರುವ ಕ್ರಮಗಳ ಸಂಪೂರ್ಣ ವಿವರವನ್ನು ನೀಡಲಾಗಿದೆ. ಪ್ಲಾಸ್ಟಿಕ್ ನಿಷೇಧ ಸೇರಿದಂತೆ ಘನತ್ಯಾಜ್ಯ ನಿರ್ವಹಣೆ ಸಂಬಂಧ ಉಪವಿಧಿಗಳನ್ನು ರಚಿಸಿ ಜಿಪಂ ಸಾಮಾನ್ಯ ಸಭೆಯಿಂದ ಅನುಮೋದನೆ ಪಡೆದ ಜಿಲ್ಲೆಯ ಮೊದಲ ಗ್ರಾಮ ಪಂಚಾಯತ್ ಎನ್ನುವ ಹೆಗ್ಗಳಿಕೆಗೂ ಪಾತ್ರವಾಗಿದೆ. ಇನ್ನುಳಿದಂತೆ ಪಂಚಾಯಿತಿ ಸಾಮಾನ್ಯ ಮಾಹಿತಿ, ಪ್ರಗತಿಯ ವರದಿ, ಸಭಾ ನಡವಳಿ, ಮಾಹಿತಿ ಹಕ್ಕು, ಯಶೋಗಾಥೆ, ಚಿತ್ರಸಂಪುಟ ಸೇರಿದಂತೆ ಎಲ್ಲ ವಿವರಗಳನ್ನು ದಾಖಲಿಸಲಾಗಿದೆ. ಜನಸಾಮಾನ್ಯರಿಗೆ ಪ್ರತಿಯೊಂದು ಮಾಹಿತಿ ಯೂ ಸಿಗುವಂತೆ ರೂಪಿಸಲಾಗಿದೆ. ಪಂಚಾಯಿತಿಯ ಅಂತರ್ಜಾಲ ತಾಣಗಳಲ್ಲೇ ವಿಶಿಷ್ಟ ಸೊಬಗಿನೊಂದಿಗೆ ಮಾತೃಭಾಷೆ ಯಲ್ಲಿ ಮಾಹಿತಿಯನ್ನೊಳಗೊಂಡು ಕನ್ನಡದ ಕಹಳೆ ಮೊಳಗಿಸುತ್ತಿರುವುದು ವಿಶೇಷವಾಗಿದೆ.
ಅಣ್ಣೂರು ಗ್ರಾಮ ಪಂಚಾಯತ್‌ನ ಮಾಹಿತಿ ಹಾಗೂ ಕಾರ್ಯಚಟುವಟಿಕೆಗಳು ಅಂತರ್ಜಾಲ ತಾಣಕ್ಕೆ ವಿಸ್ತರಿಸಿರುವುದು ಸಂತೋಷದ ವಿಚಾರ. ಮಾಹಿತಿ ಎಲ್ಲವೂ ಸಂಪೂರ್ಣ ಕನ್ನಡಮಯವಾಗಿರುವುದು ಜಾಲ ತಾಣದ ಸೊಬಗನ್ನು ಹೆಚ್ಚಿಸಿದೆ. ಪಂಚಾಯತ್ ಹಲವು ಸಾಧನೆಗಳೊಂದಿಗೆ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದೇವೆ. ಈ ಹಿಂದೆ ಬಯಲು ಬಹಿರ್ದೆಸೆ ಮುಕ್ತ ಗ್ರಾಪಂ ರೂಪಿಸಲು ಕಾರ್ಯಯೋಜನೆಗಳನ್ನು ರೂಪಿಸಿ ಯಶಸ್ಸು ಸಾಧಿಸಿದ ಮಾದರಿಯಲ್ಲೇ ಪ್ಲಾಸ್ಟಿಕ್ ನಿಷೇಧ ಸೇರಿದಂತೆ ಘನತ್ಯಾಜ್ಯ ನಿರ್ವಹಣೆಯನ್ನು ವ್ಯವಸ್ಥಿತವಾಗಿ ಕೈಗೊಳ್ಳಲು ಪಣತೊಟ್ಟಿದ್ದೇವೆ. ಎಲ್ಲರಿಂದ ಎಲ್ಲರೂ ಸೇರಿ ಯಶಸ್ಸು ಸಾಧಿಸುತ್ತೇವೆ ಎಂಬ ಆತ್ಮವಿಶ್ವಾಸ ನಮ್ಮದಾಗಿದೆ. –ಎಂ.ಆರ್.ಅಶ್ವಿನಿ, ಪಿಡಿಒ, ಅಣ್ಣೂರು ಗ್ರಾಪಂ
ಅಣ್ಣೂರು ಗ್ರಾಪಂಗೆ ಸಂದಿರುವ ಪ್ರಶಸ್ತಿಗಳು: ಪ್ರಶಸ್ತಿಗಳು ಎಂದಿರುವ ವಿಶೇಷ ಕಲಂನಲ್ಲಿ ಅಣ್ಣೂರು ಗ್ರಾಪಂಗೆ ದೊರಕಿರುವ ನಿರ್ಮಲ ಗ್ರಾಮ ಪುರಸ್ಕಾರ, ಗಾಂಧಿ ಗ್ರಾಮ ಪುರಸ್ಕಾರ, ಬಯಲು ಬಹಿರ್ದೆಸೆ ಮುಕ್ತ ಪಂಚಾಯಿತಿ, ನಮ್ಮ ಗ್ರಾಮ ನಮ್ಮ ಯೋಜನೆ ಸ್ತ್ರೀ ಪ್ರಗತಿ ಮತ್ತು ಎಸ್.ಡಿ.ಜಯರಾಮ್ ಹೆಸರಿನಲ್ಲಿ ನೀಡಿರುವ ಜಿಲ್ಲಾಮಟ್ಟದ ಪ್ರಶಸ್ತಿಗಳನ್ನು ಚಿತ್ರ ಸಹಿತ ದಾಖಲಿಸಲಾಗಿದೆ.
-ಮಂಡ್ಯ ಮಂಜುನಾಥ್