Advertisement

ರಾಜ್ಯದ ಪ್ರಥಮ ಕತ್ತೆ ಸಾಕಾಣಿಕೆ ಕೇಂದ್ರ; ಜೂ. 8: ಬಂಟ್ವಾಳದ ಇರಾದಲ್ಲಿ ಉದ್ಘಾಟನೆ

11:42 PM Jun 05, 2022 | Team Udayavani |

ಬಂಟ್ವಾಳ: ಬಂಟ್ವಾಳದ ಇರಾದಲ್ಲಿ ದೇಶದ 2ನೇ ಹಾಗೂ ಕರ್ನಾಟಕದ ಪ್ರಥಮ ಬೃಹತ್‌ ಕತ್ತೆ ಸಾಕಾಣಿಕೆ ಹಾಗೂ ಮಾದರಿ ತರಬೇತಿ ಕೇಂದ್ರ ಆರಂಭಕ್ಕೆ ಎಲ್ಲ ರೀತಿಯ ಸಿದ್ಧತೆಗಳು ನಡೆದಿದ್ದು, ಜೂ. 8ರಂದು ವಿವಿಧ ಕ್ಷೇತ್ರದ ಗಣ್ಯರು, ಅಧಿಕಾರಿಗಳ ಸಮ್ಮುಖದಲ್ಲಿ ಕೇಂದ್ರ ಆರಂಭಗೊಳ್ಳಲಿದೆ.

Advertisement

ಐಸಿರಿ ಫಾಮ್ಸ್‌ì ಅವರ ಮೂಲಕ ಸಮಗ್ರ ಕೃಷಿ ಮತ್ತು ಪಶು ಸಂಗೋಪನೆ, ಪಶು ವೈದ್ಯಕೀಯ ಸೇವೆಗಳು, ತರಬೇತಿ ಮತ್ತು ಮೇವು ಅಭಿವೃದ್ಧಿ ಸಂಸ್ಥೆಯ ಸಹಯೋಗದಲ್ಲಿ ಕೇಂದ್ರ ಅನುಷ್ಠಾನಗೊಳ್ಳಲಿದ್ದು, ರಾಮನಗರ ಮೂಲದ ಸಾಫ್ಟ್‌ವೇರ್‌ ಎಂಜಿನಿಯರ್‌ ಶ್ರೀನಿವಾಸ ಗೌಡ ಅವರ ಮಾಲಕತ್ವದಲ್ಲಿ ಕೇಂದ್ರ ಕಾರ್ಯಾಚರಿಸಲಿದೆ. ಕತ್ತೆ ಹಾಲು ಶ್ರೇಷ್ಠ ಪೌಷ್ಟಿಕಾಂಶವನ್ನು ಒಳಗೊಂಡಿರುವ ಜತೆಗೆ ಬಹಳ ದುಬಾರಿಯಾಗಿದ್ದು, ಹೀಗಾಗಿ ಹೆಚ್ಚಿನ ಬೇಡಿಕೆ ಪಡೆದುಕೊಂಡಿದೆ.

ಎಲ್ಲ ರೀತಿಯ ಸಿದ್ಧತೆಗಳೊಂದಿಗೆ ಈಗಾಗಲೇ 20 ಕತ್ತೆಗಳ ಮೂಲಕ ಕೇಂದ್ರವನ್ನು ಆರಂಭಿಸುತ್ತಿದ್ದು, ಉದ್ಘಾಟನೆಗೆ ರಾಜ್ಯದ ಪಶು ಸಂಗೋಪನಾ ಸಚಿವರು ಆಗಮಿಸಬೇಕಿತ್ತು. ಆದರೆ ಅವರು ರಾಜ್ಯಸಭಾ ಚುನಾವಣೆಯ ಬಳಿಕ ಜೂ. 15ರ ಸುಮಾರಿಗೆ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ. ಜೂ. 8ರಂದು ವಿಧಾನಸಭಾ ವಿಪಕ್ಷ ಉಪನಾಯಕ, ಶಾಸಕ ಯು.ಟಿ. ಖಾದರ್‌ ಸೇರಿದಂತೆ ಪಶು ಸಂಗೋಪನ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಉದ್ಘಾಟನೆ ನೆರವೇರಲಿದೆ ಎಂದು ಕೇಂದ್ರದ ಮಾಲಕ ಶ್ರೀನಿವಾಸ ಗೌಡ ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next